ಡ್ರಗ್ಸ್ ಜಾಲ ಬಯಲು ಮಾಡಲು ಹೊರಟ ಪತ್ರಕರ್ತನ ಹತ್ಯೆ
ಪತ್ರಕರ್ತರ ಮೇಲೆ ದುಷ್ಕರ್ಮಿಗಳ ದಾಳಿ/ ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ಪತ್ರಕರ್ತರ ಹತ್ಯೆ/ ಮಾದಕ ದೃವ್ಯ ಜಾಲ ಬಯಲು ಮಾಡಲು ಹೋರಟ ಪತ್ರಕರ್ತನ ಕೊಲೆ/ ಆತನ ಮನೆಯ ಸಮೀಫವೇ ಹತ್ಯೆ ಮಾಡಿ ಪರಾರಿಯಾದ ದುಷ್ಕರ್ಮಿಗಳು
ಚೆನ್ನೈ(ನ. 10) ತಮಿಳುನಾಡು ಮತ್ತು ಮಧ್ಯಪ್ರದೇಶದ ಪ್ರತ್ಯೇಕ ಘಟನೆಯಲ್ಲಿ ಇಬ್ಬರು ಪತ್ರಕರ್ತರು ಹತ್ಯೆಯಾಗಿದೆ.
ಚೆನ್ನೈ ಮೂಲದ ಪತ್ರಕರ್ತನನ್ನು ಭಾನುವಾರ ಕಾಂಚೀಪುರಂನ ಅವರ ನಿವಾಸದ ಹೊರಗೆ ಅಮಾನುಷವಾಗಿ ಹತ್ಯೆ ಮಾಡಲಾಗಿದೆ. ಪ್ರಾದೇಶಿಕ ಸುದ್ದಿ ವಾಹಿನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಪತ್ರಕರ್ತನನ್ನು ಡ್ರಗ್ಸ್ ಕಳ್ಳಸಾಗಣೆದಾರರ ಗ್ಯಾಂಗ್ ಅಮಾನುಷವಾಗಿ ಹತ್ಯೆ ಮಾಡಿದೆ.
ವರದಿಗಾರರ ಕುಟುಂಬ ಪಾರ್ಥಿವ ಶರೀರ ಸ್ವೀಕಾರಕ್ಕೆ ನಿರಾಕರಿಸಿದ್ದುನ್ಯಾಯಕ್ಕಾಗಿ ಒತ್ತಾಯಿಸಿದೆ. ತಮ್ಮ ಜಾಲ ಬಹಿರಂಗ ಮಾಡಲು ಯತ್ನಿಸುವವರಿಗೆ ಇದೆ ಶಿಕ್ಷೆ ಎಂದು ದುಷ್ಕರ್ಮಿಗಳು ಎಚ್ಚರಿಕೆಯನ್ನು ನೀಡಿ ಹೋಗಿದ್ದಾರೆ.
ಪ್ರಿ ವೆಡ್ಡಿಂಗ್ ಪೋಟೋ ಶೂಟ್ ಅವಘಡ; ವಧು-ವರ ದುರ್ಮರಣ
ಕೊಲೆಯಾದ ಪತ್ರಕರ್ತನನ್ನು ಮೋಸೆಸ್ ಎಂದು ಗುರುತಿಸಲಾಗಿದ್ದು ಭಾನುವಾರ ಮನೆಗೆ ತೆರಳುತ್ತಿದ್ದ ವೇಳೆ ಅವರ ಮೇಲೆ ಹಲ್ಲೆಯಾಗಿದೆ. ದಾಳಿಯಿಂದ ಪತ್ರಕರ್ತ ಕೂಗಿಕೊಂಡಿದ್ದಾರೆ. ಶಬ್ದ ಕೇಳಿ ವರದಿಗಾರನ ತಂದೆ ಹೊರಗೆ ಬಂದು ನೋಡಿದಾಗ ಪುತ್ರ ರಕ್ತದ ಮಡುವಿನಲ್ಲಿ ಬಿದ್ದಿರುವುದು ಗೊತ್ತಾಗಿದೆ. ಆಸ್ಪತ್ರೆಗೆ ಸೇರಿಸುವ ಯತ್ನ ಮಾಡಿದರೂ ಪ್ರಯೋಜನವಾಗಿಲ್ಲ.
ಇನ್ನೊಂದು ಕಡೆ ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನ ಕಾಡಿನಲ್ಲಿ ಪತ್ರಕರ್ತರೊಬ್ಬರ ಶವ ಪತ್ತೆಯಾಗಿದೆ. ಸ್ಥಳೀಯ ಟಿವಿ ಚಾನೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಸೈಯದ್ ಆದಿಲ್ ವಹಾಬ್ ಅವರ ಶವ ಪತ್ತೆಯಾಗಿದೆ.
ಬೇರೆ ಕಡೆ ಹತ್ಯೆ ಮಾಡಿ ಮುಖ ಮತ್ತು ತಲೆ ಮೇಲೆ ಕಲ್ಲು ಎತ್ತಿ ಹಾಕಲಾಗಿದ್ದು ಗುರುತು ತಿಳಿಯದಂತೆ ಮಾಡಲಾಗಿತ್ತು. ಈ ಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಪೊಲೀಸರು ತನಿಖೆ ಮುಂದುವರಿಸಿದ್ದಿದಾರೆ.