Asianet Suvarna News Asianet Suvarna News

Bengaluru: ಹೃದಯವಿದ್ರಾವಕ ಘಟನೆ: ಕಾರು ಕಲಿಯಲು ಹೋಗಿ ಬಾಲಕಿ‌ ಪ್ರಾಣ ಬಲಿ ಪಡೆದ ಮಹಿಳೆ!

ಮಹಿಳೆಯೊಬ್ಬರು ಕಾರು ಕಲಿಯಲು ಹೋಗಿ ಬಾಲಕಿ‌ ಪ್ರಾಣ ಬಲಿ ಪಡೆದ ಹೃದಯವಿದ್ರಾವಕ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ಕಗ್ಗಲೀಪುರ ಗ್ರಾಮದಲ್ಲಿ ಇಂದು ಸಂಜೆ ನಡೆದಿದೆ. ಮನೆ ಮುಂದೆ ಆಟವಾಡ್ತಿದ್ದ ಬಾಲಕಿಗೆ ಕಾರು ಡಿಕ್ಕಿಯಾಗಿದ್ದು, ಮಗು ಸ್ಥಳದಲ್ಲೇ ಸಾವನಪ್ಪಿದೆ. 

women negligence 7 year girl dies at bengaluru gvd
Author
First Published May 25, 2024, 11:16 PM IST

ಬೆಂಗಳೂರು (ಮೇ.25): ಮಹಿಳೆಯೊಬ್ಬರು ಕಾರು ಕಲಿಯಲು ಹೋಗಿ ಬಾಲಕಿ‌ ಪ್ರಾಣ ಬಲಿ ಪಡೆದ ಹೃದಯವಿದ್ರಾವಕ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ಕಗ್ಗಲೀಪುರ ಗ್ರಾಮದಲ್ಲಿ ಇಂದು ಸಂಜೆ ನಡೆದಿದೆ. ಮನೆ ಮುಂದೆ ಆಟವಾಡ್ತಿದ್ದ ಬಾಲಕಿಗೆ ಕಾರು ಡಿಕ್ಕಿಯಾಗಿದ್ದು, ಮಗು ಸ್ಥಳದಲ್ಲೇ ಸಾವನಪ್ಪಿದೆ. ಕಗ್ಗಲೀಪುರ ಗ್ರಾಮದ ವೆಂಕಟೇಶ್ ಮತ್ತು ಲಕ್ಷ್ಮೀ ಎಂಬುವವರ ಪುತ್ರಿ ನಾಗಲಕ್ಷ್ಮೀ (7) ಮೃತ ಬಾಲಕಿ. 

ಪಕ್ಕದ ಮನೆಯ ಮಹಿಳೆಯು ಕಾರು ಕಲಿಯಲು ಹೋಗಿ ಮಗುವಿಗೆ ಡಿಕ್ಕಿ ಹೊಡೆದಿದ್ದಾಳೆ. ಡಿಕ್ಕಿ ರಭಸಕ್ಕೆ ಮಗು ಸ್ಥಳದಲ್ಲೇ ಸಾವನಪ್ಪಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.  ಸ್ಥಳಕ್ಕೆ ಕಗ್ಗಲೀಪುರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮಹಿಳೆಯನ್ನ ವಶಕ್ಕೆ ಪಡೆದು ಕಾರು ಸೀಜ್ ಮಾಡಿದ್ದಾರೆ. ಈ ಸಂಬಂಧ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಒಂದೇ ಸೂರಿನಡಿ ಬಾಯಲ್ಲಿ ನೀರೂರಿಸೋ ಬಗೆ ಬಗೆಯ ಮಾವು, ಹಲಸುಗಳು: ಮೇಳ ನಡೆಯುತ್ತಿರುವುದು ಎಲ್ಲಿ?

ಬೀದಿ ನಾಯಿ ಕಡಿತ ಬಾಲಕಿ ಸಾವು: ಬೀದಿ ನಾಯಿ ಕಡಿದು ಬಾಲಕಿ ಸಾವನಪ್ಪಿರುವ ಘಟನೆ ತಾಲೂಕಿನ ಕೊರವಿಹಾಳ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿ ಕೀರಲಿಂಗ ಮಗಳು ಲಾವಣ್ಯ (4) ಮೃತಪಟ್ಟ ಬಾಲಕಿಯಾಗಿದ್ದಾಳೆ. 15 ದಿನಗಳ ಹಿಂದೆ ಮನೆ ಸಮೀಪ ಆಟವಾಡುತ್ತಿದ್ದ ಮಕ್ಕಳ ಗುಂಪಿನ ಮೇಲೆ ಬೀದಿ ನಾಯಿ ದಾಳಿ ನಡೆಸಿದೆ. ಈ ವೇಳೆ ಏಳು ಮಕ್ಕಳು ಗಾಯಗೊಂಡಿದ್ದು, ಘಟನೆ ನಂತರ ಗ್ರಾಮಸ್ಥರು ನಾಯಿಯನ್ನು ಹೊಡೆದು ಕೊಂದು ಹಾಕಿದ್ದಾರೆ.

ಗುಂಪಿನಲ್ಲಿ ಬಾಲಕಿ ಲಾವಣ್ಯ ಸಹ ಇದ್ದರು. ಗಾಯಗೊಂಡಿದ್ದ ಲಾವಣ್ಯರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಿ ನಂತರ ಮನೆಗೆ ಕರೆದುಕೊಂಡು ಬಂದು ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದ ಲಾವಣ್ಯ ಏಕಾಏಕಿ ಸಾವಪ್ಪಿದ್ದಾಳೆ. ಘಟನೆಯಿಂದಾಗಿ ಗುಂಪಿನಲ್ಲಿ ಉಳಿದ ಮಕ್ಕಳ ಪಾಲಕರಲ್ಲಿ ಆತಂಕ ಶುರುವಾಗಿದೆ. ಬಾಲಕಿ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಗ್ರಾಮದಲ್ಲಿ ಬೀದಿ ನಾಯಿಯ ದಾಳಿ ನಡೆದರು ಸಹ ಸಗಮಕುಂಟಾ ಗ್ರಾಪಂ ಅಧಿಕಾರಿ, ಸಿಬ್ಬಂದಿ ಯಾವುದೇ ರೀತಿಯ ಸ್ಪಂದನೆ ನಿಡದೇ ನಿರ್ಲಕ್ಷ್ಯವಹಿಸಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Latest Videos
Follow Us:
Download App:
  • android
  • ios