ಬೆಂಗಳೂರಲ್ಲಿ ಡಬಲ್ ಮರ್ಡರ್: ಆಸ್ತಿ ವಿಚಾರಕ್ಕೆ ನಡೀತಾ ಬರ್ಬರ ಹತ್ಯೆ?
ಬೆಂಗಳೂರಿನಲ್ಲಿ ಡಬಲ್ ಮರ್ಡರ್ ನಡೆದು ಹೋಗಿದೆ. ಹಲಸೂರ್ ಗೇಟ್ ಠಾಣಾ ವ್ಯಾಪ್ತಿಯ ಕುಂಬಾರ ಪೇಟೆಯಲ್ಲಿ ಘಟನೆ ನಡೆದಿದ್ದು ಶ್ರೀ ಹರಿ ಮಾರ್ಕೆಟಿಂಗ್ ನ ಕಚೇರಿಯಲ್ಲಿ ಸುರೇಶ್ ಎಂಬ 55ವರ್ಷದ ವ್ಯಕ್ತಿ ಹಾಗೂ 68ವರ್ಷದ ಮಹೇಂದ್ರ ಎಂಬುವರನ್ನ ಬರ್ಬರವಾಗಿ ಹತ್ಯೆ ಮಾಡಿರೋ ಆರೋಪಿ ಪೊಲೀಸರ ಮುಂದೆ ಶರಣಾಗಿದ್ದಾನೆ.
ಬೆಂಗಳೂರು(ಫೆ.08): ಆತ ತನ್ನ ಕಚೇರಿಲಿ ಸ್ನೇಹಿತನ ಜೊತೆ ಮಾತನಾಡಿಕೊಂಡು ಕೂತಿದ್ದ.. ಈ ವೇಳೆ ಏಕಾಏಕಿ ಎಂಟ್ರಿ ಕೊಟ್ಟಿದ್ದ ಓರ್ವ ಚಾಕು ತೆಗೆದು ಇಬ್ಬರ ಎದೆಗೆ ಇರಿದು ಬರ್ಬರವಾಗಿ ಕೊಲೆ ಮಾಡಿಬಿಟ್ಟಿದ್ದಾನೆ. ರಾತ್ರಿ ಎಂಟು ಗಂಟೆ ಸುಮಾರಿಗೆ ಬೆಂಗಳೂರಿನಲ್ಲಿ ಡಬಲ್ ಮರ್ಡರ್ ನಡೆದು ಹೋಗಿದೆ..
ಆಸ್ತಿ ವಿಚಾರಕ್ಕೆ ನಡೀತು ಡಬಲ್ ಮರ್ಡರ್..
ಹೌದು.. ಸಂಜೆ ಎಂಟು ಗಂಟೆ ಸುಮಾರಿಗೆ ಬೆಂಗಳೂರಿನಲ್ಲಿ ಡಬಲ್ ಮರ್ಡರ್ ನಡೆದು ಹೋಗಿದೆ. ಹಲಸೂರ್ ಗೇಟ್ ಠಾಣಾ ವ್ಯಾಪ್ತಿಯ ಕುಂಬಾರ ಪೇಟೆಯಲ್ಲಿ ಘಟನೆ ನಡೆದಿದ್ದು ಶ್ರೀ ಹರಿ ಮಾರ್ಕೆಟಿಂಗ್ ನ ಕಚೇರಿಯಲ್ಲಿ ಸುರೇಶ್ ಎಂಬ 55ವರ್ಷದ ವ್ಯಕ್ತಿ ಹಾಗೂ 68ವರ್ಷದ ಮಹೇಂದ್ರ ಎಂಬುವರನ್ನ ಬರ್ಬರವಾಗಿ ಹತ್ಯೆ ಮಾಡಿರೋ ಆರೋಪಿ ಪೊಲೀಸರ ಮುಂದೆ ಶರಣಾಗಿದ್ದಾನೆ.
ತಂದೂರಿ ರೊಟ್ಟಿ ಮಾಡುತ್ತಿದ್ದವ ಮಧ್ಯರಾತ್ರಿ ಮಸಣ ಸೇರಿದ, ನಾಲ್ಕು ದಿನ 4 ಕೊಲೆಗೆ ಬಿಚ್ಚಿಬಿದ್ದ ಧಾರವಾಡ
ಅಂದ್ಹಾಗೆ ಈ ಡಬಲ್ ಮರ್ಡರ್ ಆಗಿರೋದು ಆಸ್ತಿ ವಿಚಾರಕ್ಕೆ ಅನ್ನೋದು ಪ್ರಾಥಮಿಕ ತನಿಖೆ ವೇಳೆ ಗೊತ್ತಾಗಿರೋ ವಿಚಾರ.. ಇಲ್ಲಿ ಕೊಲೆಯಾಗಿರೋ ಸುರೇಶ್ ಹಾಗೂ ಆರೋಪಿ ಭದ್ರಾ ಇಬ್ಬರೂ ದೂರದ ಸಂಬಂಧಿಕರು.. ಮೂರು ಅಂತಸ್ಥಿನ ಈ ಕಮರ್ಷಿಯಲ್ ಕಟ್ಟಡದ ಮಾಲೀಕ ಸುರೇಶ್ ಕುಮಾರ್ ತನ್ನ ಬ್ಯುಸಿನೆಸ್ ನಡೆಸುಕೊಂಡು ಹೋಗ್ತಿದ್ದ.. ಅತ್ತ ಆರೋಪಿ ಭದ್ರ ತಮ್ಮ ಕುಂಬಾರ ಸಮುದಾಯದ ಟ್ರಸ್ಟ್ ನಡೆಸಿಕೊಂಡು ಹೋಗ್ತಿದ್ದ.. ಟ್ರಸ್ಟ್ ನಡೆಸಿಕೊಂಡು ಹೋಗ್ತಿದ್ದ ಭದ್ರ ಸುರೇಶ್ ಗೆ ಸೇರಿದ ಕಟ್ಟಡವನ್ನ ತಮ್ಮ ಟ್ರಸ್ಟ್ ಗೆ ಬರೆದು ಕೊಡುವಂತೆ ಆಗಾಗ ಜಗಳ ಆಡ್ತಿದ್ನಂತೆ.. ಈ ಜಾಗ ಟ್ರಸ್ಟ್ ಗೆ ಸೇರುತ್ತೆ ಅದನ್ನ ಟ್ರಸ್ಟ್ ಗೆ ಬರೆದುಕೊಡು ಅಂತಾ ಇಬ್ಬರ ಮಧ್ಯೆ ಶುರುವಾಗಿದ್ದ ಜಗಳ ಠಾಣೆ ಮೆಟ್ಟಿಲು ಕೂಡ ಏರಿತ್ತು.. ಇಂದು ಮತ್ತೆ ಅದೇ ವಿಚಾರವಾಗಿ ಸಂಜೆ ಮಾತನಾಡೋಕೆ ಬಂದಿದ್ದ ಭದ್ರಾ ಚಾಕುವಿನ ಸಮೇತ ಶ್ರೀಹರಿ ಮಾರ್ಕೆಟಿಂಗ್ ಕಚೇರಿಗೆ ನುಗ್ಗಿದ್ದ.. ಸ್ನೇಹಿತ ಮಹೇಂದ್ರ ಜೊತೆ ಮಾತನಾಡಿಕೊಂಡು ಕೂತಿದ್ದ ಸುರೇಶ್ ಬಳಿ ಏಕಾ ಏಕಿ ನುಗ್ಗಿದ್ದ ಭದ್ರಾ ಕೈನಲ್ಲಿದ್ದ ಚಾಕು ತೆಗೆದು ಸುರೇಶ್ ಎದೆಗೆ ಚುಚ್ಚಿ ಕೊಲೆ ಮಾಡೋಕೆ ಮುಂದಾಗಿದ್ದಾನೆ.. ಈ ವೇಳೆ ತನ್ನ ಸ್ನೇಹಿತನ ಪ್ರಾಣ ಉಳಿಸೋಕೆ ಅಂತಾ ಮಹೇಂದ್ರ ಆರೋಪಿಯನ್ನ ತಡೆಯೋಕೆ ಯತ್ನಿಸಿದ್ದು ಆರೋಪಿ ಭದ್ರಾ ಮಹೇಂದ್ರರ ಎದೆಗೂ ಚಾಕು ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.. ಇಬ್ಬರನ್ನೂ ಕೊಲೆ ಮಾಡಿರೋ ಭದ್ರಾ ಸೀದಾ ಹಲಸೂರ್ ಗೇಟ್ ಠಾಣೆಗೆ ಹೋಗಿ ಶರಣಾಗಿದ್ದಾನೆ ಎಂದು ಕೇಂದ್ರ ವಿಭಾಗದ ಡಿಸಿಪಿ ಶೇಖರ್ ತಿಳಿಸಿದ್ದಾರೆ.
ಸದ್ಯ ಆರೋಪಿಯನ್ನ ವಶಪಡೆದಿರೋ ಹಲಸೂರ್ ಗೇಟ್ ಪೊಲೀಸರು ಹೆಚ್ಚಿನ ತನಿಖೆ ನಡೆಸ್ತಿದ್ದಾರೆ..ಆರೋಪಿ ಭದ್ರಾ ತನ್ನ ಪತ್ನಿ ವಿಚಾರದ ಬಗ್ಗೆಯೂ ಕೊಲೆ ಮಾಡಿದ್ದಾನೆ ಅನ್ನೋದು ಮತ್ತೊಂದು ಅನುಮಾನ..ಸದ್ಯ ಪೊಲೀಸರು ತನಿಖೆ ನಡೆಸ್ತಿದ್ದು ತನಿಖೆ ನಂತರವೇ ಡಬಲ್ ಮರ್ಡರ್ ಗೆ ಅಸಲಿ ಕಾರಣ ಗೊತ್ತಾಗಬೇಕಿದೆ.