Asianet Suvarna News Asianet Suvarna News

ಇನ್ಶೂರೆನ್ಸ್ ಹಣಕ್ಕಾಗಿ ಬದುಕಿದ್ದ ಗಂಡನ ಸಾಯಿಸಿದಳು!

*  ಗಂಡ ಸತ್ತುಹೋಗಿದ್ದಾನೆ ಎಂದು ನಕಲಿ ಪ್ರಮಾಣ ಪತ್ರ
* ವಿಮಾ ಹಣ ಲಪಟಾಯಿಸಲು ಮಾಸ್ಟರ್ ಪ್ಲಾನ್
* ಹೆಂಡತಿಯ ಕೆಲಸಕ್ಕೆ ಬೆಚ್ಚಿಬಿದ್ದ ಮಾಜಿ ಪತಿರಾಯ
* ನಕಲಿ ಡೆತ್ ಸರ್ಟಿಫಿಕೇಟ್ ಮಾಡಿಕೊಟ್ಟವರು ಅಂದರ್

Woman forges estranged husband s death certificate claims Rs 18 lakh insurance money mah
Author
Bengaluru, First Published Jul 9, 2021, 5:15 PM IST
  • Facebook
  • Twitter
  • Whatsapp

ಅಹಮದಾಬಾದ್(ಜು.  09)   ಇದೊಂದು ವಿಚಿತ್ರ ಪ್ರಕರಣ ಅಹಮದಾಬಾದ್ ನಿಂದ ವರದಿಯಾಗಿದೆ. ವಿಮೆ ಹಣ ಪಡೆದುಕೊಳ್ಳಲು  ಗಂಡನ ಮರಣದ ಸುಳ್ಳೂ ಪ್ರಮಾಣ ಪತ್ರ ಸೃಷ್ಟಿ ಮಾಡಿದ್ದಾಳೆ.

ನಕಲಿ  ಮರಣ ಪ್ರಮಾಣ ಪತ್ರ ನೀಡಿ 18 ಲಕ್ಷ ರೂ.  ಹಣ ಪಡೆದುಕೊಳ್ಳಲು ಮುಂದಾಗಿದ್ದಳು . ಕಠ್ವಾಡ ಪ್ರದೇಶದಲ್ಲಿ ಈ ಘಟನೆ ನಡೆದಿದೆ. 45 ವರ್ಷದ ಮಹಿಳೆ  ಮೂರು ವರ್ಷಗಳ ಹಿಂದೆ ಪತಿ ನಿಮೇಶ್ ಮರಾಠಿಯಿಂದ ಬೇರೆಯಾಗಿದ್ದರು. ಗಂಡನ ನಿರುದ್ಯೋಗ ಸಮಸ್ಯೆಯಿಂದ ಬೇಸತ್ತು ನಂದಾ ಮರಾಠಿ ಬೇರೆಯಾಗಿದ್ದರು.

47ರ ಮಂಡ್ಯದ ಆಂಟಿ,  ದಾವಣಗೆರೆ ಯುವಕ.. ತಲೆದಿಂಬಿನಿಂದ ಗಂಡನನ್ನೇ ಕೊಂದಳು!

ನಂದಾಗೆ  ನಕಲಿ ಪ್ರಮಾಣ ಪತ್ರ ಪಡೆದುಕೊಳ್ಳಲು ಹರಿಕೃಷ್ಣ ಸೋನಿ  ಸಹಾಯ ಮಾಡಿದ್ದ. ನಕಲಿ ಪ್ರಮಾಣ ಪತ್ರ ಸೃಷ್ಟಿ ಮಾಡಿದ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ. ಹರಿಕೃಷ್ಣ ಸೋನಿ ವೈದ್ಯರಾಗಿ ಕೆಲಸ ಮಾಡುತ್ತಿದ್ದಾರೆ.

 2019 ರ ಮಾರ್ಚ್ 6 ರಂದು ನಿಮೇಶ್ ಮೃತಪಟ್ಟಿದ್ದಾನೆ ಎಂದು ಪ್ರಮಾಣ ಪತ್ರ ಸಿದ್ಧಮಾಡಿದ್ದರು. ಗಂಡನಿಗೆ ವಂಚನೆ ಪ್ರಕರಣ ಗೊತ್ತಾಗಿದ್ದು ಬಿಟ್ಟು ಹೋದ  ಹೆಂಡತಿ ಮತ್ತು ವೈದ್ಯರ ಮೇಲೆ ದೂರು ದಾಖಲಿಸಿದ್ದಾರೆ.

ನಾನು ಮಧ್ಯಪ್ರದೇಶ ಮೂಲದವನಾಗಿದ್ದು ನಂದಾ ಅವರನ್ನು 20  ವರ್ಷದ ಹಿಂದೆ ಮದುವೆಯಾಗಿದ್ದೆ. ನನಗೆ ಇಬ್ಬರು ಹೆಣ್ಣು ಮಕ್ಕಳಿದ್ದು ಇಬ್ಬರಿಗೂ ಮದುವೆಯಾಗಿದೆ. ನನ್ನ ಹೆಸರಿನಲ್ಲಿ ಅನೇಕ ವಿಮಾ ಪಾಲಿಸಿಗಳನ್ನು ಮಾಡಿದ್ದೆ.   ಕೆಲಸ ಕಳೆದುಕೊಂಡ ನಂತರ ನನ್ನ ತವರಿಗೆ  ತೆರಳಿದ್ದು ಅಲ್ಲಿಯೇ ಜೀವನ ಮಾಡುತ್ತಿದ್ದೆ. ಆದರೆ  ಪತ್ನಿ ನನ್ನ ಹೆಸರಿನಲ್ಲಿ ವಿಮೆ ಹಣಕ್ಕೆ ಬೇಡಿಕೆ ಇಟ್ಟ ಸಂಗತಿ ಗೊತ್ತಾಗಿದ್ದು ದೂರು ಸಲ್ಲಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.

Follow Us:
Download App:
  • android
  • ios