ವಾಷಿಂಗ್ ಟನ್(ಮಾ.  20)   ಚರ್ಚ್ ನಲ್ಲಿ ಮಾಜಿ ಪಾದ್ರಿಯೊಂದಿಗೆ ಸೇರಿ ಸೆಕ್ಸ್ ಮಾಡಿದ್ದ ಮಹಿಳೆ ಮೇಲೆ ಕ್ರಿಮಿನಲ್ ಆರೋಪ ದಾಖಲಾಗಿದೆ.  ಸೆಕ್ಸ್ ನಲ್ಲಿ  ಪಾದ್ರಿ-ಮಹಿಳೆ ಜತೆಗೆ ಇನ್ನೊಬ್ಬ ವ್ಯಕ್ತಿಯೂ ಇದ್ದರು!

ಕೆಂಟ್ ವಾಶ್ ನ ಮಿಂಡಿ ಲಿನ್ ಡಿಕ್ಸನ್ (41)  ಮತ್ತು  ಮಾಜಿ ಪಾದ್ರಿ ಟ್ರಾವಿಸ್ ಜಾನ್ ಕ್ಲಾರ್ಕ್(37)  ಮತ್ತು ಆಲ್ಫರೆಟ್ಟಾ ಮೇಲೆ ಅಕ್ರಮ ಸೆಕ್ಸ್ ಪ್ರಕರಣ ದಾಖಲಾಗಿದೆ.

ವರದಿಗಳು ಹೇಳಿವಂತೆ  ಸೆಪ್ಟೆಂಬರ್ 30, 2020 ರಂದು ಮೂವರು ಚರ್ಚ್ ನಲ್ಲಿಯೇ ಸೆಕ್ಸ್ ನಲ್ಲಿ ತೊಡಗಿದ್ದರು. ದಾರಿಹೋಕರೊಬ್ಬರ ಗಮನಕ್ಕೆ ಇದು ಬಂದಿದ್ದು ಆತ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಫೀಲ್ ಫ್ರೀ; ಗುರುತು ಪರಿಚಯ ಇಲ್ಲದವರ ಜತೆ ಸೆಕ್ಸ್..ಮುಂದೇನು? 

ಇದಕ್ಕೆ ಸಂಬಂಧಿಸಿ ದಾರಿಹೋಕ ವಿಡಿಯೋವನ್ನು ಮಾಡಿಕೊಂಡಿದ್ದರು. ಮಹಿಳೆಯರೊಂದಿಗೆ ಲೈಂಗಿಕ ಸಂಪರ್ಕ ನಡೆಸುತ್ತಿದ್ದ ಪಾದ್ರಿ ಅರೆನಗ್ನ ಸ್ಥಿತಿಯಲ್ಲಿದ್ದು ಚರ್ಚ್ ಉಡುಪನ್ನು ಧರಿಸಿದ್ದ. ಹೈ ಹೀಲ್ಡ್ ಧರಿಸಿದ್ದ ಇಬ್ಬರು ಮಹಿಳೆಯರು ಪ್ರಕರಣದಲ್ಲಿ ಇದ್ದಿದ್ದನ್ನು ಅಧಿಕಾರಿಗಳು ಗಮನಿಸಿದ್ದರು. ಅಲ್ಲಿನ ಲೈಟ್ ಗಮನಿಸಿದರೆ ಅದನ್ನು ಯಾರೋ ರೆಕಾರ್ಡ್ ಮಾಡಿಕೊಳ್ಳುತ್ತಿದ್ದಾರೆ ಎಂಬುದನ್ನು  ಹೇಳಬಹುದಾಗಿತ್ತು.

ಮಹಿಳೆಯರನ್ನು ವಿಚಾರಣೆಗೆ ಒಳಪಡಿಸಿದಾಗ ಪಾದ್ರಿಯ ಅನುಮತಿ ಮೇರೆಗೆ ನಾವು ಪಾಲ್ಗೊಂಡಿದ್ದೇವು ಎಂದಿದ್ದರು. ಚರ್ಚ್ ಬಲಿಪೀಠದ ಮೇಲೆ ಸೆಕ್ಸ್ ಮಾಡಿದ್ದು ಸುದ್ದಿಗೆ ಗ್ರಾಸವಾಗಿತ್ತು.

ಸೆಕ್ಸ್ ಗೆ ವೇದಿಕೆಯಾಗಿದ್ದ ಬಲಿಪೀಠವನ್ನು ಬದಲಾಯಿಸಲಾಗಿದೆ. ಮೂವರ ಮೇಲೂ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿಯಲಿದೆ ಎಂದು ಬಿಷಪ್ ತಿಳಿಸಿದ್ದಾರೆ.