ಬೆಂಗಳೂರು(ಏ. 11)  ಕೋರಮಂಗಲ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು  ಮೂವರು ಕುಖ್ಯಾತ ಗಾಂಜಾ ಮಾರಾಟಗಾರರ ಬಂಧನ ಮಾಡಿದ್ದಾರೆ.

ಮಾರಪ್ಪ, ರವಿ,ಹಾಗೂ ರಾಜ ಕಿಶೋರ್ ನಾಯಕ್ ಬಂಧಿತ ಆರೋಪಿಗಳು ಅಂಧ್ರದಿಂದ ಗಾಂಜಾ ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ ಆರೋಪಿಗಳು ಸೆರೆ ಸಿಕ್ಕಿದ್ದಾರೆ.

ಖಚಿತ ಮಾಹಿತಿ ಆಧರಿಸಿ ಆರೋಪಿಗಳ ಬಂಧನ ಮಾಡಲಾಗಿದ್ದು 32 ಲಕ್ಷ ರೂ.  ಮೌಲ್ಯದ 84 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. 

ಇನ್ನೊಂದು ಕಡೆ ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದ ತನಿಖೆಯೂ ಮುಂದುವರಿದಿದ್ದು ಅದಕ್ಕೆ ಆಂಧ್ರ ಲಿಂಕ್ ಇದೆ. ಆಂಧ್ರ ಪ್ರದೇಶದ ಕೆಲ ನಟ-ನಟಿಯರು ಬೆಂಗಳೂರಿನಲ್ಲಿ ನಡೆಯುತ್ತಿದ್ದ ಪಾರ್ಟಿಗೆ ಬರುತ್ತಿದ್ದರು ಎನ್ನಲಾಗಿದೆ.