Asianet Suvarna News Asianet Suvarna News

ತ್ರಿಕೋನ ಪ್ರೇಮ ಪ್ರಕರಣ: ಓರ್ವ ಹುಡುಗಿಗಾಗಿ ವಿದ್ಯಾರ್ಥಿಗಳ ಮಾರಾಮಾರಿ, ಚಾಕು ಇರಿತ

ಓರ್ವ ಹುಡುಗಿ ಸಂಬಂಧ ಮೂವರು ವಿದ್ಯಾರ್ಥಿಗಳು ಕಿತ್ತಾಡಿಕೊಂಡು, ಹೊಡೆದಾಡಿದ್ದಾರೆ. ಅಲ್ಲದೇ ಚಾಕು ಇರಿತ ಉಂಟಾಗಿದ್ದು, ಜನತೆ ಬೆಚ್ಚಿ ಬೀಳುವಂತೆ ಮಾಡಿದೆ.

two students hospitalized over Fighting for Love In Kodagu rbj
Author
Bengaluru, First Published Aug 13, 2022, 10:12 PM IST

ಕೊಡಗು, (ಆಗಸ್ಟ್. 13): ಲವ್ ವಿಷಯಕ್ಕೆ ಸಂಬಂಧಿಸಿದಂತೆ ಕೊಡಗಿನ ಪ್ರಸಿದ್ಧ ಕಾವೇರಿ ನಿಸರ್ಗಧಾಮದಲ್ಲಿ ಮೂವರು ವಿದ್ಯಾರ್ಥಿಗಳ ನಡುವೆ ಮಾರಾಮಾರಿಯಾಗಿದೆ. ತ್ರಿಕೋನ ಪ್ರೇಮ ಪ್ರಕರಣ ಸಂಬಂಧ ವಿದ್ಯಾರ್ಥಿಗಳು ಹೊಡೆದಾಕೊಂಡಿದ್ದು, ಚಾಕು ಇರಿತ ಕೂಡ ಉಂಟಾಗಿದೆ.

 ಕೊಡಗು ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾದ ಕಾವೇರಿ ನಿಸರ್ಗಧಾಮದಲ್ಲಿ ಇಂದು(ಶನಿವಾರ) ಮೂವರು ವಿದ್ಯಾರ್ಥಿಗಳ ನಡುವೆ ಮಾರಾಮಾರಿ ನಡೆದಿದೆ. ಓರ್ವ ಹುಡುಗಿ ಸಂಬಂಧ ಮೂವರು ವಿದ್ಯಾರ್ಥಿಗಳು ಕಿತ್ತಾಡಿಕೊಂಡು, ಹೊಡೆದಾಡಿದ್ದಾರೆ.

ವಿವಾಹ ವಿಚ್ಛೇದನ ಕೇಸ್: ಕೋರ್ಟ್‌ ಆವರಣದಲ್ಲೇ ಪತ್ನಿ ಕತ್ತು ಕೊಯ್ದು ಹತ್ಯೆಗೈದ ಪತಿ

ಇನ್ನೂ ವಿದ್ಯಾರ್ಥಿಗಳ ಹೊಡೆದಾಟ, ಮಾರಾಮಾರಿ ತಾರಕ್ಕೇರಿದ ಸಂದರ್ಭದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಇಬ್ಬರು ವಿದ್ಯಾರ್ಥಿಗಳಿಗೆ ಚಾಕುವಿನಿಂದ ಇರಿದಿದ್ದಾನೆ. ಚಾಕು ಇರಿತದಲ್ಲಿ ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.

ಸೋನಿಕಾ, ಪ್ರವೀಣ್ ಎಂಬಾತನಿಗೆ ವಿಜಯ್ ಎಂಬುವರು ಚಾಕುವಿನಿಂದ ಇರಿದಿದ್ದಾರೆ. ಹಲವು ಜನರ ನಡುವೆ ವಿದ್ಯಾರ್ಥಿಗಳ ಚಾಕು ಇರಿತ ಕಂಡು, ಜನರು ಬೆಚ್ಚಿ ಬಿದ್ದಿದ್ದಾರೆ. ಚಾಕು ಇರಿತಕ್ಕೆ ಒಳಗಾದಂತ ಸೋನಿಕಾ, ಪ್ರವೀಣ್ ನನ್ನು ಕುಶಾಲನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯರೇ ಚಾಕು ಇರಿದಂತ ವಿಜಯ್ ನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ಕುಶಾಲನಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿದ್ದಾರೆ.
 

Follow Us:
Download App:
  • android
  • ios