ಬೆಂಗಳೂರು: 49ಗೆ 48 ಕೋಳಿ ಮೊಟ್ಟೆ ಆಫರ್ ನಂಬಿ 48,000 ಕಳೆದುಕೊಂಡ ಮಹಿಳೆ..!
ಲಿಂಕ್‌ನಲ್ಲಿ ಕೇಳಲಾಗಿದ್ದ ಎಲ್ಲಾ ಮಾಹಿತಿ ಭರ್ತಿ ಮಾಡಿದ್ದಾರೆ. 49 ರು. ಪಾವತಿಸಲು ಕ್ರೆಡಿಟ್ ಕಾರ್ಡ್ ಮಾಹಿತಿ ಭರ್ತಿ ಮಾಡಿದಾಗ ಮೊಬೈಲ್‌ಗೆ ಒಟಿಪಿ ಬಂದಿದೆ. ಒಟಿಪಿ ಸಂಖ್ಯೆಯನ್ನು ನಮೂದಿಸಿದಾಗ ಕ್ರೆಡಿಟ್ ಕಾರ್ಡ್‌ನಿಂದ ಏಕಾಏಕಿ 48 ಸಾವಿರ ರು. ಕಡಿತವಾಗಿರುವ ಸಂಬಂಧ ಮೊಬೈಲ್‌ಗೆ ಸಂದೇಶ ಬಂದಿದೆ. 49 ರು. ಬದಲು 48 ಸಾವಿರ ರು. ಕಡಿತ ವಾಗಿದ್ದಕ್ಕೆ ಆತಂಕಗೊಂಡ ಅರ್ಚನಾ ಸಿಂಗ್ ದೂರು ನೀಡಿದ್ದಾರೆ.
ಬೆಂಗಳೂರು(ಫೆ.27): ಆನ್‌ಲೈನ್ ಶಾಪಿಂಗ್ ಲಿಂಕ್‌ವೊಂದರಲ್ಲಿ ಕೇವಲ 49 ರು.ಗೆ 48 ಕೋಳಿ ಮೊಟ್ಟೆ ಆಫರ್ ನೋಡಿ ಖರೀದಿ ಸಲು ಮುಂದಾದ ಮಹಿಳೆಯೊ ಬ್ಬರು 48 ಸಾವಿರ ರು. ವಂಚನೆಗೆ ಒಳಗಾದ ಘಟನೆ ಬೆಂಗಳೂರಲ್ಲಿ ನಡೆದಿದೆ.
ದೂರುದಾರೆ ಅರ್ಚನಾ ಅವರ ಮೊಬೈಲ್‌ನ ಇ-ಮೇಲ್‌ಗೆ ಫೆ.17ರಂದು 'ನ್ಯೂಟ್ರಿಫ್ರೆಶ್ ಎಗ್ ಟಾಟಾ' ಎಂಬ ಆನ್‌ಲೈನ್ ಶಾಪಿಂಗ್ ಲಿಂಕ್ ಬಂದಿದೆ. ಆರ್ಡರ್ ಮಾಡಲು ಲಿಂಕ್ ಕ್ಲಿಕ್ಕಿಸಿದಾಗ 4 ಡಜನ್ ಫ್ರೆಶ್ ಕೋಳಿ ಮೊಟ್ಟೆಗೆ ಕೇವಲ 49 ರು. ಎಂಬ ಶೀರ್ಷಿಕೆಯ ಆಫರ್ ಇರುವುದು ಕಂಡು ಬಂದಿದೆ.
ಗ್ರಾಹಕನ ಅಕೌಂಟ್‌ನಲ್ಲಿದ್ದ 16 ಕೋಟಿ ಎಗರಿಸಿದ ಐಸಿಐಸಿಐ ಬ್ಯಾಂಕ್ ಮ್ಯಾನೇಜರ್!
ಲಿಂಕ್‌ನಲ್ಲಿ ಕೇಳಲಾಗಿದ್ದ ಎಲ್ಲಾ ಮಾಹಿತಿ ಭರ್ತಿ ಮಾಡಿದ್ದಾರೆ. 49 ರು. ಪಾವತಿಸಲು ಕ್ರೆಡಿಟ್ ಕಾರ್ಡ್ ಮಾಹಿತಿ ಭರ್ತಿ ಮಾಡಿದಾಗ ಮೊಬೈಲ್‌ಗೆ ಒಟಿಪಿ ಬಂದಿದೆ. ಒಟಿಪಿ ಸಂಖ್ಯೆಯನ್ನು ನಮೂದಿಸಿದಾಗ ಕ್ರೆಡಿಟ್ ಕಾರ್ಡ್‌ನಿಂದ ಏಕಾಏಕಿ 48 ಸಾವಿರ ರು. ಕಡಿತವಾಗಿರುವ ಸಂಬಂಧ ಮೊಬೈಲ್‌ಗೆ ಸಂದೇಶ ಬಂದಿದೆ. 49 ರು. ಬದಲು 48 ಸಾವಿರ ರು. ಕಡಿತ ವಾಗಿದ್ದಕ್ಕೆ ಆತಂಕಗೊಂಡ ಅರ್ಚನಾ ಸಿಂಗ್ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.