Asianet Suvarna News Asianet Suvarna News

ಹೆಣ್ಣು ಮಗು ಹುಟ್ಟಲಿಲ್ಲವೆಂದು ತನ್ನ ನವಜಾತ ಗಂಡು ಶಿಶುವನ್ನು ಕೊಂದ ಪಾಪಿ ತಂದೆ!

ಮದ್ಯದ ಅಮಲಿನಲ್ಲಿ ವ್ಯಕ್ತಿಯೊಬ್ಬ ತನ್ನ ನವಜಾತ ಮಗನನ್ನು ಕೊಂದಿರುವ ಘಟನೆ ಮಧ್ಯಪ್ರದೇಶದ ಬೇತುಲ್ ಜಿಲ್ಲೆಯಲ್ಲಿ ನಡೆದಿದೆ.

Upset about not having daughter man kills newborn son in  Madhya Pradesh's Betul district gow
Author
First Published Jan 15, 2024, 10:53 PM IST

ಬೇತುಲ್ (ಜ.15): ಮದ್ಯದ ಅಮಲಿನಲ್ಲಿ ವ್ಯಕ್ತಿಯೊಬ್ಬ ತನ್ನ ನವಜಾತ ಮಗನನ್ನು ಕೊಂದಿರುವ ಘಟನೆ ಮಧ್ಯಪ್ರದೇಶದ ಬೇತುಲ್ ಜಿಲ್ಲೆಯಲ್ಲಿ ನಡೆದಿದೆ. ಈ ಕೊಲೆಗೆ ಕಾರಣ ಅನೇಕರನ್ನು ಬೆಚ್ಚಿಬೀಳಿಸಿದೆ. ಕೊಲೆಗಾರನಿಗೆ ಮಗಳು ಹುಟ್ಟಬೇಕೆಂಬ ಆಸೆ ಇತ್ತು ಮತ್ತು ಆದ್ದರಿಂದ ತನ್ನ ಗಂಡು ಮಗುವನ್ನು ಕೊಂದನು. 

ವರದಿಗಳ ಪ್ರಕಾರ, ಬಜ್ಜರವಾಡ ಗ್ರಾಮದ ವ್ಯಕ್ತಿ ಅನಿಲ್ ಉಯಿಕೆ ಎಂಬಾತ ಕಂಠ ಪೂರ್ತಿ ಕುಡಿದುಕೊಂಡು ತನ್ನ ಹೆಂಡತಿಯ ಮೇಲೆ ಹಲ್ಲೆ ಮಾಡಿದ್ದಾನೆ. ಈ ವೇಳೆ ಆಕೆಯ ಕೈಯಿಂದ 12 ದಿನದ ಮಗುವನ್ನು ಕಿತ್ತುಕೊಂಡಿದ್ದಾನೆ. ಮಹಿಳೆಗೆ ತೀವ್ರವಾಗಿ ಥಳಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ.

17ನೇ ವಯಸ್ಸಿನಲ್ಲಿ ವಿವಾಹವಾಗಿ ವಿಚ್ಚೇದನ ಪಡೆದ ನಟಿ ಹಿಟ್‌ ಸಿನೆಮಾಕ್ಕಾಗಿ 33 ವರ್ಷಗಳೇ ಕಾಯಬೇಕಾಯ್ತು!

ದಂಪತಿಗೆ ಈಗಾಗಲೇ 2 ಗಂಡು ಮಕ್ಕಳಿದ್ದು, ಪತ್ನಿ ಮೂರನೇ ಬಾರಿಗೆ ಗರ್ಭಿಣಿಯಾದಾಗ  ಮಗಳನ್ನು ಹೊಂದುವ ನಿರೀಕ್ಷೆಯಲ್ಲಿದ್ದರು. ಆದರೆ ಪತ್ನಿ ಮೂರನೇ ಬಾರಿಗೂ ಮಗನಿಗೆ ಜನ್ಮ ನೀಡಿದಾಗ ಅವನ ನಿರೀಕ್ಷೆಗಳು ಹುಸಿಯಾದವು. ಹೀಗಾಗಿ ಕುಡಿದು ಬಂದು ಗಲಾಟೆ ಮಾಡಿ ಅವನು ತನ್ನ ಹೆಂಡತಿಯಿಂದ ಮಗುವನ್ನು ಕಸಿದುಕೊಂಡು ಅವರ ಗುಡಿಸಲಿನಲ್ಲಿ ಕೊಂದನು.  ಪತ್ನಿ ಮನೆಗೆ ಮರಳಿದ ಬಳಿಕ ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ.

ಪಾಕಿಸ್ತಾನಿ ಕ್ರಿಕೆಟಿಗನೊಂದಿಗೆ ಸಂಬಂಧ ಹೊಂದಿ ಬ್ರೇಕಪ್‌ ಬಳಿಕ ಗೆಳತಿಯ ಗಂಡನನ್ನೇ ಮದುವೆಯಾದ ನಟಿ!

ಗ್ರಾಮದ ಕೊತ್ವಾಲಿ ಪೊಲೀಸ್ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕೊಲೆಗಾರ ಅಪ್ಪ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದು ಠಾಣಾಧಿಕಾರಿ ಆಶಿಶ್ ಸಿಂಗ್ ಪವಾರ್ ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಮಗುವಿನ ಕುತ್ತಿಗೆಯಲ್ಲಿ ಕತ್ತು ಹಿಸುಕಿದ ಗುರುತುಗಳು ಗೋಚರಿಸಿವೆ. ಅಧಿಕಾರಿಗಳ ಪ್ರಕಾರ ಮಗು ಕತ್ತು ಹಿಸುಕಿ ಸಾವನ್ನಪ್ಪಿದೆ ಎಂದು ಸ್ಪಷ್ಟವಾಗಿದ್ದರೂ,  ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದ್ದು, ಶೀಘ್ರದಲ್ಲೇ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿಗಳು ಹೇಳಿದರು. 

Follow Us:
Download App:
  • android
  • ios