ಬೆಳಗಾವಿ(ಫೆ.20): ಪಾನ್‌ಶಾಪ್‌ವೊಂದರಲ್ಲಿ ಅಕ್ರಮವಾಗಿ ಅಫೀಮು ಮಾದಕ ವಸ್ತು ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಬೆಳಗಾವಿಯ ಸಿಇಎನ್‌ ಅಪರಾಧ ಪೊಲೀಸ್‌ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ, 20 ಲಕ್ಷ ಮೌಲ್ಯದ 1.15 ಕೆಜಿ ತೂಕದ ಅಫೀಮು ವಶಪಡಿಸಿಕೊಂಡಿದ್ದಾರೆ. 

ರಾಜಸ್ಥಾನ ಮೂಲದ ಸದ್ಯ ಬೆಳಗಾವಿ ತಾಲೂಕಿನ ಜೋಗಾನಟ್ಟಿ ನಿವಾಸಿ ಬರಕತ್‌ಖಾನ್‌ ವಿಲ್ಲಾಖಾನ್‌ (30), ಹುಬ್ಬಳ್ಳಿಯ ಗೋಕುಲ ರಸ್ತೆ ಮೊರಾರ್ಜಿ ನಗರದ ನಿವಾಸಿ ಕಮಲೇಶ ಸುರಜನರಾಮ್‌ ಬೇನಿವಾಲಾ (25) ಮತ್ತು ಬೆಳಗಾವಿ ಚನ್ನಮ್ಮ ನಗರದ ಸರವನ್‌ ಉರ್ಫ್‌ ಸುರಜನರಾಮ್‌ ಬೇನಿವಾಲಾ (25) ಬಂಧಿತರು.

ಡ್ರಗ್ಸ್‌ ಮಾಫಿಯಾ: ನೈಜೀರಿಯಾ ಪ್ರಜೆಗಳಿಂದ 15 ಲಕ್ಷದ ಮಾದಕ ವಸ್ತು ಜಪ್ತಿ

ಬೆಳಗಾವಿ ತಾಲೂಕಿನ ಹೊನಗಾ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ರಾಜಸ್ಥಾನ ದಾಬಾದ ಪಾನ್‌ಶಾಪ್‌ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ರಾಜಸ್ಥಾನ ಮೂಲದ ಸದ್ಯ ಬೆಳಗಾವಿ ತಾಲೂಕಿನ ಜೋಗಾನಟ್ಟಿ ನಿವಾಸಿ ಬರಕತ್‌ಖಾನ್‌ ವಿಲ್ಲಾಖಾನ್‌ (30), ಹುಬ್ಬಳ್ಳಿಯ ಗೋಕುಲ ರಸ್ತೆ ಮೊರಾರ್ಜಿ ನಗರದ ನಿವಾಸಿ ಕಮಲೇಶ ಸುರಜನರಾಮ್‌ ಬೇನಿವಾಲಾ (25) ಮತ್ತು ಬೆಳಗಾವಿ ಚನ್ನಮ್ಮ ನಗರದ ಸರವನ್‌ ಉಫ್‌ರ್‍ ಸುರಜನರಾಮ್‌ ಬೇನಿವಾಲಾ (25) ಬಂಧಿತರು.