ಆಂಧ್ರದಿಂದ ಕಾರಿನಲ್ಲಿ ಡ್ರಗ್ಸ್ ಸಾಗಾಟದ ವೇಳೆ ಬಂಧನ| ಶ್ರೀಲಂಕಾ ಹಾಗೂ ಮಾಲ್ಡಿವ್ಸ್ ದೇಶಗಳಿಂದ ಭದ್ರತಾ ಪಡೆಗಳ ಕಣ್ತಪ್ಪಿಸಿ ಡ್ರಗ್ಸ್‌ನ್ನು ಆಂಧ್ರಪ್ರದೇಶದ ವಿಶಾಖಪಟ್ಟಣಂಗೆ ಮಾದಕ ವಸ್ತು ಮಾರಾಟ ಜಾಲವು ಪೂರೈಕೆ|
ಬೆಂಗಳೂರು(ನ.13): ಆಂಧ್ರಪ್ರದೇಶದಿಂದ ನಗರಕ್ಕೆ ಮಾದಕ ವಸ್ತು ಸಾಗಿಸುತ್ತಿದ್ದ ಮೂವರು ಪೆಡ್ಲರ್‌ಗಳು ರಾಷ್ಟ್ರೀಯ ಮಾದಕ ವಸ್ತು ನಿಗ್ರಹ ದಳ (ಎನ್‌ಸಿಬಿ)ದ ಬಲೆಗೆ ಗುರುವಾರ ಬಿದ್ದಿದ್ದಾರೆ. ಕೇರಳ ಮೂಲದ ಆರ್.ಎಸ್.ರಂಜಿತ್, ಕೆ.ಕೆ.ಸಾರಂಗ್ ಮತ್ತು ಪಿ.ಡಿ.ಅನೇಶ್ ಬಂಧಿತರಾಗಿದ್ದು, ಆರೋಪಿಗಳಿಂದ 25 ಲಕ್ಷ ಮೌಲ್ಯದ 3 ಕೆ.ಜಿ. ಹಶಿಶ್ ಮತ್ತು ಕೃತ್ಯಕ್ಕೆ ಬಳಸಿದ್ದ ಕಾರು ಜಪ್ತಿಯಾಗಿದೆ.
ಶ್ರೀಲಂಕಾ ಹಾಗೂ ಮಾಲ್ಡಿವ್ಸ್ ದೇಶಗಳಿಂದ ಭದ್ರತಾ ಪಡೆಗಳ ಕಣ್ತಪ್ಪಿಸಿ ಡ್ರಗ್ಸ್‌ನ್ನು ಆಂಧ್ರಪ್ರದೇಶದ ವಿಶಾಖಪಟ್ಟಣಂಗೆ ಮಾದಕ ವಸ್ತು ಮಾರಾಟ ಜಾಲವು ಪೂರೈಸಿದೆ. ಅಲ್ಲಿಂದ ಬೆಂಗಳೂರು ಹಾಗೂ ಕೇರಳಕ್ಕೆ ದಂಧೆಕೋರರು ಸಾಗಿಸುತ್ತಿದ್ದರು. ಮೂರು ದಿನಗಳ ಹಿಂದೆ ವಿಶಾಖಪಟ್ಟಣದಿಂದ ಪೆಡ್ಲರ್‌ಗಳು ಹೊರಟಿರುವ ಖಚಿತ ಮಾಹಿತಿ ಸಿಕ್ಕಿತು. ಅಂತೆಯೇ ಕಾರ್ಯಾಚರಣೆಗಿಳಿದ ತನಿಖಾ ತಂಡವು, ದೇವನಹಳ್ಳಿ ಟೋಲ್‌ಗೇಟ್ ಸಮೀಪ ಪೆಡ್ಲರ್‌ಗಳಿದ್ದ ಕಾರನ್ನು ತಡೆದು ಪರಿಶೀಲನೆ ನಡೆಸಿದಾಗ ಹೊರ ನೋಟಕ್ಕೆ ಏನು ಪತ್ತೆಯಾಗಲಿಲ್ಲ. ಶಂಕೆಗೊಂಡು ಚಾಲಕನ ಆಸನವನ್ನು ಕತ್ತರಿಸಿದಾಗ ಡ್ರಗ್ಸ್ ಪತ್ತೆಯಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೀಟಿನ ಕೆಳಗೆ ಹ್ಯಾಶ್ ಆಯಿಲ್, ಮಕ್ಕಳ ಆಟಿಕೆಯಲ್ಲಿ ಗಾಂಜಾ... ಬೆಂಗಳೂರಿಂದೆ ಕತೆ
ವಿಮಾನದಲ್ಲಿ ಡ್ರಗ್ಸ್ ಜಪ್ತಿ:
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಕ್ಕಳ ಆಟಿಕೆಯಲ್ಲಿ ಬಚ್ಚಿಟ್ಟು ಸಾಗಿಸುವಾಗ 3 ಲಕ್ಷ ರು. ಮೌಲ್ಯದ ಡ್ರಗ್ಸ್ ಅನ್ನು ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಕೆಐಎನಿಂದ ಅಮೇರಿಕಾಕ್ಕೆ ಸುಳ್ಳು ವಿಳಾಸ ನೀಡಿದ ಮಕ್ಕಳ ಆಟಿಕೆಯಲ್ಲಿ ಡ್ರಗ್ಸ್ ಸಾಗಾಣಿಕೆಗೆ ಆರೋಪಿಗಳು ಯತ್ನಿಸಿದ್ದರು. ಈ ಬಗ್ಗೆ ಖಚಿತ ಮಾಹಿತಿ ಅಧಿಕಾರಿಗಳು, ಆಟಿಕೆಗಳನ್ನು ಪರಿಶೀಲಿಸಿದಾಗ 3.68 ಲಕ್ಷ ಮೌಲ್ಯದ 230 ಗ್ರಾಂ ಗಾಂಜಾ ಪತ್ತೆಯಾಗಿದೆ.
