ಈಗಷ್ಟೇ ಚಿತ್ರರಂಗದಲ್ಲಿ ಅವಕಾಶ ಗಿಟ್ಟಿಸಿಕೊಳ್ಳುತ್ತಿರುವ ಹಿರಿಯ ಕಲಾವಿದ ಸೂರ್ಯಕಾಂತ್ ಪುತ್ರ ವಿಜಯ್ ಹರೀಶ್‌, 20 ವರ್ಷದ ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡ ಆರೋಪ ಎದುರಿಸುತ್ತಿದ್ದಾರೆ. 

ವಿಜಯ್ ಹರೀಶ್ ಹಲವು ವರ್ಷಗಳಿಂದ ಯುವತಿಯೊಬ್ಬರನ್ನು ಪ್ರೀತಿಸುತ್ತಿದ್ದರು. ಇಬ್ಬರೂ ಜನವರಿ 2ರಂದು ಹೊಲೇಟ್‌ವೊಂದರಲ್ಲಿ ರೂಂ ಮಾಡಿಕೊಂಡಿದ್ದರದು. ಈ ವೇಳೆ ಜ್ಯೂಸ್‌ನಲ್ಲಿ ಮತ್ತು ಬರುವ ಮಾತ್ರ ಬೆರೆಸಿ, ಯುವತಿ ಮೇಲೆ ವಿಜಯ್ ಹರೀಶ್‌ ಅತ್ಯಾಚಾರವೆಸಗಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೇ ಇದರ ವಿಡಿಯೋ ಸೆರೆ ಹಿಡಿದು, ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್‌ ಮಾಡುವುದಾಗಿ ಬ್ಲ್ಯಾಕ್ ಮೇಲ್ ಸಹ ಮಾಡುತ್ತಿದ್ದರಂತೆ!

ಪತ್ನಿಯ ಜೊತೆ ಅಕ್ರಮ ಸಂಬಂಧ: ಪ್ರಶ್ನಿಸಿದ ಗಂಡನ ಮೇಲೆ ನಾಯಿ ಛೂ ಬಿಟ್ಟ ಪ್ರಿಯಕರ!

ಚೆನ್ನೈ ನಿವಾಸಿ ಆಗಿರುವ 20 ವರ್ಷದ ಯುವತಿ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಿರುವೊಟ್ಟಿಯರ್‌ ಮಹಿಳಾ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಮಾರ್ಚ್‌ 6ರಂದು ಪೊಲೀಸರು ಹರೀಶ್‌ರನ್ನು ಬಂಧಿಸಿದ್ದಾರೆ. ಹರೀಶ್‌ ವಿರುದ್ಧ ಐಪಿಎಸ್ ಸೆಕ್ಷನ್‌ 328, 354B, 354C ಹಾಗೂ 376ರ ಅಡಿ ದೂರು ದಾಖಲಾಗಿದೆ.