Asianet Suvarna News Asianet Suvarna News

ಕೋಲಾರ ಗಣಿ ಸ್ಫೋಟಕ್ಕೆ ಯಾದಗಿರಿ ಮೂಲದ ಓರ್ವ ಕಾರ್ಮಿಕ ಬಲಿ!

ಕೋಲಾರ ಕಲ್ಲು ಗಣಿಗಾರಿಕೆಯಲ್ಲಿ  ಬ್ಲಾಸ್ಟಿಂಗ್ ವೇಳೆ ಕಾರ್ಮಿಕನೊಬ್ಬ ಮೃತಪಟ್ಟಿದ್ದು ಮತ್ತೊಬ್ಬ ಕಾರ್ಮಿಕ ಗಾಯಗೊಂಡಿರುವ ಘಟನೆ ನಡೆದಿದೆ.

Worker killed another injured in stone quarry blast in Kolara gow
Author
First Published May 26, 2023, 9:18 PM IST

ವರದಿ : ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್ 

ಕೋಲಾರ (ಮೇ.26): ಅದು ಹಲವು ವಿವಾದಗಳ ನಡುವೆ ನಡೆಯುತ್ತಿರುವ ಕಲ್ಲು ಗಣಿಗಾರಿಕೆ, ಆದರೆ ಅಕ್ರಮವಾಗಿ ನಡೆಯುತ್ತಿದ್ದ ಆರೋಪ ಹೊತ್ತಿದ್ದ ಗಣಿಗಾರಿಕೆಗೆಯಲ್ಲಿ ಕಳೆದ ರಾತ್ರಿ ಬ್ಲಾಸ್ಟಿಂಗ್ ವೇಳೆ ಕಾರ್ಮಿಕನೊಬ್ಬ ಮೃತಪಟ್ಟಿದ್ದು ಮತ್ತೊಬ್ಬ ಕಾರ್ಮಿಕ ಗಾಯಗೊಂಡಿದ್ದಾನೆ, ಆದರೆ ಕಳೆದ ರಾತ್ರಿ ಕಾರ್ಮಿಕನೊಬ್ಬ ಮೃತಪಟ್ಟಿದ್ದಾನೆ  ಆಗ್ರಾಮಸ್ಥರು ಗಣಿಗಾರಿಕೆಯ ಅಬ್ಬರಕ್ಕೆ ನಿತ್ಯ ಸತ್ತು ಬದುಕುವಂತಾಗಿದೆ.

ಬೆಟ್ಟವನ್ನು ಕೊರೆದು ಪಾತಾಳ ಕಾಣುವಂತೆ ನಡೆದಿರುವ ಕಲ್ಲು ಗಣಿಗಾರಿಕೆ, ಮತ್ತೊಂದೆಡೆ ಮೃತಪಟ್ಟ ಕಾರ್ಮಿಕನ ಗುರುತು ಸಿಗದಂತೆ ರಕ್ತಮಿಶ್ರಿತ ಮಣ್ಣನ್ನು ಪಕ್ಕದಲ್ಲಿ ಬಿಸಾಡಿರುವ ಕ್ವಾರಿ ಮಾಲೀಕರು, ಮತ್ತೊಂದೆಡೆ ಆತಂಕದಿಂದ ಕಲ್ಲುಗಣಿಗಾರಿಕೆ ಪ್ರದೇಶವನ್ನು ವೀಕ್ಷಣೆ ಮಾಡುತ್ತಿರುವ ಗ್ರಾಮಸ್ಥರು ಇದೆಲ್ಲಾ ದೃಷ್ಯಗಳು ಕಂಡು ಬಂದಿದ್ದು ಕೋಲಾರ ತಾಲ್ಲೂಕು ಕೆ.ಬಿ.ಹೊಸಹಳ್ಳಿ ಗ್ರಾಮದಲ್ಲಿ. ಕಳೆದ ರಾತ್ರಿ ಕೆ.ಬಿ.ಹೊಸಹಳ್ಳಿ ಗ್ರಾಮದ ಬಳಿ ಮುಜೀಬ್​​, ಬೈಯಣ್ಣ, ನಂದೀಶ್​ಗೌಡ, ಎಂಬ ಮೂರು ಜನರಿಗೆ ಗಣಿ ಮತ್ತು ಭೂ ವಿಜ್ನಾನ ಇಲಾಖೆಯಿಂದ ಕಲ್ಲುಗಣಿ ಗುತ್ತಿಗೆ ನೀಡಿದೆ.

ಕಳೆದ ಹಲವು ವರ್ಷಗಳಿಂದ ಈ ಪ್ರದೇಶ ನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಹತ್ತಿರವಿರುವ ಕಾರಣ, ಹಾಗೂ ಕೆ.ಬಿ.ಹೊಸಹಳ್ಳಿ ಗ್ರಾಮಕ್ಕೆ ಮಾರಕವಾಗಿದೆ ಕಾರಣಕ್ಕೆ ಇಲ್ಲಿ ಗಣಿಗಾರಿಕೆ ನಡೆಯದಂತೆ ಹಲವು ವಿರೋಧ ವ್ಯಕ್ತವಾಗುತ್ತಲೇ ಇದೆ. ಜೊತೆಗೆ ಗಣಿ ಮತ್ತು ಭೂ ವಿಜ್ನಾನ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ ಇಲ್ಲಿ ಗಣಿಗಾರಿಕೆ ಮಾಡಲಾಗುತ್ತಿದೆ ಅನ್ನೋ ಆರೋಪ ಗ್ರಾಮಸ್ಥರದ್ದು.

ಈ ನಡುವೆ ಮುಜೀಬ್​ ಎಂಬುವರಿಗೆ ಸೇರಿದ ಕಲ್ಲುಗಣಿ ಗುತ್ತಿಗೆ ಪ್ರದೇಶದಲ್ಲಿ ಬ್ಲಾಸ್ಟಿಂಗ್ ವೇಳೆಯಲ್ಲಿ ಕಲ್ಲು ಸಿಡಿದು ಯಾದಗಿರಿ ಮೂಲದ ಸೋಮು ಯಾದವ್ ಎಂಬ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟರೆ ಗೋಪಿ ಎಂಬಾತನಿಗೆ ಗಂಭೀರ ಗಾಯಗಳಾಗಿವೆ. ಕಲ್ಲುಕ್ವಾರಿ ಬ್ಲಾಸ್ಟ್​ ಮಾಡಿದ ಸುಮಾರು 250 ಮೀಟರ್​ಗೂ ದೂರದಲ್ಲಿದ್ದ ಕಾರ್ಮಿಕರ ಮೇಲೆ ಕಲ್ಲು ಬಂದು ಬಿದ್ದಿದೆ, ಈ ವೇಳೆ ಸ್ಥಳದಲ್ಲೇ ಯಾದಗಿರಿ ಮೂಲದ ಸೋಮು ಜಾದವ್​ ಮೃತಪಟ್ಟಿದ್ದಾನೆ,ಜೊತೆಯಲ್ಲಿದ್ದ ಗೋಪಿಗೆ ಗಂಭೀರ ಗಾಯಗಳಾಗಿವೆ.

ಇನ್ನು ಸ್ಥಳಕ್ಕೆ ಬಂದ ಕ್ವಾರಿ ಮಾಲೀಕರು ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸಿ ಶವವನ್ನು ಅಲ್ಲಿಂದ ತೆಗೆದು ಗಾಯಾಳುವನ್ನು ಹೊಸಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಮೃತಪಟ್ಟ ಜಾಗದ ರಕ್ತ ಮಿಶ್ರಿತ ಮಣ್ಣನ್ನು ತೆಗೆದು ಎಸೆಯಲಾಗಿದೆ ಅನ್ನೋ ಆರೋಪಗಳು ಕೇಳಿಬರುತ್ತಿದೆ. ಮುಂಜಾನೆ ವೇಳೆಗೆ ಸ್ಥಳಕ್ಕೆ ಬಂದ ಕುಟುಂಬಸ್ಥರು ವೇಮಗಲ್​ ಪೊಲೀಸರು ಬಂದ ನಂತರ ಪ್ರಕರಣ ಬಯಲಾಗಿದೆ. ವಿಷಯ ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು ಇದರಲ್ಲಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಇನ್ನು ವಿಷಯ ತಿಳಿದು ಸ್ಥಳಕ್ಕೆ ಬಂದ ವೇಮಗಲ್​ ಪೊಲೀಸರು ಹಾಗೂ ಗಣಿ ಮತ್ತು ಭೂ ವಿಜ್ನಾನ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ, ಸ್ಥಳಕ್ಕೆ ಎಸ್ಪಿ ನಾರಾಯಣ್​ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಈವೇಳೆ ಮೇಲ್ನೋಟಕ್ಕೆ ಅಲ್ಲಿ ಬ್ಲಾಸ್ಟಿಂಗ್​ ವೇಳೆ ನಿಯಮ ಮೀರಿ ಬ್ಲಾಸ್ಟಿಂಗ್ ಮಾಡಿರುವುದು ಕಂಡು ಬಂದಿದೆ ಇದಕ್ಕೆ ಸಂಬಂದ ಪಟ್ಟಣಂತೆ ಕ್ವಾರಿ ಗಣಿಗುತ್ತಿಗೆ ಪಡೆದಿರುವ ಮಾಲೀಕರು ಹಾಗೂ ಬ್ಲಾಸ್ಟಿಂಗ್​ ಎಂಜಿನಿಯರ್ ಸೇರಿ ಮೂವರ ವಿರುದ್ದ ಪ್ರಕರಣ ದಾಖಲಿಸಲಾಗಿದೆ.

Bengaluru: ಬಾಡಿಗೆ ಮನೆ ಮಾಲೀಕರೇ ಹುಷಾರ್, ತಲೆ ಒಡೆಯುವ ಗ್ಯಾಂಗ್ ಬಂದಿದೆ

ಇನ್ನು ವಿಷಯ ತಿಳಿದು ಸ್ಥಳಕ್ಕ ಬಂದಿದ್ದ ಕೆ.ಬಿ.ಹೊಸಹಳ್ಳಿ ಗ್ರಾಮದ ಗ್ರಾಮಸ್ಥರು ಕ್ವಾರಿ ನಡೆಸುವವರ ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ ಅಲ್ಲದೆ,ಕಳೆದ 20 ವರ್ಷಗಳಿಂದ ಇಲ್ಲಿ ಅಕ್ರಮ ಗಣಿಗಾರಿಕೆ ಮಾಡಲಾಗುತ್ತಿದೆ ಗ್ರಾಮಕ್ಕೆ ಈ ಗಣಿಗಾರಿಕೆಯಿಂದ ತೊಂದರೆಯಾಗುತ್ತಿದೆ,ಇಲ್ಲಿ ನಡೆಯುವ ಅಕ್ರಮ ಬ್ಲಾಸ್ಟಿಂಗ್​ನಿಂದ ಗ್ರಾಮದ ಮನೆಗಳು ಬಿರುಕು ಬಿಟ್ಟಿವೆ. ನಿಯಮ ಮೀರಿ ಟನ್​ ಗಟ್ಟಲೆ ಜೆಲ್ಲಿ ತುಂಬಿಸಿಕೊಂಡು ಓಡಾಡುವ ಟಿಪ್ಪರ್​ಗಳಿಂದ ರಸ್ತೆ ಹಾಳಾಗಿದೆ. ಈ ಬಗ್ಗೆ ಅಧಿಕಾರಿಗಳಿಗೆ ಎಷ್ಟು ಬಾರಿ ದೂರು ನೀಡಿದರು ಯಾವುದೇ ಕ್ರಮ ಕೈಗೊಂಡಿಲ್ಲ ಹಾಗಾಗಿ ಕೂಡಲೇ ಅಧಿಕಾರಿಗಳು ಗಣಿಗಾರಿಕೆಯನ್ನು ನಿಲ್ಲಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.​

ಗಂಡನ ಬಿಟ್ಟು ಸೋಷಿಯಲ್ ಮೀಡಿಯಾ ಫ್ರೆಂಡ್ ಹಿಂದೆ ಹೋದ ಸುಂದರಿ, ಹೆಣವಾಗಿ ಸಿಕ್ಕಳು!

ಒಟ್ಟಾರೆ ಗ್ರಾಮಸ್ಥರ ವಿರೋಧದ ನಡುವೆಯೂ ಕಲ್ಲು ಗಣಿಗಾರಿಕೆಗೆ ಅನುಮತಿ ನೀಡಿದ್ದು, ಸದ್ಯ ಕಲ್ಲು ಗಣಿಗಾರಿಕೆಯಿಂದ ನಿಯಮ ಮೀರಿ ನಡೆಯುವ ಬ್ಲಾಸ್ಟಿಂಗ್​ ನಿಂದಾಗಿ ಒಂದು ಜೀವ ಹೋಗಿದ್ದು, ಗಣಿಗಾರಿಕೆ ಗ್ರಾಮಕ್ಕೆ ಕಂಟಕ ತಂದಿಟ್ಟಿದ್ದು ಕೂಡಲೇ ಗ್ರಾಮದ ಬಳಿ ನಡೆಯುವ ಗಣಿಗಾರಿಕೆಗೆ ಕಡಿವಾಣ ಹಾಕಬೇಕು ಅನ್ನೋದು ಗ್ರಾಮಸ್ಥರ ಆಗ್ರಹವಾಗಿದೆ.

Follow Us:
Download App:
  • android
  • ios