ಚಿಕ್ಕಮಗಳೂರು: ಆರ್ಮಿ ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ!
ಸೇನೆಗೆ ಸೇರುವ ಮಹದಾಸೆ ಹೊಂದಿದ್ದ ಯುವಕನೋರ್ವ ಭೂ ಸೇನೆ ಪರೀಕ್ಷೆಯಲ್ಲಿ ಅನುತ್ತೀರ್ಣ ಆಗಿದ್ದಕ್ಕೆ ಡೆತ್‌ನೋಟು ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲ್ಲೂಕಿನ ಕಿಗ್ಗಾದ ಯಡದಾಳು ಗ್ರಾಮದಲ್ಲಿ ನಡೆದಿದೆ.
ಚಿಕ್ಕಮಗಳೂರು (ಫೆ.29): ಸೇನೆಗೆ ಸೇರುವ ಮಹದಾಸೆ ಹೊಂದಿದ್ದ ಯುವಕನೋರ್ವ ಭೂ ಸೇನೆ ಪರೀಕ್ಷೆಯಲ್ಲಿ ಅನುತ್ತೀರ್ಣ ಆಗಿದ್ದಕ್ಕೆ ಡೆತ್‌ನೋಟು ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲ್ಲೂಕಿನ ಕಿಗ್ಗಾದ ಯಡದಾಳು ಗ್ರಾಮದಲ್ಲಿ ನಡೆದಿದೆ.
ಮೃತಪಟ್ಟರನ್ನು ಶೃಂಗೇರಿ ತಾಲ್ಲೂಕಿನ ಕಿಗ್ಗಾ ಸಮೀಪದ ಯಡದಾಳು ಗ್ರಾಮದ ಕಾರ್ತಿಕ್(22) ಗುರುತಿಸಲಾಗಿದ್ದು, ಯುವಕ ಸೇನೆಗೆ ಸೇರಲು ನಿರಂತರ ಪ್ರಯತ್ನ ಮಾಡುತ್ತಿದ್ದ ಆದರೆ ಕಳೆದವಾರ ಬರೆದ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿದ್ದಾನೆ. ಇದರಿಂದ ಮನನೊಂದು ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬೇರೆ ಹುಡುಗಿ ಜೊತೆ ಗಂಡನ ಮದುವೆ, ಮನನೊಂದು ಮಹಿಳೆ ಆತ್ಮಹತ್ಯೆ: ನ್ಯಾಯಕ್ಕಾಗಿ ಕುಟುಂಬಸ್ಥರ ಹೋರಾಟ
ಭೂ ಸೇನೆಗೆ ಸೇರಬೇಕೆಂದು 2-3 ವರ್ಷಗಳಿಂದ ತಯಾರಿ ನಡೆಸಿದ್ದನು, ಸಾಯುವ ಮೊದಲು ಡೆತ್ ನೋಟ್ ಬರೆದಿಟ್ಟಿರುವ ಕಾರ್ತಿಕ್ ನನ್ನ ತಂದೆ ತಾಯಿಗೆ ಉತ್ತರ ಹೇಳುವ ಧೈರ್ಯ ನನಗೆ ಇಲ್ಲ ಪತ್ರದಲ್ಲಿ ಬರೆದಿದ್ದಾನೆ. ಸೇನಾ ನೇಮಕಾತಿ ಬಗ್ಗೆಯೂ ಡೆತ್ ನೋಟ್ ನಲ್ಲಿ ಬರೆಯಲಾಗಿದೆ. ಘಟನೆ ಸಂಬಂಧ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಇಬ್ಬರು ಮಕ್ಕಳ ಕತ್ತು ಹಿಸುಕಿ ಕೊಂದು, ತಾನೂ ನೇಣಿಗೆ ಶರಣಾದ ತಾಯಿ