Tumakuru: ಬಟ್ಟೆ ತೊಳೆಯಲು ಹೋಗಿದ್ದ ಅತ್ತೆ- ಸೊಸೆ ನೀರಲ್ಲಿ ಮುಳುಗಿ ಸಾವು

ಬಟ್ಟೆಯನ್ನು ತೊಳೆಯಲು ಕಟ್ಟೆಯ ಬಳಿ ಹೋಗಿದ್ದ ಅತ್ತೆ- ಸೊಸೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ತುಮಕೂರು ಜಿಲ್ಲೆಯ ತಿಪಟೂರಿನ ಟಿ.ಎಂ. ಮಂಜುನಾಥ ನಗರದಲ್ಲಿ ನಡೆದಿದೆ.

Tumakuru Cloth washing time Mother in law and daughter in law death at drowned in water sat

ತುಮಕೂರು (ಫೆ.14): ಮನೆಗೆ ನೀರು ಸರಬರಾಜು ವ್ಯವಸ್ಥೆ ಇಲ್ಲದ್ದರಿಂದ ಬಟ್ಟೆಯನ್ನು ತೊಳೆಯಲು ಕಟ್ಟೆಯ ಬಳಿ ಹೋಗಿದ್ದ ಅತ್ತೆ- ಸೊಸೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ತುಮಕೂರು ಜಿಲ್ಲೆಯ ತಿಪಟೂರಿನ ಟಿ.ಎಂ. ಮಂಜುನಾಥ ನಗರದಲ್ಲಿ ನಡೆದಿದೆ.

ಸೋಮವಾರ (ನಿನ್ನೆ) ಮಧ್ಯಾಹ್ನದ ವೇಳೆ ಮನೆಯಿಂದ ಬಟ್ಟೆಗಳನ್ನು ತುಂಬಿಕೊಂಡು ಕಟ್ಟೆಯ ಬಳಿ ತೊಳೆದುಕೊಂಡು ಬರಲು ಅತ್ತೆ- ಸೊಸೆ ಹೋಗಿದ್ದಾರೆ. ಆದರೆ,  3 ಗಂಟೆ ಸಮಯದಲ್ಲಿ ಇಬ್ಬರೂ ಸೊಸೆ ನೀರಿಗೆ ಬಿದ್ದಿದ್ದಾರೆ. ಈ ವೇಳೆ ಸೊಸೆಯನ್ನು ರಕ್ಷಣೆ ಮಾಡಲು ಮುಂದಾದ ಅತ್ತೆಯೂ ಕೂಡ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇನ್ನು ಬಟ್ಟೆ ತೊಳೆಯಲು ಹೋಗಿದ್ದ ಇಬ್ಬರಿಗೂ ಈಜು ಬರುತ್ತಿರಲಿಲ್ಲ. ಹೀಗಾಗಿ, ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಸ್ಥಲೀಯರು ಹೇಳಿದ್ದಾರೆ. 

Kodagu: ಶಾಲೆಗೆ ರಜೆಯೆಂದು ನದಿಗೆ ಹೋದ ಮಕ್ಕಳು: ಈಜು ಬಾರದೇ ಪ್ರಾಣ ಬಿಟ್ಟರು

ಅತ್ತೆ ಅನಸೂಯಮ್ಮ(50) ಸೊಸೆ ಚಂದ್ರಿಕಾ(25) ಮೃತ ದುರ್ದೈವಿಗಳಾಗಿದ್ದಾರೆ. ತಿಪಟೂರು ಪಟ್ಟಣದ ಟಿ.ಎಂ ಮಂಜುನಾಥ ನಗರದ ಹಿಂಭಾಗದಲ್ಲಿರುವ ಕಟ್ಟೆಯಲ್ಲಿ ಬಟ್ಟೆ ತೊಳೆಯಲು ಹೋಗಿ ನೀರಿನಲ್ಲಿ ಮುಳುಗಿದ್ದಾರೆ. ಇನ್ನು ಮನೆಯಿಂದ ಬಟ್ಟೆ ತೊಳೆಯಲು ಹೋಗಿ ಬಹಳ ಸಮಯವಾದರೂ ಬಾರದ ಹಿನ್ನೆಲೆಯಲ್ಲಿ ಮನೆಯವರು ಸ್ಥಳಕ್ಕೆ ಬಂದು ನೋಡಿದ್ದಾರೆ. ಕಟ್ಟೆಯ ಬಳಿ ಬಟ್ಟೆಗಳು ಬಿದ್ದಿದ್ದು, ಅತ್ತೆ- ಸೊಸೆ ಮಾತ್ರ ಕಾಣಿಸಲಿಲ್ಲ. ಇದಾದ ನಂತರ ನೀರಿನಲ್ಲಿ ಮುಳುಗಿರಬಹುದು ಎಂದು ಅನುಮಾನ ಬಂದು ಸ್ಥಳೀಯ ಈಜುಗಾರರ ಸಹಾಯದಿಂದ ಕಟ್ಟೆಯೊಳಗಿನ ನೀರಿನಲ್ಲಿ ಹುಡುಕಾಟ ನಡೆಸಿದ್ದಾರೆ. ಆಗ ನೀರಿನಲ್ಲಿ ಮುಳುಗಿರುವುದು ಪತ್ತೆಯಾಗಿದೆ.

ಮೃತದೇಹ ಹೊರತೆಗೆದ ಅಗ್ನಿಶಾಮಕ ಸಿಬ್ಬಂದಿ: ಕಟ್ಟೆಯ ನೀರಿನಲ್ಲಿ ಮುಳುಗಿದ್ದ ಅತ್ತೆ- ಸೊಸೆಯ ಮೃತ ದೇಹಗಳನ್ನು ಅಗ್ನಿಶಾಮಕ ದಳದ ಸಿಬ್ಬಂದಿ ನೀರಿನಿಂದ ಹೊರ ತೆಗೆದಿದ್ದಾರೆ. ನಂತರ ಮರಣೋತ್ತರ ಪರೀಕ್ಷೆಗಾಗಿ ಶವಗಳನ್ನು ತಿಪಟೂರಿನ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಘಟನೆ ಕುರಿತಂತೆ ತಿಪಟೂರಿನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಪಿಕ್ನಿಕ್‌ ಬಂದಿದ್ದ ವಿದ್ಯಾರ್ಥಿ ಕಾವೇರಿ ನದಿಯಲ್ಲಿ ಮುಳುಗಿ ಸಾವು: 
ಮಂಡ್ಯ (ಫೆ.14): ಕಾವೇರಿ ನದಿಯಲ್ಲಿ ಈಜಲು ಹೋದ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ಪಟ್ಟಣದ ಕಾರೇಕುರ ಗ್ರಾಮದಲ್ಲಿ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಕಮಲ್‌ದೀಪ್ (19) ಎಂದು ಗುರುತಿಸಲಾಗಿದೆ. ಮೃತ ಕಮಲ್‌ದೀಪ್ ಮೈಸೂರಿನ ಬಿ.ಎಂ.ಶ್ರೀ ನಗರದ ನಿವಾಸಿ ಆಗಿದ್ದಾನೆ. ವಿದ್ಯಾವರ್ಧಕ ಕಾಲೇಲಜಿನಲ್ಲಿ‌ ವ್ಯಾಸಂಗ ಮಾಡುತ್ತಿದ್ದನು. ಇಂದು ತನ್ನ ಸೇಹಿತರೊಂದಿಗೆ ಪಿಕ್ನಿಕ್ ಬಂದಿದ್ದನು. ಕಾರೇಕುರ ಗ್ರಾಮದ ಬಳಿಯ ಕಾವೇರಿ ನದಿಯಲ್ಲಿ ಈಜಾಟಕ್ಕೆ ಮುಂದಾಗಿದ್ದಾರೆ. ಈಜುವ ವೇಳೆ ಇದ್ದಕ್ಕಿದ್ದ ಹಾಗೆ ಮುಳುಗಿ ಮೃತಪಟ್ಟಿದ್ದಾನೆ.

Bengaluru: ಈಜುಕೊಳದಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳು ಸಾವು

ಸ್ಥಳೀಯ ಈಜುಗಾರರ ನೆರವೂ ಸಿಗಲಿಲ್ಲ: ಕಮಲ್‌ದೀಪ್‌ ನೀರಿನಲ್ಲಿ ಮುಳುಗುತ್ತಿದ್ದಂತೆ ಕೂಡಲೇ ಸ್ನೇಹಿತರು ಸ್ಥಳೀಯರನ್ನು ಸಹಾಯಕ್ಕೆಂದು ಕರೆದಿದ್ದಾರೆ. ಆದರೆ, ತುಂಬಾ ಹೊತ್ತಾದರೂ ನುರಿತ ಈಜುಗಾರರು ಸಿಗದ ಕಾರಣ ಕಮಲ್‌ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದನು. ಈ ಬಗ್ಗೆ ಸ್ಥಳೀಯರಿಂದ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ. ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ಕಮಲ್ ಮೃತ ದೇಹವನ್ನು ನದಿಯಿಂದ ಮೇಲೆತ್ತಿದ್ದಾರೆ. ಈ ಘಟನೆ ಕುರಿತಂತೆ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Videos
Follow Us:
Download App:
  • android
  • ios