ಬೆಂಗಳೂರು: ಕಾಶ್ಮೀರಿ ಯುವಕನಿಂದ ಲವ್‌ ಜಿಹಾದ್‌, ಯುವತಿಯಿಂದ ಪ್ರಧಾನಿ ಮೋದಿಗೆ ಟ್ವೀಟ್‌

ಫೇಸ್‌ಬುಕ್‌ನಲ್ಲಿ ಪರಿಚಿತನಾದ ಕಾಶ್ಮೀರ ಮೂಲದ ಯುವಕ ಮದುವೆ ಆಗುವುದಾಗಿ ನಂಬಿಸಿ ನನ್ನೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ನನ್ನಿಂದ ಹಣವನ್ನೂ ಪಡೆದು ವಂಚಿಸಿದ್ದಾನೆ. ಇದೀಗ ಮದುವೆಯಾಗುವುದಿಲ್ಲ ಎಂದು ನನ್ನನ್ನು ದೂರ ಮಾಡಿದ್ದಾನೆ. ನನಗೆ ಪ್ರಾಣ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ. ಇದನ್ನು ಪ್ರಧಾನಿ ನರೇಂದ್ರ ಮೋದಿ, ನಗರ ಪೊಲೀಸ್‌ ಆಯುಕ್ತ, ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೆ ಟ್ಯಾಗ್‌ ಮಾಡಿ ನೆರವು ನೀಡುವಂತೆ ಮನವಿ ಮಾಡಿದ್ದಾಳೆ.

Tweet from Young Woman to PM Narendra Modi for Love Jihad by Kashmiri Youth in Bengaluru grg

ಬೆಂಗಳೂರು(ಸೆ.08):  ರಾಜಧಾನಿಯಲ್ಲಿ ಲವ್‌ ಜಿಹಾದ್‌ ಆರೋಪವೊಂದು ಕೇಳಿ ಬಂದಿದೆ. ಯುವತಿಯೊಬ್ಬಳು ತಾನು ಲವ್‌ ಜಿಹಾದ್‌ನಲ್ಲಿ ಸಿಲುಕಿರುವುದಾಗಿ ಟ್ವಿಟರ್‌ನಲ್ಲಿ ಅಳಲು ತೋಡಿಕೊಂಡು ಸಹಾಯಕ್ಕಾಗಿ ಮನವಿ ಮಾಡಿದ್ದಾಳೆ.

ಫೇಸ್‌ಬುಕ್‌ನಲ್ಲಿ ಪರಿಚಿತನಾದ ಕಾಶ್ಮೀರ ಮೂಲದ ಯುವಕ ಮದುವೆ ಆಗುವುದಾಗಿ ನಂಬಿಸಿ ನನ್ನೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ನನ್ನಿಂದ ಹಣವನ್ನೂ ಪಡೆದು ವಂಚಿಸಿದ್ದಾನೆ. ಇದೀಗ ಮದುವೆಯಾಗುವುದಿಲ್ಲ ಎಂದು ನನ್ನನ್ನು ದೂರ ಮಾಡಿದ್ದಾನೆ. ನನಗೆ ಪ್ರಾಣ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ. ಇದನ್ನು ಪ್ರಧಾನಿ ನರೇಂದ್ರ ಮೋದಿ, ನಗರ ಪೊಲೀಸ್‌ ಆಯುಕ್ತ, ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೆ ಟ್ಯಾಗ್‌ ಮಾಡಿ ನೆರವು ನೀಡುವಂತೆ ಮನವಿ ಮಾಡಿದ್ದಾಳೆ.

ಹಿಂದೂ ಹುಡುಗರಿಗೂ ಗಂಡಸ್ತನವಿದೆ, ಲವ್‌ ಮಾಡಿ ಮತಾಂತರ ಮಾಡ್ತಾರೆ: ಆರೂಢ ಭಾರತೀ ಸ್ವಾಮೀಜಿ

ಇದನ್ನು ಗಂಭೀರವಾಗಿ ಪರಿಗಣಿಸಿರುವ ಬೆಳ್ಳಂದೂರು ಪೊಲೀಸರು, ಯುವತಿಯ ಟ್ವಿಟರ್‌ ಪೋಸ್ಟ್‌ ಗಮನಿಸಿ ಆಕೆಯನ್ನು ಸಂಪರ್ಕಿಸಿದ್ದಾರೆ. ಠಾಣೆಗೆ ಬಂದು ಲಿಖಿತ ದೂರು ನೀಡುವಂತೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಯುವತಿ ಸಾಮಾಜಿಕ ಜಾಲತಾಣದಲ್ಲಿ ಆರೋಪ ಮಾಡಿದ್ದಾರೆ. ಈ ಸಂಬಂಧ ಪೊಲೀಸರಿಗೆ ಯಾವುದೇ ದೂರು ಕೊಟ್ಟಿಲ್ಲ. ಈಗಾಗಲೇ ಪೊಲೀಸ್‌ ಅಧಿಕಾರಿಗಳು ಆಕೆಯನ್ನು ಸಂಪರ್ಕಿಸಿದ್ದಾರೆ. ದೂರು ನೀಡುವ ಬಗ್ಗೆ ವಕೀಲರ ಜತೆಗೆ ಚರ್ಚಿಸಿ ತೀರ್ಮಾನಿಸುವುದಾಗಿ ಆಕೆ ಹೇಳಿದ್ದಾರೆ. ಸದ್ಯ ಯುವತಿ ನಗರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬುದು ತಿಳಿದು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios