ನಿಧಿ ಆಸೆಗಾಗಿ ಮನೆಯೊಳಗೆ ಗುಂಡಿ ತೆಗೆದರು, ಜ್ಯೋತಿಷಿ ಮಾತು ಕೇಳಿ ಮನೆ ಹಾಳು ಮಾಡ್ಕೊಂಡ ಮಹಿಳೆ..!

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ವಿ.ಎಸ್.ದೊಡ್ಡಿ ಗ್ರಾಮದ ಭಾಗ್ಯ ಅವರಿಗೆ ಸೇರಿದ ಮನೆಯೊಳಗೆ ನಿಧಿ ಎಂದು ಬೆಂಗಳೂರಿನ ಜ್ಯೋತಿಷ್ಯಿಯೊಬ್ಬ ನಂಬಿಸಿದ್ದಾನೆ. ಈತನ ಮಾತು ಕೇಳಿದ ಮನೆಯೊಡತಿ ಜ್ಯೋತಿಷಿಯಿಂದ ವಿಶೇಷ ಪೂಜೆ ಏರ್ಪಡಿಸಿ ಬಳಿಕ ವಾಸದ ಮನೆಯೊಳಗೆ 3 ಅಡಿ ಅಗಲಕ್ಕೆ ಸುಮಾರು 20 ಆಳದ ಗುಂಡಿ ತೆಗೆದಿದ್ದಾಳೆ. 

Woman who Opened Hole inside the House for the Treasure in Chamarajanagara grg

ವರದಿ: ಪುಟ್ಟರಾಜು. ಆರ್. ಸಿ., ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ

ಚಾಮರಾಜನಗರ(ಆ.23):  ಚಾಮರಾಜನಗರ ಜಿಲ್ಲೆಯ ಮನೆಯೊಂದರಲ್ಲಿ ನಿಧಿ ಇದೆ ಎಂದು ಜ್ಯೋತಿಷಿಯೊಬ್ಬನ  ಮಾತು ನಂಬಿ ಮನೆಯೊಳಗೆ 20 ಅಡಿ ಆಳದ ಗುಂಡಿ ತೆಗೆದಿರುವ ಪ್ರಕರಣ ಬೆಳಕಿಗೆ ಬಂದಿದೆ. ಹನೂರು ತಾಲೂಕಿನ ವಿ.ಎಸ್.ದೊಡ್ಡಿ ಗ್ರಾಮದ ಭಾಗ್ಯ ಅವರಿಗೆ ಸೇರಿದ ಮನೆಯೊಳಗೆ ನಿಧಿ ಎಂದು ಬೆಂಗಳೂರಿನ ಜ್ಯೋತಿಷ್ಯಿಯೊಬ್ಬ ನಂಬಿಸಿದ್ದಾನೆ. ಈತನ ಮಾತು ಕೇಳಿದ ಮನೆಯೊಡತಿ ಜ್ಯೋತಿಷಿಯಿಂದ ವಿಶೇಷ ಪೂಜೆ ಏರ್ಪಡಿಸಿ ಬಳಿಕ ವಾಸದ ಮನೆಯೊಳಗೆ 3 ಅಡಿ ಅಗಲಕ್ಕೆ ಸುಮಾರು 20 ಆಳದ ಗುಂಡಿ ತೆಗೆದಿದ್ದಾಳೆ. 

ನಿಮ್ಮ ಮನೆಯ ನೆಲದಲ್ಲಿ ನಿಧಿ ಇದೆ, ಅದನ್ನು ಸರ್ಪಗಳು ಕಾಯುತ್ತಿವೆ ವಿಶೇಷ ಪೂಜೆ ಮಾಡಿ ಈ ನಿಧಿ ನಿಮ್ಮದಾಗಬೇಕಾದರೆ ವಿಶೇಷ ಪೂಜೆ ಮಾಡಿ ಗುಂಡಿ ತೆಗೆಯಬೇಕು, ಅಗತ್ಯ ಪೂಜೆ ಮಾಡಿ ನಿಧಿ ತೆಗೆದುಕೊಡುತ್ತೇನೆ ಎಂದು ಹೇಳಿ ನಂಬಿಸಿದ ಜ್ಯೋತಿಷಿ ಆಕೆಯಿಂದ ಸಾವಿರಾರು ರೂಪಾಯಿ ವಸೂಲಿ ಮಾಡಿದ್ದಾನೆ. ಈತನ ಮಾತು ನಂಬಿದ ಭಾಗ್ಯ, ಜ್ಯೋತಿಷಿಯನ್ನು ತಮ್ಮೂರಿಗೆ ಮನೆಗೆ ಕರೆತಂದು  ಆತನಿಂದ ರಾತ್ರಿ ವೇಳೆ ಕಳಸ ಇಟ್ಟು ವಿಶೇಷ ಪೂಜೆ ಏರ್ಪಡಿಸಿದ್ದಾರೆ. ಬಳಿಕ ಭಾಗ್ಯ, ಜ್ಯೋತಿಷಿ ಹಾಗೂ ಜ್ಯೋತಿಷಿಯ ಸ್ನೇಹಿತ ಎಲ್ಲರೂ ಸೇರಿಕೊಂಡು ರಾತ್ರಿ ವೇಳೆ ಗುಟ್ಟಾಗಿ ಮನೆಯೊಳಗೆ ಗುಂಡಿ ತೆಗೆಯಲು ಆರಂಭಿಸಿದ್ದಾರೆ.   

ಬೀದರ್: ಸಿನಿಮಿಯ ರೀತಿಯಲ್ಲಿ ಗಾಂಜಾ ಸಾಗಿಸುತ್ತಿದ್ದ ಖದೀಮರ ಬಂಧನ

ಮೂರ್ನಾಲ್ಕು ದಿನಗಳ ಕಾಲ ಕೆಲಸ ಮಾಡಿ 3 ಅಡಿ ಅಗಲ 20 ಅಡಿ ಆಳದ ಗುಂಡಿ ತೆಗೆದಿದ್ದಾರೆ ಗುಂಡಿ ತೆಗೆದ ಲೋಡುಗಟ್ಟಲೇ ಮಣ್ಣನ್ನು ಮನೆಯೊಳಗೆ ಗುಡ್ಡೆ ಹಾಕಿದ್ದಾರೆ. ಯಾರಿಗೂ ಶಬ್ದ ಕೇಳಿಸದಂತೆ ನಿಧಿಗಾಗಿ ಶೋಧ ನಡೆಸಿದ್ದಾರೆ. ಈ ವಿಷಯ ಅದ್ದೇಗೋ ನೆರೆಹೊರೆಯವರಿಗೆ ಗೊತ್ತಾಗಿದೆ‌ ಅವರು ರಾಮಾಪುರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ‌. ಪೊಲೀಸರು ಗ್ರಾಮಕ್ಕೆ ಆಗಮಿಸುವಷ್ಟರಲ್ಲಿ ಜ್ಯೋತಿಷಿ ಹಾಗೂ ಜ್ಯೋತಿಷಿಯ ಸ್ನೇಹಿತ ಕಾಲ್ಕಿತ್ತಿದ್ದಾರೆ. 

Latest Videos
Follow Us:
Download App:
  • android
  • ios