ಕರ್ನಾಟಕ: ಪ್ರತ್ಯೇಕ ಘಟನೆಯಲ್ಲಿ 5 ಜನರು ನೀರು ಪಾಲು..!

ಪ್ರತ್ಯೇಕ ಘಟನೆಯಲ್ಲಿ ಒಟ್ಟು ಐವರು ನೀರು ಪಾಲಾಗಿರುವ ಘಟನೆ ರಾಜ್ಯದಲ್ಲಿ ನಡೆದಿದೆ. ಯಾದಗಿ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಈ ಅವಘಟ ಸಂಭವಿಸಿದೆ.

Yadgir 3 and Shivamogga 2 Total 5 Peoples drown In Water rbj

ಯಾದಗಿ/ಶಿವಮೊಗ್ಗ, (ಅ.03): ಯಾದಗಿರಿ ಜಿಲ್ಲೆಯಲ್ಲಿ ಮೂವರು ಹಾಗೂ ಶಿವಮೊಗ್ಗದಲ್ಲಿ ಇಬ್ಬರು ಒಟ್ಟು ಐವರು ನೀರು ಪಾಲಾಗಿರುವ ಘಟನೆ ನಡೆದಿದೆ.

 ಯಾದಗಿರಿಯಲ್ಲಿ ಮೂವರು
ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ನಜರಾಪುರ ಬಳಿಯ ಧಬೆ ಧಬೆ ಫಾಲ್ಸ್​ ನೋಡಲು ಬಂದಿದ್ದ ಮೂವರು ಯುವಕರು ನೀರುಪಾಲಾಗಿದ್ದಾರೆ.

ಉದ್ಘಾಟನೆಗೊಂಡಿತು ಅಟಲ್ ಟನಲ್, ಮತ್ತೆ ಹತ್ರಾಸ್‌ಗೆ ರಾಹುಲ್: ಅ.3ರ ಟಾಪ್ 10 ಸುದ್ದಿ!

ಯುವಕರು ತೆಲಂಗಾಣದ ಹೈದರಾಬಾದ್ ಮೂಲದವರು ಎಂದು ತಿಳಿದುಬಂದಿದೆ. ಎತ್ತರದಿಂದ ಧುಮ್ಮಿಕ್ಕುವ ನೀರು ನೋಡಲು ಬಂದಿದ್ದ ಯುವಕರ ಗುರುತು ಇನ್ನೂ ತಿಳಿದು ಬಂದಿಲ್ಲ. ಓರ್ವ ಯುವಕನ ಶವ ಪತ್ತೆಯಾಗಿದ್ದು, ಇನ್ನು ಇಬ್ಬರ ಶವಗಳಿಗಾಗಿ ಶೋಧಕಾರ್ಯ ನಡೆಸಲಾಗುತ್ತಿದೆ. ಸ್ಥಳಕ್ಕೆ ಗುರುಮಠಕಲ್ ಪೊಲೀಸರು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ.

ಶಿವಮೊಗ್ಗದಲ್ಲಿ ಇಬ್ಬರು
ಭದ್ರಾ ನದಿಯಲ್ಲಿ ಈಜಲು ಹೋಗಿ ನೀರಿನ ಸುಳಿಗೆ ಸಿಲುಕಿ ಇಬ್ಬರು ಯುವಕರು ಸಾವನ್ನಪ್ಪಿ ಓರ್ವನನ್ನು ರಕ್ಷಿಸಿದ ಘಟನೆ ಭದ್ರಾವತಿಯ ದೊಡ್ಡ ಗೋಪೇನಹಳ್ಳಿ ಬಳಿಯ ಗೋಂಧಿ ಚಾನಲ್ ಆಂಜನೇಯ ಬಂಡೆ ಬಳಿ ಘಟನೆ ಶನಿವಾರ ನಡೆದಿದೆ.

ಘಟನೆಯಲ್ಲಿ ಭದ್ರಾವತಿ ಜನ್ನಾಪುರದ ರಾಜೇಶ್ (38) ಹಾಗೂ ಮನೋಜ್ (17) ಮೃತಪಟ್ಟವರಾಗಿದ್ದಾರೆ. ಒಟ್ಟು 9 ಯುವಕರ ತಂಡ ಸೈಕಲಿನಲ್ಲಿ ಭದ್ರಾ ನದಿಯ ಬಳಿ ಈಜಲು ತೆರಳಿದ್ದು ಎಲ್ಲರೂ ನೀರಿನಲ್ಲಿ ಈಜಲು ಇಳಿದಿದ್ದಾರೆ. 

ಈ ಪ್ರದೇಶದಲ್ಲಿ ಭಾರೀ ಗಾತ್ರದ ಸುಳಿಯಿದ್ದು ಒಂಬತ್ತು ಯುವಕರಲ್ಲಿ ಮನೋಜ್ ಎಂಬಾತ ನದಿಯ ಸುಳಿಗೆ ಸಿಲುಕಿ ಮುಳುಗಲಾರಂಭಿಸಿದ್ದಾನೆ. ಈ ವೇಳೆ ರಾಜೇಶ್ ಎನ್ನುವವರು ರಕ್ಷಣೆಗೆ ಧಾವಿಸಿ, ಬಟ್ಟೆ ಕಟ್ಟಿ ಎಳೆಯಲು ಪ್ರಯತ್ನಿಸಿದ್ದಾರೆ ಆದರೆ, ಅವರೂ ಸಹ ನೀರಿನ ಸುಳಿಗೆ ಸಿಲುಕಿ ಬಲಿಯಾಗಿದ್ದಾರೆ.

ಇದೇ ವೇಳೆ ನೀರಿನಲ್ಲಿ ಸಿಲುಕಿದ್ದ 13 ವರ್ಷದ ಕಾರ್ತಿಕ್ ಎನ್ನುವ ಬಾಲಕನನ್ನು ಇತರರು ಸೇರಿ ರಕ್ಷಣೆ ಮಾಡಿದ್ದಾರೆ. ಈ ಬಗ್ಗೆ ಭದ್ರಾವತಿ ಕಾಗದ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Videos
Follow Us:
Download App:
  • android
  • ios