ಯುವತಿಯನ್ನ ರಕ್ಷಿಸಿ ಬೈದು ಬುದ್ದಿ ಹೇಳಿದ್ದಕ್ಕೆ ಮಚ್ಚಿನಿಂದ ಹಲ್ಲೆ ನಡೆಸಲಾಗಿತ್ತು. ಇಬ್ಬರು ಯುವಕರ ಮೇಲೆ ಮೂವರು ದುಷ್ಕರ್ಮಿಗಳು ಮನಸೋ ಇಚ್ಚೆ ದಾಳಿ ಮಾಡಿದ್ದ‌ರು. ಪೋಲೀಸರನ್ನ ಯಾಮಾರಿಸಿ ಕೋರ್ಟ್ ಗೆ ಸರೆಂಡರ್ ಆಗಲು ಯತ್ನಿಸುವ ವೇಳೆ ಆರೋಪಿಗಳು‌‌‌‌ ಖಾಕಿ ಬಲೆಗೆ ಬಿದ್ದಿದ್ದಾರೆ. 

ತುಮಕೂರು‌(ಸೆ.28): ಯುವಕರ ಮೇಲೆ ಲಾಂಗು ಮಚ್ಚಿನಿಂದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನ ಪೋಲೀಸರು ಬಂಧಿಸಿದ್ದಾರೆ. ತುಮಕೂರು ನಗರದ ಮರಳೂರು‌ ದಿಣ್ಣೆ ಬಳಿಯ ದೇವರಾಜು ಅರಸು ರಸ್ತೆಯಲ್ಲಿ ಘಟನೆ ನಡೆದಿತ್ತು. 

ಯುವತಿಯನ್ನ ರಕ್ಷಿಸಿ ಬೈದು ಬುದ್ದಿ ಹೇಳಿದ್ದಕ್ಕೆ ಮಚ್ಚಿನಿಂದ ಹಲ್ಲೆ ನಡೆಸಲಾಗಿತ್ತು. ಇಬ್ಬರು ಯುವಕರ ಮೇಲೆ ಮೂವರು ದುಷ್ಕರ್ಮಿಗಳು ಮನಸೋ ಇಚ್ಚೆ ದಾಳಿ ಮಾಡಿದ್ದ‌ರು. ಪೋಲೀಸರನ್ನ ಯಾಮಾರಿಸಿ ಕೋರ್ಟ್ ಗೆ ಸರೆಂಡರ್ ಆಗಲು ಯತ್ನಿಸುವ ವೇಳೆ ಆರೋಪಿಗಳು‌‌‌‌ ಖಾಕಿ ಬಲೆಗೆ ಬಿದ್ದಿದ್ದಾರೆ. ಆರೋಪಿಗಳಾದ ಕಬೀರ್ ಪಾಶ @ ಇರ್ಫಾನ್, ಶಾರುಖ್ ಖಾನ್, ರಿಹಾನ್ ಬಂಧಿತ ಆರೋಪಿಗಳು. 

ಸಾಲ ವಾಪಸ್ ಕೇಳಲು ಹೋದ ಬ್ಯಾಂಕ್ ಮ್ಯಾನೇಜರ್‌ಗೇ ಗನ್ ತೋರಿಸಿ ಬೆದರಿಕೆಯೊಡ್ಡಿದ ಭೂಪ!

ಕಳೆದ ಬುಧವಾರ ಘಟನೆ ನಡೆದಿತ್ತು. ಸಾಧಿಕ್ ಮತ್ತು ಇರ್ಫಾನ್ ಎಂಬುವರ ಮೇಲೆ ಮೂವರು ದುಷ್ಟರು.ಲಾಂಗ್ ಮಚ್ಚಿನಿಂದ ಹಲ್ಲೆ ನಡೆಸಿದ ಬಳಿಕ ಎಸ್ಕೇಪ್ ಆಗಿದ್ದರು. ಕೋರ್ಟ್ ಗೆ ಸೆರೆಂಡರ್ ಆಗುವ ಖಚಿತ ಮಾಹಿತಿ ಮೇರೆಗೆ ಕೋರ್ಟ್ ಬಳಿ ಜಯನಗರ ಪೊಲೀಸರು ಕಾಯುತ್ತಿದ್ದರು. ಈ ವೇಳೆ ಆರೋಪಿಗಳನ್ನ ಬಂಧಿಸಿದ್ದಾರೆ.