ಹಾಸನ: ಕೈದಿಗಳಿಗೆ ಸೇಬು, ಮೂಸಂಬಿಯಲ್ಲಿ ಗಾಂಜಾ ನೀಡುತ್ತಿದ್ದ ಮೂವರ ಸೆರೆ
ಸೇಬು ಹಾಗೂ ಮೂಸಂಬಿ ಹಣ್ಣನ್ನು ಕೊರೆದು ಅದರೊಳಗೆ ಗಾಂಜಾ ಸೊಪ್ಪನ್ನು ಇಟ್ಟು, ಸ್ಟಿಕ್ಕರ್ ಅಂಟಿಸಿ, ಹಣ್ಣುಗಳನ್ನು ಜೈಲಿನ ಹಿಂಬದಿಯಿಂದ ಕಾಂಪೌಂಡ್ ಒಳಗಡೆಗೆ ಎಸೆಯಲು ಇವರು ಹೊಂಚು ಹಾಕುತ್ತಿದ್ದ ಬಂಧಿತ ಆರೋಪಿಗಳು.
ಹಾಸನ(ಸೆ.06): ಸೇಬು ಹಾಗೂ ಮೂಸಂಬಿ ಹಣ್ಣಿನ ಒಳಗೆ ಗಾಂಜಾ ಸೊಪ್ಪು ಇಟ್ಟು ಜಿಲ್ಲಾ ಉಪ ಕಾರಾಗೃಹದಲ್ಲಿನ ಕೈದಿಗಳಿಗೆ ಗಾಂಜಾ ಪೂರೈಕೆ ಮಾಡಲು ಯತ್ನಿಸುತ್ತಿದ್ದ ಮೂವರನ್ನು ನಗರಠಾಣೆ ಪೊಲೀಸರು ಬಂಧಿಸಿದ್ದಾರೆ.
ಅಂಬೇಡ್ಕರ್ ನಗರದ ತರಕಾರಿ ವ್ಯಾಪಾರಿ ತಬ್ರೀಝ(28), ಪೆನ್‌ಷನ್ ಮೊಹಲ್ಲಾದ ಗುಜರಿ ಅಂಗಡಿ ವ್ಯಾಪಾರಿ ವಾಸಿಂ (21), ರಕೀಬ್ ಬಂಧಿತ ಆರೋಪಿಗಳು.
ಬೀದರ್: ಸಿನಿಮಿಯ ರೀತಿಯಲ್ಲಿ ಗಾಂಜಾ ಸಾಗಿಸುತ್ತಿದ್ದ ಖದೀಮರ ಬಂಧನ
ಸೇಬು ಹಾಗೂ ಮೂಸಂಬಿ ಹಣ್ಣನ್ನು ಕೊರೆದು ಅದರೊಳಗೆ ಗಾಂಜಾ ಸೊಪ್ಪನ್ನು ಇಟ್ಟು, ಸ್ಟಿಕ್ಕರ್ ಅಂಟಿಸಿ, ಹಣ್ಣುಗಳನ್ನು ಜೈಲಿನ ಹಿಂಬದಿಯಿಂದ ಕಾಂಪೌಂಡ್ ಒಳಗಡೆಗೆ ಎಸೆಯಲು ಇವರು ಹೊಂಚು ಹಾಕುತ್ತಿದ್ದರು. ಇದಕ್ಕಾಗಿ ಜೈಲಿನ ಸಮೀಪದ ಹಳೇಬಸವಣ್ಣ ವೃತ್ತದ ಬಳಿ ಆರೋಪಿಗಳು ಓಡಾಡುತ್ತಿದ್ದರು. ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಮೂವರನ್ನು ವಶಕ್ಕೆ ಪಡೆದ ಪೊಲೀಸರು, ಅವರ ಬಳಿಯಿದ್ದ ಬ್ಯಾಗ್ ಪರಿಶೀಲಿಸಿದಾಗ ಗಾಂಜಾ ತುಂಬಿದ್ದ 3 ಸೇಬು ಮತ್ತು 2 ಮೂಸಂಬಿ ಹಣ್ಣುಗಳು ಪತ್ತೆಯಾಗಿವೆ.