Bengaluru News: ಡ್ರಗ್ಸ್‌ ದಂಧೆ: ನೈಜೀರಿಯಾದ ಖ್ಯಾತ ಯುಟ್ಯೂಬರ್‌ ಸೇರಿ ಇಬ್ಬರ ಬಂಧನ

Nigerian Citizens Arrested For Drug Peddling in Bengaluru: ಡ್ರಗ್ಸ್ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಪ್ರಖ್ಯಾತ ಯುಟ್ಯೂಬರ್ ಸೇರಿ ಇಬ್ಬರು ನೈಜಿರಿಯಾ ಪ್ರಜೆಗಳನ್ನು ಪೊಲೀಸರು ಬಂಧಿಸಿದ್ದಾರೆ.

Two Nigerian Citizens arrested including famous youtuber for Drug Peddling in bengaluru mnj

ಬೆಂಗಳೂರು (ಜು. 09): ಡ್ರಗ್ಸ್ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಪ್ರಖ್ಯಾತ ಯುಟ್ಯೂಬರ್ ಸೇರಿ ಇಬ್ಬರು ನೈಜಿರಿಯಾ ಪ್ರಜೆಗಳನ್ನು (Nigeria Citizens) ಕಾಡುಗೊಂಡನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ನೈಜಿರಿಯಾ ದೇಶದ ಓಬೆಜಿ ಜಸ್ಟಿಸ್ ಅಲಿಯಾಸ್ ಎಂಎಂಡಿ ಮೋಲಾ(31) (MMD MOLA) ಮತ್ತು ಸಾಮ್ಯುಯಲ್ (37) ಬಂಧಿತರು.  ಆರೋಪಿಗಳಿಂದ 30 ಸಾವಿರ ರೂ ಮೌಲ್ಯದ 15 ಗ್ರಾಂ ಎಂಡಿಎಂಎ ಕ್ರಿಸ್ಟಲ್, 2 ಮೊಬೈಲ್, 1,200 ರೂ. ನಗದು ಜಪ್ತಿ ಮಾಡಲಾಗಿದೆ. 

ಇಬ್ಬರ ವೀಸಾ ಅವಧಿ ಮುಕ್ತಾಯಗೊಂಡು ಒಂದು ವರ್ಷಗಳಾಗಿದ್ದು, ಈ ಹಿಂದೆ ಪೂರ್ವ ವಿಭಾಗದ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ನಗರದಲ್ಲಿಯೇ ಅಕ್ರಮವಾಗಿ ವಾಸವಾಗಿದ್ದರು. ಜೀವನ ನಿರ್ವಹಣೆಗಾಗಿ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದರು ಎಂದು ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ಪ್ರಕರಣದ ಕುರಿತು ಮಾಹಿತಿ ನೀಡಿದ್ದಾರೆ.  

ಆರೋಪಿಗಳ ಪೈಕಿ ಓಬೆಜಿ ಜಸ್ಟಿಸ್ ನೈಜಿರಿಯಾದಲ್ಲಿ ಎಂಎಂಡಿ ಮೋಲಾ ಎಂಬ ಹೆಸರಿನಲ್ಲಿ ಪ್ರಖ್ಯಾತ ಯುಟ್ಯೂಬರ್ ಆಗಿದ್ದಾನೆ. ಯುಟ್ಯೂಬ್‌ನಲ್ಲಿ ಎಂಎಂಡಿ ಮೋಲಾ ಹೆಸರಿನಲ್ಲಿ ಹತ್ತಾರು ವಿಚಾರಗಳ ಕುರಿತು ಮಾಹಿತಿ ನೀಡಿದ್ದಾನೆ. ಸ್ಥಳೀಯ ಸರ್ಕಾರದ ವಿರುದ್ಧ ಕೆಲ ಹೇಳಿಕೆ ದಾಖಲಿಸಿದ್ದಾನೆ ಎಂದು ತಿಳಿದು ಬಂದಿದೆ ಎಂದು ತಿಳಿಸಿದ್ದಾರೆ. 

ಇದನ್ನೂ ಓದಿ: ಪ್ರತಿಷ್ಠಿತ ‌ಕಾಲೇಜು ವಿದ್ಯಾರ್ಥಿಗಳೇ ಡ್ರಗ್ ಪೆಡ್ಲರ್ಸ್: 12 ಮಂದಿ ಬಂಧನ

ನೆರೆ ರಾಜ್ಯದಿಂದ ಡ್ರಗ್ಸ್:  ನಗರಕ್ಕೆ ಬಂದಾಗಲೂ ಕೆಲ ವಿಚಾರಗಳ ಕುರಿತು ವಿಡಿಯೋ ಮಾಡಿ ಯುಟ್ಯೂಬ್‌ನಲ್ಲಿ (You Tube) ಅಪ್‌ಲೋಡ್ ಮಾಡಿದ್ದಾನೆ. ಇನ್ನು ಈತನ ಸ್ನೇಹಿತ ಸಾಮ್ಯುಯಲ್ ಜತೆ ಸೇರಿಕೊಂಡು ನೆರೆ ರಾಜ್ಯಗಳಲ್ಲಿರುವ ಸ್ನೇಹಿತರ ಮೂಲಕ ಡ್ರಗ್ಸ್ ತರಿಸಿಕೊಂಡು ದಂಧೆ ನಡೆಸುತ್ತಿದ್ದ ಎಂದು ಹೇಳಿದ್ದಾರೆ.  

ವಿದೇಶಿ ನಿಯಮ ಉಲ್ಲಂಘನೆ ಕಾಯ್ದೆ ಅಡಿಯಲ್ಲಿ ಪ್ರಕರಣ:  ಕೆ.ಜಿ.ಹಳ್ಳಿ ಠಾಣಾಧಿಕಾರಿ ಸಿ.ಈ.ರೋಹಿತ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದು,  ಎನ್‌ಡಿಪಿಎಸ್ ಮತ್ತು ವಿದೇಶಿ ನಿಯಮ ಉಲ್ಲಂಘನೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಭೀಮಾಶಂಕರ್ ಗುಳೇದ್ ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios