Asianet Suvarna News Asianet Suvarna News

ಕಾವೇರಿ ನದಿಯಲ್ಲಿ ಕೊಚ್ಚಿಹೋದ ಇಬ್ಬರು ಇಸ್ಕಾನ್ ಸನ್ಯಾಸಿಗಳು

ನೀರಿನಲ್ಲಿ ಕೊಚ್ಚಿಹೋದ ಇಬ್ಬರು ಇಸ್ಕಾನ್ ಸನ್ಯಾಸಿಗಳು, ಕಾವೇರಿ ನದಿಯಲ್ಲಿ ಕೊಚ್ಚಿಹೋದ ಇಬ್ಬರು ಇಸ್ಕಾನ್ ಸನ್ಯಾಸಿಗಳು, ಶವಗಳಿಗಾಗಿ ಅಗ್ನಿಶಾಮಕ ಸಿಬ್ಬಂದಿಯಿಂದ ತೀವ್ರ ಶೋಧ

Two peoples drowns in cauvery river at Mysuru rbj
Author
Bengaluru, First Published Oct 16, 2020, 10:22 PM IST
  • Facebook
  • Twitter
  • Whatsapp

ಶ್ರೀರಂಗಪಟ್ಟಣ, (ಅ.16): ಕಾವೇರಿ ನದಿಯಲ್ಲಿ ಸ್ನಾನ ಮಾಡಲು ತೆರಳಿದ್ದ ಮೈಸೂರು ಇಸ್ಕಾನ್ ದೇವಸ್ಥಾನದ ಇಬ್ಬರು ಸನ್ಯಾಸಿಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದು, ಮೃತ ದೇಹಕ್ಕಾಗಿ ಪೊಲೀಸರು ಮತ್ತು ಅಗ್ನಿಶಾಮಕದಳದ ಸಿಬ್ಬಂದಿ ತೀವ್ರ ಶೋಧ ಕಾರ್ಯ ಕೈಗೊಂಡಿದ್ದಾರೆ. 

ಬೆಂಗಳೂರಿನ ಆರ್.ಎಸ್.ದಾಸ್ (43) ಹಾಗೂ ಚಿತ್ರದುರ್ಗ ಟೌನ್ ನಿವಾಸಿ ಗುಣಾರನವದಾಸ್ (35) ಮೃತರು. ತಾಲೂಕಿನ ಮಹದೇವಪುರ ಗ್ರಾಮದ ಹೊರವಲಯದಲ್ಲಿರುವ ಇಸ್ಕಾನ್ ಸಂಸ್ಥೆಯ ಹರೇ ಕೃಷ್ಣ ಫಾರ್ಮ್‌ನಲ್ಲಿ ಮಧ್ಯಾಹ್ನ ಘಟನೆ ನಡೆದಿದೆ. ಪ್ರಸ್ತುತ ಮೈಸೂರಿನ ಇಸ್ಕಾನ್ ದೇವಾಲಯದಲ್ಲಿ ಹಲವು ವರ್ಷಗಳಿಂದ ಇವರು ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ. 

ಪಾಕ್‌ನಲ್ಲಿ 'ಸ್ವರ್ಗ' ಕಂಡ ರಾಹುಲ್, ರಾಧಿಕಾ ವೀಡಿಯೋ ವೈರಲ್: ಅ.16ರ ಟಾಪ್ 10 ಸುದ್ದಿ!

ಘಟನೆ ವಿವರ: 
ಆರ್.ಎಸ್.ದಾಸ್ ಹಾಗೂ ಗುಣಾರನವದಾಸ್ ಈ ಇಬ್ಬರು ತಮ್ಮ ಇತರ ಸಹೋದ್ಯೋಗಿಗಳೊಂದಿಗೆ ಶುಕ್ರವಾರ ತಾಲೂಕಿನ ಇಸ್ಕಾನ್ ಸಂಸ್ಥೆಗೆ ಸೇರಿದ ಹರೇ ಕೃಷ್ಣ ಫಾರ್ಮ್‌ನ ದೇವಾಲಯದಲ್ಲಿ ನಡೆಯುತ್ತದ್ದ ಭಜನೆಗಾಗಿ ಆಗಮಿಸಿದ್ದರು. ದೇವರ ದರ್ಶನಕ್ಕೆ ಮಡಿಗೊಳ್ಳಲು ಫಾರ್ಮ್‌ನ ಸಮೀಪದಲ್ಲಿರುವ ಕಾವೇರಿ ನದಿಯಲ್ಲಿ ಸ್ನಾನ ಮಾಡಲು ನದಿಗಿಳಿದಿದ್ದಾರೆ. 

ಈ ಸಮಯದಲ್ಲಿ ನೀರಿನ ಸೆಳೆತಕ್ಕೆ ಸಿಲುಕಿ ದಡದಲ್ಲಿದ್ದ ಆರ್.ಎಸ್.ದಾಸ್ ಮೊದಲು ಕಾಲುಜಾರಿ ಬಿದ್ದು ಕೊಚ್ಚಿಹೋದರು. ಇವರನ್ನು ರಕ್ಷಿಸಲು ಗುಣಾರನವದಾಸ್ ಮುಂದಾದ ವೇಳೆ ಅವರೂ ಸಹ ನೀರಿನಲ್ಲಿ ಕೊಚ್ಚಿಹೋಗಿದ್ದಾರೆ ಎಂದು ಸ್ಥಳದಲ್ಲಿದ್ದವರು ಮಾಹಿತಿ ನೀಡಿದ್ದಾರೆ. 

ವಿಷಯ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ಠಾಣೆ ಸಿಬ್ಬಂದಿ, ಅರಕೆರೆ ಠಾಣೆ ಪೊಲೀಸರು ಆಗಮಿಸಿ ಸ್ಥಳಿಯರ ನೆರವಿನೊಂದಿಗೆ ದೋಣಿಯಲ್ಲಿ ಕಾರ್ಯಚರಣೆ ಕೈಗೊಂಡಿದ್ದಾರೆ. 

ತಾಲೂಕು ಹರೇ ಕೃಷ್ಣ ಫಾರ್ಮ್‌ನ ಮುಖ್ಯಸ್ಥ ಕೃಷ್ಣದಾಸ್ ಸ್ಥಳದಲ್ಲೆ ಹಾಜರಿದ್ದು, ಇವರ ಜೊತೆಯಲ್ಲಿದ್ದ ಇತರರನ್ನು ಸಂತೈಸಿದ್ದಾರೆ. ಈ ಸಂಬಂಧ ಅರಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow Us:
Download App:
  • android
  • ios