Asianet Suvarna News Asianet Suvarna News

ಮಂಗಳೂರು: ಬೆಂಗಳೂರಿಗೆ ಗಾಂಜಾ ಸಾಗಣೆ, ಇಬ್ಬರ ಬಂಧನ

ಆರೋಪಿಗಳಾದ ಕೇರಳ ವಯನಾಡ್‌ನ ಅನೂಪ್‌ ಎಂ.ಎಸ್‌ ಮತ್ತು ಇರಿಟ್ಟಿಯ ಲತೀಫ್‌ ಕೆ.ವಿ ಬಂಧಿತರು. ಉಳ್ಳಾಲದ ತಲಪಾಡಿಯ ಪಿಲಿಕೂರಿನಲ್ಲಿ ಖಚಿತ ವರ್ತಮಾನ ಮೇರೆಗೆ ಸಿಸಿಬಿ ಇನ್‌ಸ್ಪೆಕ್ಟರ್‌ ಶ್ಯಾಮಸುಂದರ್‌ ತಂಡ ದಾಳಿ ನಡೆಸಿ ಬಂಧಿಸಿದೆ.

Two Arrested For Marijuana Transport to Bengaluru grg
Author
First Published Feb 9, 2024, 4:00 AM IST

ಮಂಗಳೂರು(ಫೆ.09): ಒಡಿಶಾದಿಂದ ಮಂಗಳೂರಿಗೆ ಹಾಗೂ ಕೇರಳಕ್ಕೆ ಬೃಹತ್‌ ಪ್ರಮಾಣದಲ್ಲಿ ನಿಷೇಧಿತ ಮಾದಕ ವಸ್ತು ಗಾಂಜಾ ಸಾಗಾಟವನ್ನು ಸಿಸಿಬಿ ಪೊಲೀಸರು ಪತ್ತೆ ಮಾಡಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 28 ಲಕ್ಷ ರು.ಗಳ 120 ಕೇಜಿ ಗಾಂಜಾ ವಶಪಡಿಸಿದ್ದಾರೆ.

ಆರೋಪಿಗಳಾದ ಕೇರಳ ವಯನಾಡ್‌ನ ಅನೂಪ್‌ ಎಂ.ಎಸ್‌.(28) ಮತ್ತು ಇರಿಟ್ಟಿಯ ಲತೀಫ್‌ ಕೆ.ವಿ.(36) ಬಂಧಿತರು. ಉಳ್ಳಾಲದ ತಲಪಾಡಿಯ ಪಿಲಿಕೂರಿನಲ್ಲಿ ಖಚಿತ ವರ್ತಮಾನ ಮೇರೆಗೆ ಸಿಸಿಬಿ ಇನ್‌ಸ್ಪೆಕ್ಟರ್‌ ಶ್ಯಾಮಸುಂದರ್‌ ತಂಡ ದಾಳಿ ನಡೆಸಿ ಬಂಧಿಸಿದೆ.

ಕಲಬುರಗಿ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ: ನಿತ್ಯ ಗುಟ್ಕಾ, ಸಿಗರೆಟ್‌ ಪೂರೈಕೆ!

ಆರೋಪಿಗಳು ಒಡಿಶಾದಿಂದ ಆಂಧ್ರಪ್ರದೇಶ, ಬೆಂಗಳೂರಿಗೆ ಗಾಂಜಾವನ್ನು ಕಾರಿನಲ್ಲಿರಿಸಿ ಸಾಗಾಟ ಮಾಡುತ್ತಿದ್ದರು. ಬೊಲೆರೋ ವಾಹನದ ಹಿಂಬದಿ ಡಿಕ್ಕಿಯಲ್ಲಿ ಪ್ರತ್ಯೇಕ ಕಬ್ಬಿಣದ ಬಾಕ್ಸ್‌ ಮಾಡಿಕೊಂಡು ಅದರಲ್ಲಿ ಗಾಂಜಾ ಬಚ್ಚಿಟ್ಟಿದ್ದರು. ಈ ಅಕ್ರಮ ಸಾಗಾಟದಲ್ಲಿ ಹಲವು ಮಂದಿ ಭಾಗಿಯಾಗಿರುವ ಶಂಕೆ ಇದ್ದು, ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow Us:
Download App:
  • android
  • ios