Asianet Suvarna News Asianet Suvarna News

ಹೆಡ್‌ಸೆಟ್ ತೆಗೆಸಿ ಕೊಡಲು ನಿರಾಕರಿಸಿದ ತಾಯಿಗೆ ಗುಂಡಿಕ್ಕಿ ಕೊಂದ 10 ವರ್ಷದ ಮಗ

ಇತ್ತೀಚೆಗೆ ಅಪರಾಧ ಕೃತ್ಯವೆಸಗುವ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ. ಹೆಡ್‌ಸೆಟ್ ಖರೀದಿಸಿ ಕೊಡಲು ನಿರಾಕರಿಸಿದ ತಾಯಿಯನ್ನು 10 ವರ್ಷದ ಮಗನೋರ್ವ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ಅಮೆರಿಕಾದ ಮಿಲ್ವಾಕೀ (Milwaukee) ಎಂಬಲ್ಲಿ ಈ ಘಟನೆ ನಡೆದಿದೆ.

US 10 year old son shot and killed his mother who refused to buy a headset to him akb
Author
First Published Dec 2, 2022, 10:20 PM IST

ಇತ್ತೀಚೆಗೆ ಅಪರಾಧ ಕೃತ್ಯವೆಸಗುವ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ. ಹೆಡ್‌ಸೆಟ್ ಖರೀದಿಸಿ ಕೊಡಲು ನಿರಾಕರಿಸಿದ ತಾಯಿಯನ್ನು 10 ವರ್ಷದ ಮಗನೋರ್ವ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ಅಮೆರಿಕಾದ ಮಿಲ್ವಾಕೀ (Milwaukee) ಎಂಬಲ್ಲಿ ಈ ಘಟನೆ ನಡೆದಿದೆ. ಬಾಲಕ ಅಪ್ರಾಪ್ತನಾಗಿರುವ ಕಾರಣ ಆತನ ಹೆಸರನ್ನು ಬಹಿರಂಗಪಡಿಸಿಲ್ಲ. ವರ್ಚುವಲ್ ರಿಯಾಲಿಟಿ ಹೆಡ್‌ಸೆಟ್ ಅನ್ನು ಖರೀದಿಸಲು ತಾಯಿ ನಿರಾಕರಿಸಿದಳು ಎಂದು ಬಾಲಕ ಈ ಕೃತ್ಯವೆಸಗಿದ್ದು, 10 ವರ್ಷದ ಈ ಬಾಲಕನಲ್ಲಿ ತಾನು ನಡೆಸಿದ ಕೃತ್ಯದ ಬಗ್ಗೆ ಯಾವುದೇ ಪಶ್ಚಾತಾಪವಿಲ್ಲ ಎಂದು ತಿಳಿದು ಬಂದಿದೆ. ಅಲ್ಲದೇ ತಾಯಿಯನ್ನು ಹತ್ಯೆಗೈದ ಮರುದಿನವೇ ಆತ ತಾಯಿಯ ಅಮೆಜಾನ್ ಖಾತೆಯಿಂದ ತಾನು ಬಯಸಿದ ಗೇಮಿಂಗ್ ಹೆಡ್‌ಸೆಟ್‌ನ್ನು ಖರೀದಿ ಮಾಡಿದ್ದಾನೆ ಎಂದು ತಿಳಿದು ಬಂದಿದೆ. 

ನ್ಯೂಯಾರ್ಕ್‌ ಪೋಸ್ಟ್ ವರದಿ ಪ್ರಕಾರ, ಘಟನೆ ನಡೆದ ಬಳಿಕ ಆತನ 26 ವರ್ಷದ ಸಹೋದರಿ ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಬಾಲಕ ನವೆಂಬರ್ 21 ರಂದು ಬೆಳಗ್ಗೆ 7 ಗಂಟೆಗೆ ತನ್ನ ತಾಯಿಯ ಮಲಗುವ ಕೋಣೆಯಿಂದ ಬಂದೂಕನ್ನು(gun) ತೆಗೆದುಕೊಂಡಿದ್ದಾಗಿ ಬಾಲಕ (Boy) ಆರಂಭದಲ್ಲಿ ಪೊಲೀಸರಿಗೆ ತಿಳಿಸಿದ್ದಾನೆ. ಬಳಿಕ ಆತ ಮನೆಯ ನೆಲಮಾಳಿಗೆಯಲ್ಲಿ ಬಟ್ಟೆ ತೊಳೆಯುತ್ತಿದ್ದ ತಾಯಿಯ ಬಳಿ ಗನ್ ಹಿಡಿದುಕೊಂಡು ಬಂದಿದ್ದಾನೆ. ಬಾಲಕ ಪೊಲೀಸರ ಮುಂದೆ ನೀಡಿದ ಹೇಳಿಕೆಯಲ್ಲಿ ಗನ್‌ನಲ್ಲಿ ಆಟವಾಡುತ್ತಿದ್ದಾಗ ಗುರಿ ತಪ್ಪಿ ತಾಯಿಗೆ ಗುಂಡು ಬಿದ್ದಿದೆ ಎಂದು ಹೇಳಿದ್ದಾನೆ ಎಂದು ತಿಳಿದು ಬಂದಿದೆ. 

Chitradurga: ಹೊಸದುರ್ಗ ಪಟ್ಟಣದಲ್ಲಿ ಕುತ್ತಿಗೆ ಕೊಯ್ದು ವೃದ್ದರಿಬ್ಬರ ಹತ್ಯೆ

ಕೂಡಲೇ ಆತ ಮನೆಯಲ್ಲಿದ್ದ ತನ್ನ 26 ವರ್ಷದ ಸಹೋದರಿಗೆ ವಿಚಾರ ತಿಳಿಸಿದ್ದಾನೆ. ನಂತರ ಆಕೆ ಪೊಲೀಸರಿಗೆ ಕರೆ ಮಾಡಿದ್ದಾರೆ. ನಂತರ ಬಾಲಕನ ಸಂಬಂಧಿಕರು ಕೂಡ ಅಲ್ಲಿಗೆ ಬಂದಿದ್ದು, ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಈ ವೇಳೆ ಆತ ಉದ್ದೇಶಪೂರ್ವಕವಾಗಿ ತಾಯಿಯನ್ನು ಹತ್ಯೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ನ್ಯೂಯಾರ್ಕ್ ಪೋಸ್ಟ್ (New York Post) ವರದಿಯ ಪ್ರಕಾರ ಘಟನೆಯ ನಂತರ ಬಾಲಕನ ಚಿಕ್ಕಮ್ಮ (Aunt) ಆತನನ್ನು ಎತ್ತಿಕೊಂಡು ವಿಚಾರಿಸಿದಾಗ, ಮನೆಯಲ್ಲಿ ಬಂದೂಕು ಇರಿಸಿದ ಜಾಗಕ್ಕೆ ಆತನಿಗೂ ಪ್ರವೇಶಿಸಲು ಅವಕಾಶವಿತ್ತು ಎಂದು ತಿಳಿದು ಬಂದಿದೆ. ನಂತರ ಆತನನ್ನು ಮತ್ತೆ ಮತ್ತೆ ಪ್ರಶ್ನಿಸಿದಾಗ ಆತ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಘಟನೆಯ ಬಗ್ಗೆ ನನಗೆ ವಿಷಾದವಿದೆ. ನನ್ನ ತಾಯಿಯನ್ನು (Mother) ಕೊಂದಿದ್ದಕ್ಕಾಗಿ ನನ್ನನ್ನು ಕ್ಷಮಿಸಿ ಎಂದು ಯಾವುದೇ ದುಃಖ ವಿಷಾದವಿಲ್ಲದ ಮುಖದಿಂದ ಹೇಳಿದ ಎಂದು ವರದಿ ಆಗಿದೆ. 

ಪ್ರೀತಿ ಉಳಿಸಿಕೊಳ್ಳಲು ಮರ್ಡರ್‌.. ಬಾಯ್‌ಫ್ರೆಂಡ್‌ ಜೊತೆ ಸೇರಿ ಯುವತಿಯ ಕೊಲೆ ಮಾಡಿದ್ಲು ಸುಂದರಿ!

ಇಷ್ಟೇ ಅಲ್ಲದೇ ಆತ ತಾಯಿಯನ್ನು ಕೊಂದ ಮಾರನೇ ದಿನವೇ ಅಮ್ಮನ ಅಮೆಜಾನ್ ಖಾತೆಯಲ್ಲಿ (Amazon) ಲಾಗಿನ್ ಆಗಿ ಆಕ್ಯುಲಸ್ ವರ್ಚುವಲ್ ರಿಯಾಲಿಟಿ ಹೆಡ್‌ಸೆಟ್ (Oculus Virtual Reality headset) ಖರೀದಿಸಿದ ಎಂದು ತಿಳಿದು ಬಂದಿದೆ. ಆದರೆ ಈ ಬಾಲಕ ಸಂಬಂಧಿಗಳ ಪ್ರಕಾರ ಈ ಬಾಲಕನಿಗೆ ಮಾನಸಿಕ ಸ್ಥಿರತೆ ಇಲ್ಲ ಎಂದು ತಿಳಿದು ಬಂದಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ (World Health Organization) , ಎಳೆಯ ಮಕ್ಕಳು ಹಾಗೂ ಅಪ್ರಾಪ್ತರಿಂದ ನಡೆಯುವ ಅಪರಾಧವೂ ಜಾಗತಿಕ ಸಮಸ್ಯೆಯಾಗಿದ್ದು(global problem), ಪ್ರತಿವರ್ಷ ಜಾಗತಿಕವಾಗಿ 2 ಲಕ್ಷ ಹತ್ಯೆಗಳು ಅಪ್ರಾಪ್ತರಿಂದ ನಡೆಯುತ್ತವೆ ಎಂದು ವರದಿ ಮಾಡಿದೆ. ಅದರಲ್ಲೂ 10 ರಿಂದ 29 ವರ್ಷ ಪ್ರಾಯದ ಒಳಗಿನ ಮಕ್ಕಳು ಈ ಕೃತ್ಯವೆಸಗುತ್ತಿದ್ದಾರೆ ಎಂದು ತಿಳಿದು ಬಂದಿದೆ. 

Follow Us:
Download App:
  • android
  • ios