ಭೋಪಾಲ್[ನ.23]: ಎಂತೆಂಥ ವ್ಯಕ್ತಿಗಳಿರುತ್ತಾರೆ ನೋಡಿ. ಮಹಿಳೆಯೊಬ್ಬಳು ತನ್ನ ವಕೀಲ ಗಂಡನನ್ನು ಕೊಲೆ ಮಾಡಿದ್ದಲ್ಲದೇ, ಆತನನ್ನು ಮನೆಯಲ್ಲೇ ಹೂತು ಹಾಕಿ, ಶವದ ಮೇಲೆ ಅಡುಗೆ ಮನೆಯನ್ನು ಕಟ್ಟಿರುವ ವಿಚಿತ್ರ ಘಟನೆಯೊಂದು ಮಧ್ಯ ಪ್ರದೇಶದ ಅನುಪ್ಪುರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಆರೋಪಿ ಪ್ರತಿಮಾ ಬನಾವಾಲ್‌ (32) ಎಂಬಾಕೆ ಪತಿ ಮೋಹಿತ್‌ (34)ನನ್ನು ಅ.22ರಂದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಳು. ಬಳಿಕ, ಪೊಲೀಸ್‌ ಠಾಣೆಯಲ್ಲಿ ತನ್ನ ಪತಿ ಕಾಣೆಯಾಗಿದ್ದಾನೆ ಎಂದು ದೂರು ನೀಡಿದ್ದಳು.

ಅಪಾರ್ಟ್‌ಮೆಂಟ್‌ನಲ್ಲಿ ವೈದ್ಯೆಯ ಮೃತದೇಹ: ಅಪ್ಪ ಬಿಚ್ಚಿಟ್ರು ಚಿತ್ರಹಿಂಸೆಯ ಗುಟ್ಟು!

ಆದರೆ, ಮನೆಯಲ್ಲಿ ಯಾರನ್ನೂ ಒಳಕ್ಕೆ ಬಿಟ್ಟುಕೊಳ್ಳುತ್ತಿರಲಿಲ್ಲ. ಮನೆಯಿಂದ ದರ್ವಾಸನೆ ಬರುತ್ತಿದ್ದರಿಂದ ಅನುಮಾನ ಬಂದು ಪೊಲೀಸರು ಅಡುಗೆ ಮನೆಯನ್ನು ಅಗೆದ ವೇಳೆ ಅದರ ಅಡಿ ಶವ ಇರುವುದು ಪತ್ತೆಯಾಗಿದೆ.