Bengaluru: ರಾತ್ರಿ ಓಡಾಡುವವರೇ ಹುಷಾರ್: ಗಾಡಿ ಡಿಕ್ಕಿ ಹೊಡೆದಂತೆ ಮಾಡಿ ರಾಬರಿ ಮಾಡ್ತಾರೆ!

ಇತ್ತೀಚೆಗೆ ರಸ್ತೇಲಿ ನಡೀತಿರೋ ಕೆಲ ಡೆವಲಪ್ಮೆಂಟ್‌ಗಳನ್ನ ನೋಡಿದ್ರೆ ರೋಡಿಗೆ ಗಾಡಿ ಇಳಿಸೋಕೆ ಭಯ ಆಗ್ತಿದೆ. ಬ್ಯಾಕ್ ಟು ಬ್ಯಾಕ್ ಹಿಟ್ ಆ್ಯಂಡ್ ರನ್ ಕೇಸ್‌ಗಳ ನಂತರ ಮತ್ತೊಂದು ಕೇಸ್ ಭಯ ಬೀಳಿಸುವಂತಿದೆ. 

Two Arrestred For Roberry Case At Bengaluru gvd

ಕಿರಣ್.ಕೆ.ಎನ್, ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು

ಬೆಂಗಳೂರು (ಜ.29): ಇತ್ತೀಚೆಗೆ ರಸ್ತೇಲಿ ನಡೀತಿರೋ ಕೆಲ ಡೆವಲಪ್ಮೆಂಟ್‌ಗಳನ್ನ ನೋಡಿದ್ರೆ ರೋಡಿಗೆ ಗಾಡಿ ಇಳಿಸೋಕೆ ಭಯ ಆಗ್ತಿದೆ. ಬ್ಯಾಕ್ ಟು ಬ್ಯಾಕ್ ಹಿಟ್ ಆ್ಯಂಡ್ ರನ್ ಕೇಸ್‌ಗಳ ನಂತರ ಮತ್ತೊಂದು ಕೇಸ್ ಭಯ ಬೀಳಿಸುವಂತಿದೆ. ಸುಲಿಗೆ ಮಾಡೋಕೆ ಬೆಂಗಳೂರಿನಲ್ಲೊಂದು ಗ್ಯಾಂಗ್ ಹೊಸ ಆಟ ಶುರು ಮಾಡಿದೆ. ಅಷ್ಟಕ್ಕೂ ಏನದು ಘಟನೆ, ಅಷ್ಡು ಡೇಂಜರ್ ಹಾ ಗ್ಯಾಂಗ್ ಅಂತೀರಾ.

ಇತ್ತೀಚೆಗೆ ಬೆಂಗಳೂರು ಸಿಟಿಯ ರಸ್ತೆಗಳಲ್ಲಿ ನಡೀತಿರೋ ಕೆಲ ಡೆವಲಪ್ಮೆಂಟ್ ಭಯ ಬೀಳಿಸ್ತಿವೆ. ವಿಜಯನಗರದ ಹೊಸಳ್ಳಿ ಮೆಟ್ರೋ ಸ್ಟೇಷನ್ ಹಿಟ್ ಆ್ಯಂಡ್ ರನ್, ಜ್ಞಾನ ಭಾರತಿ ನಗರದ ಬ್ಯಾನೇಟ್ ಕೇಸ್ ಸೇರಿದಂತೆ ಕೆಲ ಘಟನೆಗಳು ರಸ್ತೇಲಿ ಓಡಾಡೋರಿಗೆ ಭಯ ಬೀಳಿಸಿವೆ. ಈ ಮಧ್ಯೆ ಇಂದು ಬೆಳಗ್ಗೆ ಮೂರು ಗಂಟೆ ಸುಮಾರಿಗೆ ಸರ್ಜಾಪುರ ರಸ್ತೇಲಿ ನಡೆದ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದು ಕಾರಲ್ಲಿ ಹೋಗೋರಿಗೆ ಭಯ ಹೆಚ್ಚುವಂತೆ ಮಾಡಿದೆ.

ಈ ದೃಶ್ಯ ನೋಡಿ ಇದು ಸರ್ಜಾಪುರ ರಸ್ತೇಲಿ ಮುಂಜಾನೇ 3 ಗಂಟೆ ಸುಮಾರಿಗೆ ಕಾರಿನಲ್ಲಿ ಓರ್ವ ದಂಪತಿ ಹೋಗ್ತಿದ್ರು. ಈ ವೇಳೆ ಇದ್ದಕ್ಕಿದ್ದಂತೆ ಒನ್ ವೇಲಿ ಆಪೋಸಿಟ್ ಬಂದಂತ ಬೈಕ್ ಡಿಕ್ಕಿ ಹೊಡೆದಂತೆ ಮಾಡುತ್ತೆ. ಕೂಡಲೇ ಕಾರಿನಲ್ಲಿದ್ಸ ದಂಪತಿಗೆ ಗದಿರಿಸೋ ರೀತಿಲಿ ಬಂದು ಡೋರ್ ಓಪನ್ ಮಾಡೋಕೆ ಹೇಳ್ತಾನೆ. ಆದ್ರೆ ತಾವು ಡೋರ್ ಓಪನ್ ಮಾಡಲ್ಲ. ಬದಲಾಗಿ ಕ್ಯಾಮರಾಲಿ ರೆಕಾರ್ಡ್ ಆಗ್ತಿದೆ ಅಂತ ಹೇಳ್ತಾರೆ. ನಂತ್ರ ದಂಪತಿ ಕಾರು ರಿವರ್ಸ್ ತಗೊಂಡು ಅಲ್ಲಿಂದ ಎಸ್ಕೇಪ್ ಆಗ್ತಾರೆ. ನಂತ್ರ ಆರೋಪಿಗಳು ಸುಮಾರು ಐದು ಕಿಲೋಮೀಟರ್ ಕಾರ್‌ನ ಚೇಸ್ ಮಾಡಿ ಸುಲಿಗೆ ಗೆ ಯತ್ನ ಮಾಡ್ತಾರೆ. ಈ ವೇಳೆ ಭಯಭೀತರಾದ ದಂಪತಿ ಕಾರ್ ನ ಕ್ಯಾಮರಾದಲ್ಲಿ ಸೆರೆಯಾದ ವಿಡಿಯೋ ಸಮೇತ ನಗರ ಪೊಲೀಸರಿಗೆ ಟ್ವಿಟರ್ ಮೂಲಕ ದೂರು ನೀಡ್ತಾರೆ.

ಹಾಸನದಲ್ಲಿ ಜೆಡಿಎಸ್ ಟಿಕೆಟ್‍ಗಾಗಿ ವಾರ್: ಶೃಂಗೇರಿ ಶಾರದಾಂಬೆ ಮೊರೆ ಹೋದ್ರಾ ರೇವಣ್ಣ ದಂಪತಿ

ದೂರು ದಾಖಲಾಗಿದ್ದೇ ಇಬ್ಬರು ಆರೋಪಿಗಳನ್ನು ಬಂಧಿಸಿದ ಪೊಲೀಸರು: ಇನ್ನು ಘಟನೆ ಬಗ್ಗೆ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿರೋ ದಂಪತಿ ಈ ರೀತಿ ಸುಲುಗೆಗೆ ಯತ್ನ ಮಾಡಲಾಗಿದೆ. ರಾತ್ರಿ ಓಡಾಡೋರಿಗೆ ಭಯ ಹೆಚ್ಚಾಗ್ತಿದೆ. ಆ ಗ್ಯಾಂಗ್ ವಿರುದ್ದ ಕ್ರಮ ಕೈಗೊಳ್ಳುವಂತೆ ಪೊಲೀಸರನ್ನ ಟ್ಯಾಗ್ ಮಾಡಲಾಗಿದೆ. ಈ ಬಗ್ಗೆ ಬೆಳ್ಳಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಧಮುಶ್ ಹಾಗೂ ರಕ್ಷಿತ್ ಅನ್ನೋ ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆ.‌

ನಂತರ ಅವರನ್ನು ಠಾಣೆಗೆ ಕರೆಸಿ ವಿಚಾರಣೆ ಮಾಡಿದಾಗ ಮೀನು ಮಾರಾಟದ ಅಂಗಡಿಯಲ್ಲಿ ಕೆಲಸ ಮಾಡ್ತಾ ಇದ್ದು, ಕೆಲಸ ಮುಗಿದ ಬಳಿಕ ಈ ರೀತಿ ಕೃತ್ಯ ಮಾಡಿದ್ದಾಗಿ ತಪ್ಪೊಪ್ಪೊಕೊಂಡಿದ್ದಾರೆ. ಸದ್ಯ ಬೆಳ್ಳಂದೂರು ಠಾಣೆಯಲ್ಲಿ ಕೇಸ್ ದಾಖಲಾಗಿದ್ದು ಇಬ್ಬರು ಆರೋಪಿಗಳನ್ನು ವಿಚಾರಣೆ ಮಾಡ್ತಾ ಇದ್ದಾರೆ. ಇನ್ನು ನಗರ ಎಲ್ಲೆಲ್ಲಿ ಹೀಗೆ ಸುಲಿಗೆ ಮಾಡಿದ್ರು ಅನ್ನೋ ಅನುಮಾನದ ಮೇಲೆ ತನಿಖೆ ಮಾಡ್ತಾ ಇದ್ದಾರೆ.

Latest Videos
Follow Us:
Download App:
  • android
  • ios