ಬೆಂಗಳೂರು(ಜೂ. 09)  ಮಿಲಿಟರಿ ನೀಡಿದ ಮಾಹಿತಿ ಮೇರೆಗೆ ಸಿಸಿಬಿ ಬಹುದೊಡ್ಡ ಕಾರ್ಯಾಚರಣೆ ನಡೆಸಿದೆ.  ದೇಶದ ಭದ್ರತೆಗೆ ಸವಾಲೊಡ್ಡಿದ್ದ ಇಬ್ಬರು ನಟೋರಿಯಸ್ ಗಳು ಸೆರೆ ಸಿಕ್ಕಿದ್ದಾರೆ.

ಸಿಮ್ ಕಿಟ್ ಕೇಸಲ್ಲಿ ಇಬ್ಬರು ಶಂಕಿತರನ್ನು ಸಿಸಿಬಿ ವಶಕ್ಕೆ ಪಡೆದಿದೆ. ಐ ಎಸ್ ಡಿ ಕಾಲ್ ಗಳನ್ನ ಕನ್ವರ್ಟ್ ಮಾಡ್ತಿದ್ದ ಆರೋಪಿಗಳು 10  ರುಪಾಯಿ ಕಾಲ್ ನ್ನು 10 ಪೈಸೆಗೆ ಕನ್ವರ್ಟ್ ಮಾಡುತ್ತಿದ್ದರು. 

ದೇಶದ ಭದ್ರತೆಗೆ ಬಹುದೊಡ್ಡ ಗಂಡಾಂತರ ತಂದೊಡ್ತಿದ್ದ ಬಗ್ಗೆ ತನಿಖೆ ನಡೆದಿದೆ. ಭಯೋತ್ಪಾದಕ ಕೃತ್ಯಗಳಿಗೆ ನೆರವಾಗುವ ಸಂಬಂಧ ಕಾಲ್ ಕನ್ವರ್ಟ್ ಮಾಡಿರುವ ಶಂಕೆ ವ್ಯಕ್ತವಾಗಿದೆ. ದೇಶದ ಹೊರಗಿನ ಉಗ್ರಗಾಮಿ ಗುಂಪುಗಳ ಜೊತೆ ಮಾತುಕತೆ ಮಾಡಲು ಈ ಕೆಲಸ ಮಾಡುತ್ತಿದ್ದರು ಎಂಬುದು ಆರಂಭಿಕ ತನಿಖೆಯ ಅಂಶ.

ಬೆಂಗಳೂರಿನಲ್ಲಿ ಅಂಬರ್ ಗ್ರೀಸ್ ಮಾರಾಟ ಜಾಲ

ಕನ್ವರ್ಟೆಡ್ ಬಾಕ್ಸ್ ಬಳಸಿ ಕಾಲ್ ಕನ್ವರ್ಟ್ ಮಾಡುತ್ತಿದ್ದರು. ಊಹೆಗೂ ನಿಲುಕದ ರೀತಿ ಕಾಲ್ ಕನ್ವರ್ಟ್ ಮಾಡಿ ದೇಶದ ಭದ್ರತೆಗೆ ಗಂಡಾಂತರ ತಂದಿದ್ದರು ಈ ಬಗ್ಗೆ ಸಂಶಯ ಹೊಂದಿದ್ದ ಮಿಲಿಟರಿಯಿಂದ ಗುಪ್ತಚರ ಇಲಾಖೆಗೆ ಮಾಹಿತಿ ರವಾನೆಯಾಗಿದೆ. ಇದಾದ ಮೇಲೆ ಸಿಸಿಬಿಯ ಭಯೋತ್ಪಾದಕ ನಿಗ್ರಹ ದಳ ಇಬ್ಬರನ್ನು ಬಂಧಿಸಿದೆ. ಮತ್ತೆ ಕೆಲವರ ಬಗ್ಗೆ  ತಂಡ ಹುಡುಕಾಟ ನಡೆಸಿದೆ.

ಕೃತ್ಯ ಹೇಗೆ ನಡೆಯುತ್ತಿತ್ತು? ದುಬೈನಿಂದ ಕಾಲ್ ಗಳನ್ನು ಕನ್ವರ್ಟ್ ಮಾಡಿ ಕನೆಕ್ಟ್  ಮಾಡಲಾಗುತ್ತಿತ್ತು. ದುಬೈನಲ್ಲಿ ವಾಟ್ಸಪ್ ಕಾಲ್ ಅಲೋ ಇಲ್ಲ  ಹೀಗಾಗಿ ಅಕ್ರಮವಾಗಿ ವಿಪಿಎನ್ ತಂತ್ರಜ್ಞಾನ ಬಳಸಿ ಕಾಲ್  ಮಾಡುತ್ತಿದ್ದರು ಬೇರೆ ಬೇರೆ ದೇಶದಲ್ಲಿರುವವರಿಗೆ ಕರೆ ಮಾಡುತ್ತಿದ್ದರು.ವಿಪಿಎನ್ ಸಾಫ್ಟ್ ವೇರ್ ಮೂಲಕ ಕಾಲ್ ಮಾಡಲು ಸಾಧ್ಯವಾಗುತ್ತದೆ ಎಂಬುದನ್ನು ಕಂಡುಕೊಂಡಿದ್ದರು. ವಿಪಿಎನ್ ಸಾಫ್ಟ್ ವೇರ್ ಮೊ ಬೈಲ್ ನಲ್ಲಿ ಇನ್ಸಾಟಲ್ ಮಾಡಿಕೊಂಡು  ಇಂಥ ಕೆಲಸ ಮಾಡುತ್ತಿದ್ಗದರು.

ಹೀಗೆ ಕಾಲ್ ಮಾಡಿದಾಗ ಕಾಲ್ ಮಾಡಿದವರ ಲೋಕೆಷನ್ ಸೇರಿದಂತೆ ಯಾವುದೇ ಮಾಹಿತಿ ಸಿಗೋದಿಲ್ಲ. ಕೆಲವು ದೇಶದಲ್ಲಿ ವಿಪಿಎನ್ ಬಳಸಲು ಅವಕಾಶವಿದೆ. ನಾವು ವಿಪಿಎನ್ ಬಳಸಿ ಕಾಲ್ ಮಾಡಿದಾಗ ಯಾವ ದೇಶದಲ್ಲಿ ಕಾನೂನು ಬದ್ಧವಿದೆ ಅಲ್ಲಿಗೆ ಕಾಲ್ ಕನೆಕ್ಟ್ ಆಗುತ್ತೆ ಉದಾಹರಣೆಗೆ  ಸಿಂಗಾಪುರದಲ್ಲಿ ಕಾನೂನು ಬದ್ಧ ಇದೆ. ಹೀಗಾಗಿ ನಾವು ಕರೆ ಮಾಡಿದಾಗ ಸಿಂಗಾಪುರ ಸರ್ವರ್ ಗೆ ಕನೆಕ್ಟ್ ಆಗಿ ನಂತರ ನಾವು ಯಾರಿಗೆ ಕಾಲ್ ಮಾಡುತ್ತೇವೋ ಅಲ್ಲಿಗೆ ಕನೆಕ್ಟ್ ಆಗುತ್ತೆ. ಇನ್ನು ದುಬೈ ಸೇರಿದಂತೆ ಅನೇಕ ದೇಶಗಳಲ್ಲಿ ವಿಡಿಯೋ ಕಾಲ್ ಬ್ಯಾನ್ ಇದೆ. ಚೀನಾ,ಇರಾಕ್ ,ನಾರ್ತ್ ಕೊರಿಯಾ ,ಓಮನ್ ,ರಷ್ಯಾ ,ಯುಎಇ .ಈ ದೇಶಗಳ ವಿಪಿಎನ್ ಬ್ಯಾನ್ ಆಗಿದೆ

 ಸಿಮ್ ಕಿಟ್ ಎಂದರೇನು; ಅಂತಾರಾಷ್ಟ್ರೀಯ ಕರೆಗಳನ್ನ ಕಡಿಮೆ‌ ದರದಲ್ಲಿ ಮಾತನಾಡಬಹುದು .  ಅಂತಾರಾಷ್ಟ್ರೀಯ ಕಂಪನಿಗಳ ನಡುವೆ ಮಾತುಕತೆಗೆ ಸಹಕಾರಿ. ಇಂತಹ ಸಿಮ್ ಕಿಟ್ ಗಳು ವಿದೇಶಿ ಕಂಪನಿಗಳು ಬೇರೆ ದೇಶದ ತಮ್ಮ ಬ್ರಾಂಚ್ ಕಂಪನಿಗಳಿಗೆ ನೀಡುತ್ತವೆ. ಆದರೆ ಈ ಸಿಮ್‌ಕಿಟ್ ಗಳನ್ನು ಭಾರತದಲ್ಲಿ ಬಳಸಲು ಅನುಮತಿ‌ ಇಲ್ಲ. ತೆರಿಗೆ ಇನ್ನಿತರ ಕಾರಣದಿಂದಾಗಿ ಅನುಮತಿ ಇಲ್ಲ‌. ದೇಶದ ಟ್ರಾಯ್ಸಿಮ್ ಕಿಟ್ ಬಳಸಲು‌ ಅನುಮತಿ‌ ನೀಡಿಲ್ಲ‌.

TRAI-Telecom Regulatary authority of india ಪ್ರಕಾರ ಇಂಟರ್ ನ್ಯಾಶನಲ್ ಕಾಲ್ ಗೆ 10 ರೂಪಾಯಿ ಇದ್ರೆ ಇಲ್ಲಿ 1-2  ರೂಪಾಯಿಯಲ್ಲಿ ಮಾತನಾಡಬಹುದು ಎರಡೂ ದೇಶದಲ್ಲಿ ಕಂಪನಿಗಳಿದ್ರೆ ಈ ಸಿಮ್ ಕಿಟ್ ಸಹಕಾರಿ ಆ ಸಿಮ್ ಕಿಟ್ ಎಲ್ಲಿ ಕೆಲಸ ಮಾಡ್ತಾರೋ ಅಲ್ಲಿಯೇ ಇಟ್ಟುಕೊಳ್ಳಬಹುದು. ಸಿಮ್ ಕಿಟ್ ಇಟ್ಟ ಸ್ಥಳದಲ್ಲೇ ಬಂದು ಕಾಲ್ ಕನೆಕ್ಟ್ ಮಾಡಿ‌ ಮಾತನಾಡಬಹುದು. ಸಿಮ್ ಕಿಟ್ ಬಳಸಿದ್ರೆ  ಡಾಟಾ,ಸಿಡಿಆರ್ ರಿಟ್ರೀವ್ ಮಾಡಲು ಆಗುವುದಿಲ್ಲ. ಈ ವೇಳೆ ಟೆರರ್ ಅಕ್ಟಿವಿಟಿಸ್ ನಡೆಯುವ ಸಾಧ್ಯತೆ ಇರುತ್ತೆ.