Asianet Suvarna News Asianet Suvarna News

ಕೆ.ಕಲ್ಯಾಣ್ ದಾಂಪತ್ಯದಲ್ಲಿ ಬಿರುಕು: ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ

ಪ್ರೇಮಕವಿ, ಚಿತ್ರಸಾಹಿತಿ ಕೆ.ಕಲ್ಯಾಣ್ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಇದೀಗ ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲು ಏರಿದೆ.

usic composer k kalyan wife files counter complaint in belagavi police station rbj
Author
Bengaluru, First Published Oct 3, 2020, 7:00 PM IST
  • Facebook
  • Twitter
  • Whatsapp

ಬೆಳಗಾವಿ, (ಅ.03): ಪ್ರೇಮಕವಿ, ಚಿತ್ರಸಾಹಿತಿ ಕೆ.ಕಲ್ಯಾಣ್ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಕೆ.ಕಲ್ಯಾಣ ದಂಪತಿ ಕಲಹ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ.ಹೌದು.. ತಮ್ಮ ಪತ್ನಿ ಅಶ್ವಿನಿ ಕಿಡ್ನಾಪ್ ಆಗಿದ್ದಾರೆಂದು ಕೆ.ಕಲ್ಯಾಣ್ ನಗರದ ಮಾಳಮಾರುತಿ ಠಾಣೆಗೆ ದೂರು ನೀಡಿದ್ದರು. ಕಲ್ಯಾಣ್ ದೂರಿನ ಮೇರೆಗೆ ಸೆಪ್ಟೆಂಬರ್ 30ರಂದು ಎಫ್‌ಐಆರ್ ದಾಖಲಾಗಿತ್ತು.

"

ಪತ್ನಿ ಅಶ್ವಿನಿ ಅಕೌಂಟ್‌ನಿಂದ 19 ಲಕ್ಷ ರೂಪಾಯಿ ಅರೊಪಿ ತನ್ನ ಅಕೌಂಟ್‌ಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ ಎಂದು ಕಲ್ಯಾಣ್ ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಬಡಗಿ ಗ್ರಾಮದ ಶಿವಾನಂದ ವಾಲಿ, ಗಂಗಾ ಕುಲಕರ್ಣಿ ಎಂಬುವರ ವಿರುದ್ಧ ಆರೋಪ ಮಾಡಿದ್ದಾರೆ.ಈ ಹಿನ್ನೆಲೆಯಲ್ಲಿ ಪೊಲೀಸರು, ಕೆ.ಕಲ್ಯಾಣ ಪತ್ನಿ ಅಶ್ವಿನಿ ಅವರನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ. 

ಉದ್ಘಾಟನೆಗೊಂಡಿತು ಅಟಲ್ ಟನಲ್, ಮತ್ತೆ ಹತ್ರಾಸ್‌ಗೆ ರಾಹುಲ್: ಅ.3ರ ಟಾಪ್ 10 ಸುದ್ದಿ!

ಪತ್ನಿಯಿಂದ ಪ್ರತಿದೂರು 
 ಇದೀಗ ಈ ಪ್ರಕರಣ ತಿರುವು ಪಡೆದುಕೊಂಡಿದೆ. ಪ್ರೇಮಕವಿ ಹಾಗೂ ಖ್ಯಾತ ಚಿತ್ರಸಾಹಿತಿ ಕೆ.ಕಲ್ಯಾಣ್​ ಪತ್ನಿ ಅಶ್ವಿನಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಠಾಣೆಯಲ್ಲಿ ಪ್ರತಿದೂರು ದಾಖಲಿಸಿದ್ದಾರೆ.

ಕಲ್ಯಾಣ್ ಮತ್ತು ನನ್ನ ನಡುವೆ ವೈಮನಸ್ಸು ಉಂಟಾಗಿದೆ. ಕಲ್ಯಾಣ್ ಆಸ್ತಿ ವಿಚಾರಕ್ಕೆ ನನ್ನನ್ನ ಮದುವೆ ಆಗಿದ್ದಾರೆ ಎಂದು ಅಶ್ವಿನಿ ತಮ್ಮ ದೂರಿನಲ್ಲಿ ಆರೋಪ ಮಾಡಿದ್ದಾರೆ.

ಅಶ್ವಿನಿ ಪರ ವಕೀಲ ಸತೀಶ್ ದಳವಾಯಿ ಹೇಳಿದ್ದೇನು?
ಕೆ.ಕಲ್ಯಾಣ್ ಪತ್ನಿ ಅಶ್ವಿನಿ ಅಲಿಯಾಸ್ ಐಶ್ವರ್ಯಾ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಜೂನ್ 26ರಂದು ಬೆಳಗಾವಿಯ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು ಎಂದು ಅಶ್ವಿನಿ ಪರ ವಕೀಲ ಸತೀಶ್ ದಳವಾಯಿ ಸ್ಪಷ್ಟಪಡಿಸಿದ್ದಾರೆ.

ಕೆ.ಕಲ್ಯಾಣ್ ದೈಹಿಕವಾಗಿ, ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ. ಹೀಗಾಗಿ ವಿಚ್ಛೇದನ ಬೇಕು ಎಂದು ಅರ್ಜಿ ಸಲ್ಲಿಸಿದ್ದಾರೆ. ಜೊತೆಗೆ, ಕಲ್ಯಾಣ್ ವಿರುದ್ಧ ಅಶ್ವಿನಿ ಮಾಳಮಾರುತಿ ಠಾಣೆಗೆ ಜೂನ್ 26ರಂದು ದೂರು ಸಹ ನೀಡಿದ್ರು. ಆದ್ರೆ, ಈ ಕುರಿತು ಪೊಲೀಸರು ವಿಚಾರಣೆ ನಡೆಸಿಲ್ಲ. ಆದ್ರೆ ಕೆ‌.ಕಲ್ಯಾಣ ನೀಡಿದ್ದ ದೂರನ್ನು ಸ್ವೀಕರಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈಗ ಪೊಲೀಸರು ವಶಕ್ಕೆ ಪಡೆದಿರುವ ಶಿವಾನಂದ ಅಶ್ವಿನಿಯವರ ಸೋದರ ಸಂಬಂಧಿ ಎಂದು ಅಶ್ವಿನಿ ಪರ ವಕೀಲ ಸತೀಶ್ ದಳವಾಯಿ ಮಾಹಿತಿ ನೀಡಿದ್ದಾರೆ.
usic composer k kalyan wife files counter complaint in belagavi police station rbj

Follow Us:
Download App:
  • android
  • ios