ಜೈಸಲ್ಮೇರ್(ನ. 18) ವಿಧವೆಯೊಬ್ಬಳು ಮರುಮದುವೆಯಾಗಲು ನಿರಾಕರಿಸಿದ ಆಕೆಯ ಕಾರಣ ಮೂಗು ಮತ್ತು ನಾಲಿಗೆಯನ್ನು ಕತ್ತರಿಸಲಾಗಿದದೆ. ಸಂತ್ರಸ್ತೆಯನ್ನುಜೋಧಪುರದ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.

ಪ್ರಕರಣದ ಪ್ರಮುಖ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು ಕೆಲವರು ಪರಾರಿಯಾಗಿದ್ದಾರೆ.  ಮಹಿಳೆಯ ಸಹೋದರ ಶಂಕರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಹಲ್ಲೆಗೆ ಒಳಗಾದ ಮಹಿಳೆಯ ಅಳಿಯರು ಹುಡುಗನೊಬ್ಬನ ನೋಡಿ ಮದುವೆಯಾಗಲು ಒತ್ತಡ ಹೇರಿದ್ದರು.  ಮಹಿಳೆ ಮದುವೆ ನಿರಾಕರಣೆ ಮಾಡಿದಾಗ ಆಕೆಯ ಮಾವನ ಮನೆಯಯವರು ಹಲ್ಲೆ ಮಾಡಿದ್ದಾರೆ.

ಡ್ರಾಪ್  ಸಿಗುತ್ತೆ ಅಂಥ ಸಿಕ್ಕ ಸಿಕ್ಕ ಗಾಡಿ ಏರಿದ್ರೆ ಅಷ್ಟೆ ಕತೆ

ಗಂಭೀರ ಸ್ಥಿತಿಯಲ್ಲಿ ಇದ್ದ ಮಹಿಳೆಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಖ್ಯ ಆರೋಪಿ ಜನು ಖಾನ್ ನನ್ನು ಬಂಧಿಸಲಾಗಿದೆ. ಇತರ ಆರೋಪಿಗಳನ್ನು ಬಂಧಿಸಲು ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಆರು ವರ್ಷಗಳ ಹಿಂದೆ  ನನ್ನ ಸಹೋದರಿ ಕೊಜೆ ಖಾನ್‌ನನ್ನು ಮದುವೆಯಾಗಿದ್ದಳೂ.  ಒಂದು ವರ್ಷದ ನಂತರ, ಖಾನ್ ನಿಧನರಾದರು ಮತ್ತು ಅಂದಿನಿಂದ ಅವಳ ಅಳಿಯಂದಿರು ಒಬ್ಬ ವ್ಯಕ್ತಿಯನ್ನು ಮದುವೆಯಾಗುವಂತೆ ಅವಳ ಮೇಲೆ ಒತ್ತಡ ಹೇರುತ್ತಿದ್ದರು. ಇದನ್ನು ನಿರಾಕರಿರಿಸುತ್ತ ಬಂದಿದ್ದಕ್ಕೆ ಹಲ್ಲೆ ಮಾಡಿದ್ದಾರೆ ಎಂದು ಮಹಿಳೆ ಸಹೋದರ ದೂರಿನಲ್ಲಿ ಹೇಳಿದ್ದಾರೆ.

ಮಂಗಳವಾರ ಮಧ್ಯಾಹ್ನ 1 ಗಂಟೆಗೆ ಆರೋಪಿ ಟ್ರ್ಯಾಕ್ಟರ್‌ನಲ್ಲಿ ಬಂದು  ಏಕಾಏಕಿ ಮಹಿಳೆ ಮೇಲೆ ಎರಗಿದ್ದಾನೆ. ತಡೆಯಲು ಬಂದ ವ್ಯಕ್ತಿಯ ಮೇಲೆಯೂ ಹಲ್ಲೆ ಮಾಡಿದ್ದಾನೆ.