ರಾಂಚಿ, [ಫೆ.21]: ತವರು ಮನೆಗೆ ಹೋಗಲು ಬಿಡಲಿಲ್ಲ ಎಂದು ಪತ್ನಿಯೊಬ್ಬಳು ತನ್ನ ಪತಿಯ ಮರ್ಮಾಂಗವನ್ನೇ ಕತ್ತರಿಸಿದ  ಘಟನೆ ಜಾರ್ಖಂಡ್‍ನ ಗಿರಿಹಿಡ್ ಜಿಲ್ಲೆಯಲ್ಲಿ ನಡೆದಿದೆ.

22 ವರ್ಷದ ಕುಮಾರ್ ಮಂಡಲ್ ಮತ್ತು ಮೊರ್ಗಾಂವ್ ಗ್ರಾಮದ ದೇವಿ  2019, ಜನವರಿ 30ರಂದು ಅಷ್ಟೇ ಮದುವೆಯಾಗಿದ್ದರು. ಮದುವೆಯಾದಾಗಿನಿಂದ ಇಬ್ಬರ ನಡುವೆ ಕಲಹ ಉಂಟಾಗಿದ್ದು, ಇಬ್ಬರ ಜಗಳಕ್ಕೆ ಸಂಬಂಧಿಸಿದಂತೆ ಒಂದು ವಾರದ ಹಿಂದೆ ಗ್ರಾಮದಲ್ಲಿ ರಾಜೀ ಪಂಚಾಯಿತಿಯಾಗಿತ್ತು ಎನ್ನಲಾಗಿದೆ.

ಆದರೂ ದೇವಿ ತವರು ಮನೆಗೆ ಹೋಗುತ್ತೇನೆಂದು ಪತ್ನಿ ಪತಿ ಬಳಿ ಕೇಳಿಕೊಂಡಿದ್ದಾಳೆ. ಸಾಕಷ್ಟು ಬಾರಿ ಮನವಿ ಮಾಡಿಕೊಂಡಿದ್ದಾಳೆ. ಆದರೆ ಇದಕ್ಕೆ ಕುಮಾರ್ ಮಂಡಲ್ ಅನುಮತಿ ನೀಡಿಲ್ಲ . ಇದರಿಂದ ಕೋಪಗೊಂಡ ಪತ್ನಿ ಬ್ಲೇಡ್‍ನಿಂದ ಪತಿಯ ಮರ್ಮಾಂಗದ ಮೇಲೆ ಹಲ್ಲೆ ಮಾಡಿದ್ದಾಳೆ ಎಂದು ವರದಿಯಾಗಿದೆ.

ಇಬ್ಬರು ಶಿಕ್ಷಕರಿಗೆ ಅದೇ ವಿದ್ಯಾರ್ಥಿನಿ ಬೇಕು: ಇದು ಟೀಚರ್ಸ್ ಪ್ರೇಮ್ ಕಹಾನಿ

ಈ ಘಟನೆಯಿಂದ ಗಂಭೀರವಾಗಿ ಗಾಯಗೊಂಡ ಪತಿಯನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಆಸ್ಪತ್ರೆಯ ವೈದ್ಯರು,  ಶೇ. 60ರಷ್ಟು ಮರ್ಮಾಂಗ ಕಟ್ ಆಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಎರಡು ದಿನದ ಹಿಂದೆ ನನ್ನ ಪತ್ನಿ ತನ್ನ ತವರು ಮನೆಯಿಂದ ಹಿಂತಿರುಗಿದ್ದಳು. ಆದರೆ ಈಗ ಮತ್ತೆ ಹೋಗುತ್ತೇನೆ ಎಂದು ಹಠ ಮಾಡುತ್ತಿದ್ದಳು. ಈ ವಿಷಯಕ್ಕಾಗಿ ಇಬ್ಬರ ನಡುವೆ ಜಗಳ ನಡೆದಿತ್ತು. ಜಗಳ ವಿಕೋಪಕ್ಕೆ ತಿರುಗುತ್ತಿದ್ದಂತೆ ಆಕೆ ನನ್ನ ಖಾಸಗಿ ಅಂಗದ ಮೇಲೆ ಹಲ್ಲೆ ಮಾಡಿದ್ದಾಳೆ ಎನ್ನುವುದು ಪತಿಯ ಆರೋಪ. 

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಪತ್ನಿ, ನಾನು ಪರೀಕ್ಷೆ ಬರೆಯಬೇಕಿತ್ತು. ಹಾಗಾಗಿ ನಾನು ನನ್ನ ತವರು ಮನೆಗೆ ಹೋಗುತ್ತೇನೆ ಕೇಳಿಕೊಡಿದ್ದೆ. ಆದರೆ ನನ್ನ ಪತಿ ನಿರಾಕರಿಸಿದ ಬಳಿಕ ನಾನು ಇಲ್ಲಿಯೇ ಇದ್ದೆ ಎಂದು ಹೇಳಿದ್ದಾಳೆ.

ಈ ಬಗ್ಗೆ ಮಾತನಾಡಿದ ಬಾಗೋದರ್ ಪೊಲೀಸ್ ಠಾಣೆಯ ಪೊಲೀಸರು, ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಪತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಪ್ರಕರಣದ ಬಗ್ಗೆ ಮಹಿಳೆಯನ್ನು ಕೂಡ ವಿಚಾರಣೆ ನಡೆಸುತ್ತೇವೆ ಎಂದು ಹೇಳಿದ್ದಾರೆ.