ರಾಜಸ್ಥಾನದ ಭರತ್‌ಪುರದಲ್ಲಿ ವ್ಯಕ್ತಿಯೊಬ್ಬ ಟಾಯ್ಲೆಟ್ ಕ್ಲೀನರ್ ಸೇವಿಸಿ, ಕುಡಿತದ ಚಟ ನಿಲ್ಲಿಸುವಂತೆ ಪತ್ನಿಯ ನಿರಂತರ ಕಿರುಕುಳದಿಂದ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗಿದೆ. 

ಜೈಪುರ (ಮೇ.28): ಕಕುಡಿತದ ಚಟದ ಕುರಿತಾಗಿ ಪತ್ನಿಯ ನಿರಂತರ ಕಿರುಕುಳದಿಂದ ಸಿಟ್ಟಾದ ವ್ಯಕ್ತಿಯೊಬ್ಬ ಮನೆಯಲ್ಲಿದ್ದ ಟಾಯ್ಲೆಟ್‌ ಕ್ಲೀನರ್‌ ಕುಡಿದು ಸಾವು ಕಂಡಿದ್ದಾರೆ. ಕುಮ್ಹೇರ್‌ನ ನಿವಾಸಿಯಾಗಿದ್ದ ವಿನೋದ್‌ಗೆ ಪ್ರತಿನಿತ್ಯ ಮದ್ಯ ಕುಡಿಯುವ ಚಟವಿತ್ತು. ಈ ಅಭ್ಯಾಸದಿಂದ ಪತ್ನಿಗೂ ಸಮಸ್ಯೆ ಆಗುತ್ತಿತ್ತು. ಸಿಟ್ಟಾಗಿದ್ದ ಹೆಂಡತಿ ಪ್ರತಿದಿನವೂ ಗಂಡನೊಂದಿಗೆ ಇದೇ ವಿಚಾರಕ್ಕೆ ಕಿರುಕುಳ ನೀಡುತ್ತಿದ್ದರು. ವಿನೋದ್‌ನ ಕುಡಿತದ ಚಟದ ಕಾರಣದಿಂದಾಗಿ ಇಬ್ಬರೂ ನಿತ್ಯ ಜಗಳವಾಡುತ್ತಿದ್ದರು. ಮಾಹಿತಿಯ ಪ್ರಕಾರ ವಿನೋದ್‌ ಕುಡಿತದ ವಿಚಾರವಾಗಿ ಪತ್ನಿ ಶನಿವಾರವೂ ಗಲಾಟೆ ಮಾಡಿದ್ದಾಳೆ, ಆತನೂ ಕೂಡ ಹೆಂಡತಿಗೆ ಗದರಿದ್ದಾನೆ. ತನ್ನ ಹೆಂಡತಿಯ ನಿರಂತರ ಕಿರುಕುಳದಿಂದ ಕೋಪಗೊಂಡ ವಿನೋದ್‌, ತನ್ನ ಕೋಣೆಗೆ ಹೋಗಿ ಅಲ್ಲಿದ್ದ ಟಾಯ್ಲೆಟ್‌ ಕ್ಲೀನರ್‌ ಸೇವಿಸಿದ್ದ. ಆ ಬಳಿಕ ವಿನೋದ್‌ ಮತ್ತಷ್ಟು ಕೂಗಾಟ ಮಾಡಲು ಆರಂಭಿಸಿದ್ದ. ಈ ವೇಳೆ ವಿನೋದ್‌ನ ಸಹೋದರಿ ಕೋಣೆಗೆ ಆಗಮಿಸಿದ್ದಳು. ವಿನೋದ್‌ನನ್ನು ತಕ್ಷಣವೇ ಭರತ್‌ಪುಟದ ಆರ್‌ಬಿಎಂ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ, ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ತಿಳಿಸಲಾಗಿದೆ. ಮಾಹಿತಿ ಪಡೆದ ಪೊಲೀಸರು ಕೂಡ ಆಸ್ಪತ್ರೆಗೆ ಆಗಮಿಸಿದ್ದರು. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: ಹೆಂಡ್ತಿ ಕೋಳಿ ಸಾರು ಮಾಡ್ಲಿಲ್ಲ ಅನ್ನೋ ಸಿಟ್ಟಿಗೆ ನೇಣು ಬಿಗಿದು ಸಾವು ಕಂಡ ಪತಿ!

ಇದನ್ನೂ ಓದಿ: ಕೋಳಿ ಸಾರು ಖಾಲಿಯಾಗಿದ್ದಕ್ಕೆ ಜಗಳ, ಮಗನನ್ನೇ ಕೊಲೆಗೈದ ತಂದೆ!