ಬೆಂಗಳೂರು[ಮಾ.05]: ಪ್ಲಿಪ್ ಕಾರ್ಟ್ ಸಹಸಂಸ್ಥಾಪಕ  ಸಚಿನ್ ಬನ್ಸಾಲ್ ವಿರುದ್ದ ವರದಕ್ಷಿಣೆ ಕಿರುಕುಳ ದೂರು ದಾಖಲಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇ- ಕಾಮರ್ಸ್ ದಿಗ್ಗಜ ಬನ್ಸಾಲ್ ಬೆಂಗಳೂರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. 

ಏನಿದು ಪ್ರಕರಣ?

2008ರಲ್ಲಿ ಪ್ರಿಯಾ ಹಾಗೂ ಸಚಿನ್ ಬನ್ಸಾಲ್ ವಿವಾಹವಾಗಿದ್ದು, ಬಳಿಕ ಸಚಿನ್ ದಂಪತಿ ಬೆಂಗಳೂರಲ್ಲಿ ವಾಸಿಸುತ್ತಿದ್ದರು. ಆದರೀಗ ಪ್ರಿಯಾ ತನ್ನ ಗಂಡನ ವಿರುದ್ಧ ಕೋರಮಂಗಲ ಠಾಣೆಯಲ್ಲಿ ದೂರು ದಾಖಲಿಸಿದ್ದು, ಮದುವೆ ಆದಾಗಿನಿಂದ ಸಚಿನ್ ತಂದೆ ತಾಯಿ ವರದಕ್ಷಿಣಿ ಕಿರುಕುಳ ನೀಡುತ್ತಿರುವುದಾಗಿ ಪ್ರಿಯಾ ಆರೋಪಿಸಿದ್ದರು. ಅಲ್ಲದೇ ತನ್ನ ತಂಗಿ ಮೇಲೆ ಸಚಿನ್ ಬನ್ಸಾಲ್ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದೂ ತಮ್ಮ ದೂರಿನಲ್ಲಿ ತಿಳಿಸಿದ್ದರು.