Bagalkot: ಅಕ್ರಮ ಜಾನುವಾರು ಸಾಗಾಟ: ಮೂವರ ಬಂಧನ

ಪಿಕ್‌ ಅಪ್‌ ವಾಹನದಲ್ಲಿ 5 ದನಗಳನ್ನು ತುಂಬಿಕೊಂಡು ಜಮಖಂಡಿ ಕಡೆಗೆ ಸಾಗಿಸುತ್ತಿರುವ ಮಾಹಿತಿ ಪಡೆದ ಪೊಲೀಸರು ಬನಹಟ್ಟಿ ಸಮೀಪದ ಯಲ್ಲಟ್ಟಿ ಗ್ರಾಮದ ನಿರುಪಾಧೀಶ್ವರ ಮಠದ ಹತ್ತಿರ ತಪಾಸಣೆ ನಡೆಸುವ ಸಂದರ್ಭ ಸಿಕ್ಕಿ ಬಿದ್ದ ಆರೋಪಿಗಳು 

Three Arrested For Illegal Cattle Trafficking at Rabakavi Banahatti in Bagalkot grg

ರಬಕವಿ-ಬನಹಟ್ಟಿ(ಮೇ.26):  ಅಕ್ರಮವಾಗಿ ಆಕಳು ಮತ್ತು ಕರುಗಳನ್ನು ಸಾಗಿಸುತ್ತಿರುವ ಖಚಿತ ಸುಳಿವಿನ ಮೇಲೆ ಬುಧವಾರ ಬೆಳಿಗ್ಗೆ ದಾಳಿ ನಡೆಸಿದ ಪೊಲೀಸರು ವಾಹನ ಸಮೇತ ಮೂವರು ಆರೋಪಿಗಳನ್ನು ಬಂಧಿಸಿದ್ದಲ್ಲದೇ 5 ದನಗಳನ್ನು ವಶಕ್ಕೆ ಪಡೆದಿದ್ದಾರೆ.

ಪಿಕ್‌ ಅಪ್‌ ವಾಹನದಲ್ಲಿ 5 ದನಗಳನ್ನು ತುಂಬಿಕೊಂಡು ಜಮಖಂಡಿ ಕಡೆಗೆ ಸಾಗಿಸುತ್ತಿರುವ ಮಾಹಿತಿ ಪಡೆದ ಪೊಲೀಸರು ಬನಹಟ್ಟಿ ಸಮೀಪದ ಯಲ್ಲಟ್ಟಿಗ್ರಾಮದ ನಿರುಪಾಧೀಶ್ವರ ಮಠದ ಹತ್ತಿರ ತಪಾಸಣೆ ನಡೆಸುವ ಸಂದರ್ಭ ಮೂವರು ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ. 

ಗಂಡನ ಬಿಟ್ಟು ಸೋಷಿಯಲ್ ಮೀಡಿಯಾ ಫ್ರೆಂಡ್ ಹಿಂದೆ ಹೋದ ಸುಂದರಿ, ಹೆಣವಾಗಿ ಸಿಕ್ಕಳು!

ಅಥಣಿ ತಾಲೂಕಿನ ಮಸಗುಪ್ಪಿ ಗ್ರಾಮದ ರಾವಸಾಬ ಶಂಕರ ಹಾರುಗೇರಿ, ಮಹಾರಾಷ್ಟ್ರದ ಕವಟೆ ಮಹಾಂಕಾಳ ತಾಲೂಕಿನ ಇಂಗನಗಾಂವ ಗ್ರಾಮದ ಸಾಗರ ಅರವಿಂದ ಲೊಂಡೆ ಹಾಗೂ ಅಶೋಕ ನಾಮದೇವ ಚೌಗಲೆ ಎಂಬುವರೇ ಜಾನುವಾರುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪಿಗಳಾಗಿದ್ದಾರೆ. ಅಕ್ರಮವಾಗಿ ಪರವಾನಿಗೆ ಪಡೆಯದೇ ಮಾಂಸದ ಉದ್ದೇಶಕ್ಕಾಗಿ ಸಾಗಣೆ ಮಾಡುತ್ತಿರುವುÜದಾಗಿ ಪೊಲೀಸರ ತನಿಖೆಯಲ್ಲಿ ಬಾಯ್ಬಿಟ್ಟಿದ್ದಾರೆ. ಈ ಪ್ರಕರಣದ ಕುರಿತು ಬನಹಟ್ಟಿಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದು, ಪಿ.ಎಸ್‌.ಐ. ರಾಘವೇಂದ್ರ ಖೋತ ತನಿಖೆ ಮುಂದುವರೆಸಿದ್ದಾರೆ.

Latest Videos
Follow Us:
Download App:
  • android
  • ios