ಸ್ನೇಹಿತರನ್ನು ಮನೆಗೆ ಕಳುಹಿಸಿ ಸೌದಿಯಿಂದ ವಿಡಿಯೋ ನೋಡ್ತಿದ್ದ ಗಂಡ: 4 ಮಕ್ಕಳ ಅಮ್ಮನ ಭಯಾನಕ ಕಥೆ ಕೇಳಿ!
ಸೌದಿ ಅರೇಬಿಯಾದಲ್ಲಿ ಇರುವ ಪತಿ ತನ್ನ ಸ್ನೇಹಿತರನ್ನು ಮನೆಗೆ ಕಳುಹಿಸಿ ಕ್ರೂರ ಕೃತ್ಯಕ್ಕೆ ಆಸ್ಪದ ನೀಡುತ್ತಿದ್ದ ಬಗ್ಗೆ ಮಹಿಳೆ ತೆರೆದಿಟ್ಟ ಭಯಾನಕ ಸ್ಟೋರಿ ಇದು...
ಈ ಪ್ರಪಂಚದಲ್ಲಿ ಅದೆಂಥ ವಿಕೃತ ಮನಸ್ಸಿನವರು ಇರುತ್ತಾರೆ ಎಂದು ಹೇಳುವುದೇ ಕಷ್ಟ. ಕೆಲವೊಮ್ಮೆ ನಿಜಕ್ಕೂ ಮನುಷ್ಯರು ಇಷ್ಟು ನೀಚರಾಗಲು ಸಾಧ್ಯನೇ ಎಂದೂ ಎನ್ನಿಸುವುದು ಉಂಟು. ಕಟ್ಟಿಕೊಂಡ ಪತ್ನಿಯನ್ನೇ ಸ್ನೇಹಿತರ ಪಾಲು ಮಾಡಿ, ಆ ದೃಶ್ಯಗಳ ವಿಡಿಯೋ ನೋಡುವ ಮನಸ್ಥಿತಿಯ ಗಂಡಸರು ಇರಲು ಸಾಧ್ಯವೇ ಎಂದು ಊಹಿಸಿಕೊಳ್ಳಲೂ ಸಾಧ್ಯವಿಲ್ಲದ ಘಟನೆಗಳೂ ನಮ್ಮ ಸುತ್ತಲೂ ನಡೆಯುತ್ತಲೇ ಇರುತ್ತವೆ. ಆದರೆ ಮಹಿಳೆಯರು ಮಾನಕ್ಕೆ ಅಂಜಿ ಯಾರ ಬಳಿಯೂ ಹೇಳಿಕೊಳ್ಳದೇ ಇಂಥ ನೋವುಗಳನ್ನು ನುಂಗಿಕೊಂಡು ಬದುಕು ಸವೆಸುತ್ತಿದ್ದಾರೆ. ಅಂಥದ್ದೇ ಒಂದು ಘಟನೆ ಉತ್ತರ ಪ್ರದೇಶದ ಮೀರತ್ನ ಬುಲಂದ್ಶಹರ್ನಲ್ಲಿ ನಡೆದಿದೆ.
ನಾಲ್ಕು ಮಕ್ಕಳ ಅಮ್ಮನಾಗಿರುವ 35 ವರ್ಷದ ಮಹಿಳೆಯೊಬ್ಬರ ಭಯಾನಕ, ಕರಾಳ ಕಥೆ ಇದು. ಸೌದಿ ಅರೇಬಿಯಾದಲ್ಲಿ ಇರುವ ಈಕೆಯ ಪತಿ, ಕಳೆದ ಮೂರು ವರ್ಷಗಳಿಂದ ತನ್ನ ಸ್ನೇಹಿತರನ್ನು ಪತ್ನಿಯಿರುವಲ್ಲಿಗೆ ಕಳುಹಿಸಿ ಅತ್ಯಾಚಾರ ಮಾಡಲು ಹೇಳಿ, ಅದರ ವಿಡಿಯೋ ರಿಕಾರ್ಡ್ ಮಾಡಿಸಿಕೊಂಡು ನೋಡುತ್ತಿದ್ದ ಕ್ರೂರ ಘಟನೆ ಇದಾಗಿದೆ. ಸ್ನೇಹಿತರು ಆತನಿಗೆ ದುಡ್ಡು ಕೊಡುತ್ತಾರೆ ಎನ್ನುವ ಕಾರಣಕ್ಕೆ ಈ ಕೃತ್ಯ ಮಾಡಲಾಗುತ್ತಿದೆ ಎಂದು ಮಹಿಳೆ ಹೇಳಿದ್ದಾರೆ. ದುಡ್ಡು ಪಡೆಯುವುದಕ್ಕಾಗಿ ಗಂಡ ಈ ರೀತಿ ಮಾಡುತ್ತಿದ್ದ. ತಮ್ಮ ಮೇಲೆ ರೇಪ್ ಮಾಡಿದ ಬಳಿಕ ಅದರ ವಿಡಿಯೊ ಮಾಡಿಕೊಳ್ಳುತ್ತಿದ್ದ ಆತನ ಸ್ನೇಹಿತರು ನಂತರ ಅದನ್ನು ಗಂಡನಿಗೆ ಕಳುಹಿಸುತ್ತಿದ್ದರು ಎಂದು ಮಹಿಳೆ ದೂರಿದ್ದಾರೆ.
ಅಲ್ಲಾ ಹು ಅಕ್ಬರ್ ಹೇಳಿಯೇ ಹಲಾಲ್ ಮಾಡಿದ್ರಿ ತಾನೆ? ಇಲ್ಲಾಂದ್ರೆ... ಹೋಟೆಲ್ನಲ್ಲಿ ನಟಿ ಸನಾ ಖಾನ್ ವಿಡಿಯೋ ವೈರಲ್
ಪತಿ ತನ್ನಿಂದ ದೂರವಾದರೆ ತನ್ನ ಮತ್ತು ಮಕ್ಕಳ ಗತಿಯೇನು ಎಂದುಕೊಂಡು ಮಹಿಳೆ ಮೂರು ವರ್ಷಗಳಿಂದ ಸುಮ್ಮನಿರುವುದಾಗಿ ಹೇಳಿದ್ದಾರೆ. ಈಗ ಮಹಿಳೆ ಎರಡು ತಿಂಗಳ ಗರ್ಭಿಣಿ. ಎರಡು ವರ್ಷಗಳಿಗೊಮ್ಮೆ ಸೌದಿಯಿಂದ ಪತಿ ಮನೆಗೆ ಬರುತ್ತಿದ್ದ. ಆ ಸಮಯದಲ್ಲಿ ಹಲವು ಬಾರಿ ಮಹಿಳೆ ಮನವಿ ಮಾಡಿಕೊಂಡರೂ ಪ್ರಯೋಜನ ಆಗಿರಲಿಲ್ಲ. ಬೇಕಾದಷ್ಟು ದುಡ್ಡು ಕೊಡುತ್ತಾರೆ. ಅದು ಮಕ್ಕಳಿಗೆ ಆಗುತ್ತದೆ. ಬಾಯಿಮುಚ್ಚಿಕೊಂಡಿರು ಎಂದು ಗದರಿ ಹೋಗುತ್ತಿರುವುದಾಗಿ ಮಹಿಳೆ ಹೇಳಿದ್ದಾರೆ. "ನನ್ನ ಪತಿ ಸೌದಿ ಅರೇಬಿಯಾದಲ್ಲಿ ಕುಳಿತು ಮೊಬೈಲ್‌ನಲ್ಲಿ ವೀಡಿಯೊಗಳನ್ನು ನೋಡುತ್ತಿದ್ದರು. ಮಕ್ಕಳ ಹಿತದೃಷ್ಟಿಯಿಂದ ನಾನು ಮೌನವಾಗಿದ್ದೆ, ಏಕೆಂದರೆ ನಾನು ಬಾಯಿ ಬಿಟ್ಟರೆ ಡಿವೋರ್ಸ್ ನೀಡುವುದಾಗಿ ಬೆದರಿಕೆ ಹಾಕುತ್ತಿದ್ದರು" ಎಂದಿದ್ದಾರೆ ಮಹಿಳೆ.
2010 ರಲ್ಲಿ ಬುಲಂದ್‌ಶಹರ್‌ನ ಗುಲಾತಿ ಮೂಲದ ವ್ಯಕ್ತಿಯನ್ನು ಮದುವೆಯಾಗಿದ್ದ ಮಹಿಳೆಗೆ ಈಗ ನಾಲ್ಕು ಮಕ್ಕಳಿದ್ದಾರೆ - ಇಬ್ಬರು ಗಂಡು ಮಕ್ಕಳು (13 ಮತ್ತು 3 ವರ್ಷ) ಮತ್ತು ಇಬ್ಬರು ಹೆಣ್ಣು ಮಕ್ಕಳು (11 ಮತ್ತು 7 ವರ್ಷ). ಆಕೆಯ ಪತಿ ಸೌದಿ ಅರೇಬಿಯಾದಲ್ಲಿ ಆಟೋಮೊಬೈಲ್ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದಾನೆ. ವರ್ಷಕ್ಕೆ ಒಂದು ಅಥವಾ ಎರಡು ಬಾರಿ ಮನೆಗೆ ಬರುತ್ತಾನೆ. ಈಗಲೂ ಮಹಿಳೆ ಸುಮ್ಮನೇ ಇರುತ್ತಿದ್ದರು. ಆದರೆ ಈಚೆಗೆ ಪತಿ ಮನೆಗೆ ಬಂದಾಗ ಇದೇ ವಿಷಯವಾಗಿ ಇಬ್ಬರ ನಡುವೆ ಜಗಳ ವಿಕೋಪಕ್ಕೆ ಹೋಗಿದೆ. ಆಗ, ಮಹಿಳೆಯ ಸಹೋದರ ಎಂಟ್ರಿ ಕೊಟ್ಟಿದ್ದಾರೆ. ಆಗಲೇ ಅವರಿಗೆ ವಿಷಯ ತಿಳಿದಿದೆ. ತಮ್ಮ ಸಹೋದರಿ ಮೂರು ವರ್ಷಗಳಿಂದ ಅನುಭವಿಸುತ್ತಿರುವ ಕ್ರೌರ್ಯದ ಬಗ್ಗೆ ತಿಳಿಯುತ್ತಲೇ ಪೊಲೀಸರಲ್ಲಿ ದೂರು ದಾಖಲಿಸುವಂತೆ ಧೈರ್ಯ ತುಂಬಿದ್ದರಿಂದ ಮಹಿಳೆ ಈಗ ದೂರು ದಾಖಲು ಮಾಡಿಕೊಂಡಿದ್ದಾರೆ. ಮಹಿಳೆ ಸಹೋದರನ ಜೊತೆಗೂಡಿ ಬುಲಂದ್‌ಶಹರ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಶ್ಲೋಕ್ ಕುಮಾರ್ ಅವರನ್ನು ಭೇಟಿ ಮಾಡಿ ಈ ವಿಷಯದಲ್ಲಿ ದೂರು ದಾಖಲಿಸಿದ್ದಾರೆ. ದೂರು ಸ್ವೀಕರಿಸಲಾಗಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಎಸ್‌ಎಸ್‌ಪಿ ತಿಳಿಸಿದ್ದಾರೆ. ಸ್ಥಳೀಯ ಪೊಲೀಸರು ಸಂಪೂರ್ಣ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ" ಎಂದು ಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ದರೋಡೆಗೆ ಬಂದವ ಮುತ್ತು ಕೊಟ್ಟು ಪರಾರಿಯಾದ! ಕಳ್ಳನ ಬಗ್ಗೆ ನೆಟ್ಟಿಗರ ಅನುಕಂಪ: ಏನಿದು ಸ್ಟೋರಿ?