ಕೊಪ್ಪಳ, (ಮಾ.06): ನಗ್ನ ವಿಡಿಯೋ ತೋರಿಸಿ ಉದ್ಯಮಿಗೆ ಬ್ಲ್ಯಾಕ್​ಮೇಲ್ ಮಾಡಿದ ಆರೋಪದಡಿ ಓರ್ವ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
  
 ಹೊಸಪೇಟೆಯಲ್ಲಿ ಗೀತಾ ಹಾಗೂ ಆಕೆಯ ಪುತ್ರನನ್ನು ಬಂಧಿಸಲಾಗಿದೆ. ಬಂಧಿತ ಮಹಿಳೆ ಕೊಪ್ಪಳ ಮೂಲದ ಉದ್ಯಮಿ ಸುಬ್ಬಾರೆಡ್ಡಿಯನ್ನು ಪರಿಚಯಿಸಿಕೊಂಡಿದ್ದರು. ಸುಬ್ಬಾರೆಡ್ಡಿ ಪರಿಚಯಿಸಿಕೊಂಡು ಮನೆಗೆ ಕರೆಸಿಕೊಂಡಿದ್ದರು. ಚಹಾದಲ್ಲಿ ಮತ್ತು ಬರುವ ಔಷಧ ಬೆರೆಸಿ ಕುಡಿಸಿದ್ದರು. ಬಳಿಕ, ನಗ್ನ ವಿಡಿಯೊ ಮಾಡಿದ್ದರು.

ಸ್ಕೂಲ್‌ನಲ್ಲಿ ವಿದ್ಯಾರ್ಥಿನಿ ಜೊತೆ ಸರಸ: ತನ್ನದೇ ಸೆಕ್ಸ್ ವಿಡಿಯೋ ಶೂಟ್ ಮಾಡಿದ ನಟ

ನಂತರ ಆ ವಿಡಿಯೊವನ್ನು ಉದ್ಯಮಿಗೆ ತೋರಿಸಿ, ಬೆದರಿಸಿ ಹಣ ವಸೂಲಿ ಮಾಡಿದ್ದ ಆರೋಪದಲ್ಲಿ ಈಗ ಮಹಿಳೆಯನ್ನು ಬಂಧಿಸಲಾಗಿದೆ. ಹೊಸಪೇಟೆ ಬಡಾವಣೆ ಠಾಣೆ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ.

30 ಲಕ್ಷಕ್ಕೆ ಬೇಡಿಕೆ
ಉದ್ಯಮಿ ಸುಬ್ಬಾರೆಡ್ಡಿಗೆ 30 ಲಕ್ಷ ನೀಡುವಂತೆ ಮಹಿಳೆ ಗೀತಾ ಬೇಡಿಕೆ ಇಟ್ಟಿದ್ದರು. ಅದಕ್ಕೆ ಪ್ರತಿಯಾಗಿ ಸುಬ್ಬಾರೆಡ್ಡಿ ಆನ್​ಲೈನ್​ನಲ್ಲಿ 15 ಲಕ್ಷ ವರ್ಗಾಯಿಸಿದ್ದರು. ಸುಬ್ಬಾರೆಡ್ಡಿ ಮನೆಯಲ್ಲಿ ಇಲ್ಲದ ವೇಳೆ ಮನೆಗೆ ತೆರಳಿ 4 ಬಂಗಾರದ ಬಳೆಗಳನ್ನು ಕದ್ದುಕೊಂಡು ಹೋಗಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಗೀತಾ ವಿರುದ್ಧ ಸುಬ್ಬಾರೆಡ್ಡಿ ದೂರು ದಾಖಲಿಸಿದ್ದರು. ದೂರಿನ ಮೇರೆಗೆ ಹೊಸಪೇಟೆಯಲ್ಲಿ ಗೀತಾ ಹಾಗೂ ಆಕೆಯ ಪುತ್ರನನ್ನು ಬಂಧಿಸಲಾಗಿದೆ.