Asianet Suvarna News Asianet Suvarna News

ಚಾಟಿಂಗ್‌ ಚಟ ಹತ್ತಿಸಿಕೊಂಡಿದ್ದ ಮಗಳನ್ನೇ ಹತ್ಯೆ ಮಾಡಿದ ನಶೆಯಲ್ಲಿದ್ದ ತಾಯಿ!

* ಮದ್ಯದ ಅಮಲಿನಲ್ಲಿ ಹೆತ್ತ ಮಗಳನ್ನೆ ಕೊಲೆ ಮಾಡಿದ ತಾಯಿ
* ವಿಧವೆ ಮಗಳ ಮೇಲೆ ಕಲ್ಲು ಎತ್ತಿ ಹಾಕಿದಳು
* ಮೊಬೈಲ್ ಚಾಟಿಂಗ್ ವಿಚಾರಕ್ಕೆ ಜಗಳ
* ಬುದ್ಧಿ ಮಾತು ಹೇಳಿದರೆ ಕೇಳದ ಮಗಳು

widow bludgeoned to death by drunk mother for spending too much time on phone Tamil Nadu mah
Author
Bengaluru, First Published Jul 14, 2021, 5:23 PM IST

ಕೊಯಮತ್ತೂರು (ಜು.  14)  ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಕನುವೈಪಾಲಯಂ ಪ್ರದೇಶದದಲ್ಲಿ ತಾಯಿಯೇ ಮಗಳ ಹತ್ಯೆ ಮಾಡಿದ್ದಾಳೆ. 31 ವರ್ಷದ ವಿಧವೆ ಮಗಳನ್ನು 47 ವರ್ಷದ ತಾಯಿ ಕೊಲೆ ಮಾಡಿದ್ದಾರೆ.

ಕೊಲೆಗೀಡಾದ ಮಹಿಳೆ  ಮಹಾಲಕ್ಷ್ಮಿ   14 ವರ್ಷಗಳ ಹಿಂದೆ, ಕೊಯಮತ್ತೂರಿನ ಸೋಮೈಯುನೂರ್ ನಿವಾಸಿ ಸರವಣಕುಮಾರ್ ಅವರನ್ನು ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದು ಎಂಟು ತಿಂಗಳ ಹಿಂದೆ ಪತಿ ಅಪಘಾತದಲ್ಲಿ ತೀರಿಕೊಂಡಿದ್ದರು.

ವೇಶ್ಯಾವಾಟಿಕೆ ದಂಧೆಯ ಕಿಂಗ್ ಪಿನ್ ತೃತೀಯ ಲಿಂಗಿ

ಗಂಡನ ತಾಯಿ  ತಾಯಿ ತುಳಸಿಮಣಿ  ಸೊಸೆಗೆ ಆಗಾಗ ಬುದ್ಧಿಮಾತು ಹೇಳುತ್ತಿದ್ದರು. ಪೋನ್ ನಲ್ಲಿ ಸಮಯ ವ್ಯರ್ಥ ಮಾಡುವ ಬದಲು ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಹೇಳುತ್ತಿದ್ದಳು.  ಸೊಸೆ  ಬಿದ್ಧಿ ಕೇಳದಿದ್ದಾಗ ತವರು ಮನೆಗೆ ಕಳಿಸುವ ನಿರ್ಧಾರ ಮಾಡಿದ್ದಾರೆ. ಆರು ತಿಂಗಳ ಹಿಂದೆ , ತುಳಸಿಮಣಿ ಮಹಾಲಕ್ಷ್ಮಿಯನ್ನು ಕರಮಡೈ ಬಳಿಯ ಕನುವೈಪಾಲಯಂನ ತಾಯಿ ನಾಗಮಣಿ ಮನೆಗೆ ತಂದು ಬಿಟ್ಟಿದ್ದಾರೆ.

ಇಲ್ಲಿ  ತಾಯಿ ಮತ್ತು ಮಗಳ ನಡುವೆ ಪೋನ್ ಚಾಟಿಂಗ್ ವಿಚಾರಕ್ಕೆ ಗಲಾಟೆ ಶುರುವಾಗಿದೆ. ಮಗಳು ಯಯಾರದ್ದೋ ಜತೆ ಸಂಬಂಧದಲ್ಲಿ ಇದ್ದಾಳೆ ಎಂದು ತಾಯಿಗೆ ಅನುಮಾನ ಶುರುವಾಗಿದೆ.

ಮೊಬೈಲ್ ಚಾಟಿಂಗ್ ವಿಚಾರಕ್ಕೆ ಸಂಬಂಧಿಸಿ ತಾಯಿ-ಮಗಳ ನಡುವೆ ಭಾನುವಾರ ಜಗಳ ಶುರುವಾಗಿದೆ. ಮದ್ಯದ  ಅಮಲಿನಲ್ಲಿದ್ದ ನಾಗಮಣಿ ಗಲಾಟೆ ಮಾಡಿದ್ದಾರೆ. ಊಟವಾದ ನಂತರ ಬೇರೆ ಬೇರೆ ಕೋಣೆಯಲ್ಲಿ ಇಬ್ಬರು ಮಲಗಿದ್ದಾರೆ. ಆದರೆ ರಾತ್ರಿ 11.30  ಸುಮಾರಿಗೆ ಮದ್ಯದ ನಶೆಯಲ್ಲಿದ್ದ ತಾಯಿ ಮಗಳ ಮೇಲೆಯೇ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾರೆ. ಆರೋಪಿ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ.

Follow Us:
Download App:
  • android
  • ios