ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಬ್ಬರು ಸೇರಿ ಮೂವರು ಆತ್ಮಹತ್ಯೆ
* ಸೋಮವಾರವಷ್ಟೇ ಪ್ರಕಟವಾದ ಎಸ್ಸೆಸ್ಸೆಲ್ಸಿ ಫಲಿತಾಂಶ
* ಆತ್ಮಹತ್ಯೆಗೆ ಶರಣಾದ ಮೂವರು ವಿದ್ಯಾರ್ಥಿಗಳು
* ಈ ಸಂಬಂಧ ಸ್ಥಳೀಯ ಠಾಣೆಗಳಲ್ಲಿ ಪ್ರಕರಣ ದಾಖಲು
ಸೊರಬ/ಲೋಕಾಪುರ(ಆ.11): ರಾಜ್ಯದಲ್ಲಿ ಮೂರು ಪ್ರತ್ಯೇಕ ಘಟನೆಗಳಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಬ್ಬರು ಸೇರಿ ಮೂವರು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸೋಮವಾರವಷ್ಟೇ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾಗಿದ್ದು, ನಿರೀಕ್ಷಿತ ಅಂಕ ಬಂದಿಲ್ಲ ಎಂದು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಹವಲ್ದಾರ್‌ಬೆಟ್ಟುವಿನ ವಿದ್ಯಾರ್ಥಿ ಅಗ್ನೀಶ್ ಕುಮಾರ್ (16) ಹಾಗೂ ಬಾಗಲಕೋಟೆಯ ಮುಧೋಳ ತಾಲೂಕಿನ ಲೋಕಾಪುರದ ವಿದ್ಯಾರ್ಥಿನಿ ಐಶ್ವರ್ಯ ಶಂಕರ ಬಾರಕೇರ (16) ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
3 ವರ್ಷದಲ್ಲಿ 24,000 ಮಕ್ಕಳ ಆತ್ಮಹತ್ಯೆ!
ಇನ್ನು ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಚಂದ್ರಗುತ್ತಿ ಗ್ರಾಮದ ಕೆ. ಚಿನ್ಮಯ್ (19) ಸಿಇಟಿಯಲ್ಲಿ ಉತ್ತಮ ಅಂಕ ಲಭಿಸದೆ ಸರ್ಕಾರಿ ಕೋಟಾದಲ್ಲಿ ಬಿಇ ಪ್ರವೇಶ ದೊರೆಯುವುದು ಕಷ್ಟ ಎಂಬ ಆತಂಕದಿಂದ ಮನೆಯ ಹಿಂಬದಿಯ ಮರಕ್ಕೆ ನೇಣು ಬಿಗಿದು ಮೃತಪಟ್ಟಿದ್ದಾನೆ. ಈ ಸಂಬಂಧ ಸ್ಥಳೀಯ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.