ಕೊಯಂಬತ್ತೂರು(ನ. 13)  ಎಂತೆಂಥಾ ವಿಧಾನದಲ್ಲಿ ಚಿನ್ನ ಕಳ್ಳ ಸಾಗಾಟ ಮಾಡ್ತಾರೆ. ಈಗ ಅದೆ ಸಾಳಿಗೆ ಮತ್ತೊಂದು ಸೇರ್ಪಡೆಯಾಗಿದೆ. ಸ್ಯಾನಿಟರಿ ಪ್ಯಾಡ್ ನಲ್ಲಿ ಚಿನ್ನ ಇಟ್ಟುಕೊಂಡು ಸಾಗಾಟ ಮಾಡುತ್ತಿದ್ದ ಇಬ್ಬರು ಮಹಿಳೆಯರನ್ನು ಬಂಧಿಸಲಾಗಿದೆ.

ಕೊಯಂಬತ್ತೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ  ಕಸ್ಟಮ್ಸ್ ಅಧಿಕಾರಿಗಳ ಬಲೆಗೆ ಮಹಿಳೆಯರು ಬಿದ್ದಿದ್ದಾರೆ.  ದೇವಾನಿ ರಾಧಾಕೃಷ್ಣನಾ ಮತ್ತು ವಾಸಂತಿ ರಾಮಸ್ವಾಮಿ  ಎಂಬುವರು ಚಿನ್ನ ಕಳ್ಳಸಾಗಾಟ ಮಾಡುತ್ತಿದ್ದರು.

ಯುವತಿ ಕಂಡ ತಕ್ಷಣ ಪ್ಯಾಂಟ್ ಬಿಚ್ಚಿದ ವಿಕೃತ ಬೆಂಗಳೂರಲ್ಲಿ ಅರೆಸ್ಟ್

ಶಾರ್ಜಾದಿಂದ ಮುಂಜಾನೆ 3: 30 ಕ್ಕೆ ಆಗಮಿಸಿದ ಏರ್ ಅರೇಬಿಯಾ ವಿಮಾನದಲ್ಲಿ ಮಹಿಳೆಯರಿದ್ದರು.  ಮೆಟಲ್ ಡಿಟೆಕ್ಟರ್ ಬಳಸಿ ಪರಿಶೀಲಿಸಿದಾಗ ಅನುಮಾನ ಬಂದಿದೆ.  ಪರಿಶೀಲನೆ ನಡೆಸಿದಾಗ ಚಿನ್ನವನ್ನು ಪೇಸ್ಟ್ ರೀತಿ ಇಟ್ಟುಕೊಂಡಿದ್ದು ಗೊತ್ತಾಗಿದೆ.

ಸ್ಯಾನಿಟರಿ ಪ್ಯಾಡ್‌ಗಳ ಒಳಗೆ ಚಿನ್ನವನ್ನು ಪೇಸ್ಟ್ ರೂಪದಲ್ಲಿ  ಇಟ್ಟುಕೊಂಡಿದ್ದು ಮಹಿಳೆಯರನ್ನು ಬಂಧನ ಮಾಡಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ವಿಮಾನದಲ್ಲಿ ಆಗಮಿಸಿದ ಐದು ಪುರುಷರಿಂದಲೂ ಚಿನ್ನ ವಶಕ್ಕೆ ಪಡೆಯಲಾಗಿದೆ.  46 ಲಕ್ಷ ರೂಪಾಯಿ ಮೌಲ್ಯದ ಚಿನ್ನ, ಮದ್ಯ ಮತ್ತು ಸಿಗರೇಟ್ ಸಹ ಸಿಕ್ಕಿದೆ.