ಸಾಹಿತಿ ಬಿ.ಎಲ್.ವೇಣುಗೆ ಬೆದರಿಕೆ ಕರೆ ಹಿನ್ನೆಲೆ; ಹೆಚ್.ಆಂಜನೇಯ, ಶಾಸಕ ಟಿ.ರಘುಮೂರ್ತಿ ವೇಣು ನಿವಾಸಕ್ಕೆ ಭೇಟಿ
- ಸಾಹಿತಿ, ಕಾದಂಬರಿಕಾರ ಬಿ.ಎಲ್ ವೇಣು ಅವರಿಗೆ ಮೂರು ಬೆದರಿಕೆ ಪತ್ರ!
- ವೇಣು ಮನೆಗೆ ಭೇಟಿ ನೀಡಿ ಧೈರ್ಯ ತುಂಬಿದ ಮಾಜಿ ಸಚಿವ ಹೆಚ್ ಆಂಜನೇಯ, ಹಾಲಿ ಶಾಸಕ ಟಿ. ರಘುಮೂರ್ತಿ
- ಬೆದರಿಕೆಗಳಿಗೆ ಅಂಜದಿರಿ, ನಿಮ್ಮ ಜತೆಗೆ ನಾವಿದ್ದೇವೆ ಎಂದ ಕಾಂಗ್ರೆಸ್ ನಾಯಕರು.
ವರದಿ: ಕಿರಣ್ಎಲ್ ತೊಡರನಾಳ್, ಏಷಿಯಾನೆಟ್ ಸುವರ್ಣನ್ಯೂಸ್
ಚಿತ್ರದುರ್ಗ (ಜು.26) :ಕಳೆದ ಎರಡು ತಿಂಗಳು ಗಳಿಂದಲೂ ಚಿತ್ರದುರ್ಗದ ಮೇರು ಸಾಹಿತಿ, ಕಾದಂಬರಿಕಾರ ಬಿ.ಎಲ್ ವೇಣು ಅವರಿಗೆ ಬೆದರಿಕೆ ಪತ್ರಗಳು ಬರ್ತಾನೆ ಇದ್ದಾವೆ. ಕೇವಲ ಎರಡು ತಿಂಗಳಲ್ಲಿಯೇ ಮೂರು ಬೆದರಿಕೆ ಪತ್ರಗಳು ಈಗಾಗಲೇ ವೇಣು ಅವರ ಚಿತ್ರದುರ್ಗ ನಗರದಲ್ಲಿರುವ ಕೆಳಗೋಟೆ ನಿವಾಸಕ್ಕೆ ಬಂದಿದ್ದಾವೆ. ಇದನ್ನೆಲ್ಲಾ ಮನಗಂಡ ಕಾಂಗ್ರೆಸ್ ನಾಯಕರು ಸಾಹಿತಿ ವೇಣು ಅವರ ಮನೆಗೆ ಭೇಟಿ ನೀಡಿ ನಿಮ್ಮ ಜೊತೆ ನಾವಿದ್ದೇವೆ ಧೈರ್ಯವಾಗಿರಿ ಎಂದು ಆತ್ಮ ಸ್ಥೈರ್ಯ ತುಂಬಿದರು.
ಚಿತ್ರದುರ್ಗ ಕಾಂಗ್ರೆಸ್ ನಾಯಕರಾದ(Chitradurga Congress Leaders) ಮಾಜಿ ಸಚಿವ ಹೆಚ್ ಆಂಜನೇಯ(Former Minister H.Anjaneyya) ಹಾಗೂ ಹಾಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಟಿ. ರಘುಮೂರ್ತಿ(Challakere MLA T.Raghumurthy) ವೇಣು ಅವರ ನಿವಾಸಕ್ಕೆ ಭೇಟಿ ನೀಡಿದರು. ನೀವು ನಮ್ಮ ಜಿಲ್ಲೆಯ ಸಾಹಿತ್ಯ( kannada literature) ಕ್ಷೇತ್ರದ ಹೆಮ್ಮೆ. ನೀವು ಇಂತಹ ಯಾವುದೇ ಬೆದರಿಕೆ ಪತ್ರ(Threat letter)ಗಳಿಗೆ ಅಂಜದಿರಿ, ನಿಮ್ಮ ಬೆನ್ನ ಹಿಂದೆ ನಾವು ಸದಾ ಇರುತ್ತೇವೆ ಎಂದು ಕೈ ನಾಯಕರು ಧೈರ್ಯ ತುಂಬಿದರು.
ಸಾಹಿತಿ, ಕಾದಂಬರಿಕಾರ ಬಿ.ಎಲ್ ವೇಣು ಗೆ ಮತ್ತೊಂದು ಬೆದರಿಕೆ ಪತ್ರ
ಇನ್ನೂ ಈ ವೇಳೆ ಮಾತನಾಡಿದ ಸಾಹಿತಿ ಬಿ.ಎಲ್ ವೇಣು(B.L.Venu) ಇಂತಹ ಬೆದರಿಕೆ ಪತ್ರಗಳು ಮೂರಲ್ಲ ನೂರು ಬಂದರೂ ನಾನು ಎದೆಗುಂದುವುದಿಲ್ಲ ಎಂದು ಗಟ್ಟಿ ಧ್ವನಿಯನ್ನು ಹೇಳಿದರು. ಜೊತೆಗೆ ರಾಜ್ಯದ ಹಲವು ಸಾಹಿತಿ, ಪ್ರಗತಿಪರ ಚಿಂತಕರಿಗೆ ಬೆದರಿಕೆ ಪತ್ರಗಳು ಬರುತ್ತಿದ್ದರೂ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ(CM Basavaraj Bommai) ಅವರು ಈ ಕುರಿತು ಯಾವುದೇ ಚಕಾರ ಎತ್ತದೇ ಇರುವುದು ವಿಷಾದನೀಯ. ಸಹಿಷ್ಣು ಹಿಂದೂ ಎಂಬ ಕೈ ಬರಹದಡಿ ಬೆದರಿಕೆ ಪತ್ರಗಳು ಬರುತ್ತಿದ್ದರೂ, ಅವರನ್ನು ಪತ್ತೆ ಮಾಡಲು ಇವರಿಗೆ ಇಷ್ಟು ದಿನ ಬೇಕಾದೀತೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಘಟನೆ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶಿರಾಮ(K.Parashiram) ಅವರು ಈಗಾಗಲೇ ವೇಣು ಅವರ ಮನೆಗೆ ಭೇಟಿ ನೀಡಿ, ನಿಮಗೆ ಸೂಕ್ತ ಭದ್ರತೆಯನ್ನು ನಾವು ಒದಗಿಸುತ್ತೇವೆ ಎಂದು ತಿಳಿಸಿದ್ದಾರೆ. ಅದರಂತೆ ನಮ್ಮ ನಿವಾಸಕ್ಕೆ ಸಿಸಿ ಕ್ಯಾಮರಗಳು ಹಾಗೂ ಗನ್ ಮ್ಯಾನ್ ಕೊಡುವುದಾಗಿ ಹೇಳಿದ್ದರು. ಆದ್ರೆ ಅಂಗರಕ್ಷಕರ ಭದ್ರತೆಯನ್ನು ನಾನು ಕಡಾ ಖಂಡಿತವಾಗಿ ನಿರಾಕರಿಸಿದ್ದೇನೆ. ಇಂತಹ ಬೆದರಿಕೆ ಬಂದರೂ ನನ್ನ ತತ್ವ ಸಿದ್ದಾಂತಗಳಿಂದ ನಾನು ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಮಾತೇ ಇಲ್ಲ, ನನ್ನ ಲೇಖನಿಗೆ ವಿಶ್ರಾಂತಿ ಕೊಡುವುದಿಲ್ಲ ಎಂದು ಖಡಕ್ ಆಗಿ ಬೆದರಿಕೆ ಪತ್ರ ಬರೆದವರಿಗೆ ಸಂದೇಶ ರವಾನಿಸಿದರು.
ಬಿಟಿ ಲಲಿತಾ ನಾಯಕ್‌ಗೆ ಕೊಲೆ ಬೆದರಿಕೆ ಪತ್ರ, ಟಾರ್ಗೆಟ್ ಲಿಸ್ಟ್‌ನಲ್ಲಿ ಮಾಜಿ ಸಿಎಂ ಹೆಸರು!
ಈ ಸಂದರ್ಭದಲ್ಲಿ ಮಾತನಾಡಿದ ಆಂಜನೇಯ, ವೇಣು ಅವರೇ ನಿಮ್ಮೊಟ್ಟಿಗೆ ನಾವು ಇದ್ದೇವೆ. ಎದೆಗುಂದಬೇಡಿ, ವ್ಯವಸ್ಥೆ ಕೆಡಿಸುವ ಸಮಾಜಘಾತುಕರನ್ನು ಹತ್ತಿಕ್ಕುವ ನಿಮ್ಮ ಲೇಖನ ಝಳಪಿಸಿ, ತಮ್ಮ ಅನಿಸಿಕೆಗಳನ್ನು ಹೇಳುವ ಅಧಿಕಾರ, ಅವಕಾಶವನ್ನು ಡಾ. ಬಿ.ಆರ್ ಅಂಬೇಡ್ಕರ್ ಅವರು ಕೊಟ್ಟಿದ್ದಾರೆ. ಬೆದರಿಕೆ ಪತ್ರಗಳನ್ನು ಬರೆಯುತ್ತಿರುವ ಬೆದರಿಕೆ ಕೋರರನ್ನು ಕೂಡಲೇ ಸರ್ಕಾರ ಪತ್ತೆ ಹಚ್ಚಬೇಕು ಎಂದು ಆಗ್ರಹಿಸಿದರು.
ಇನ್ನೂ ಶಾಸಕ ರಘುಮೂರ್ತಿ ಅವರು, ಸ್ಥಳದಲ್ಲೇ ಎಸ್ಪಿ ಕೆ.ಪರಶುರಾಮ ಅವರಿಗೆ ಕರೆ ಮಾಡಿ ತನಿಖೆಯ ಪ್ರಗತಿಯ ಬಗ್ಗೆ ವಿಚಾರಿಸಿದರು. ಪ್ರಕರಣ ಕುರಿತಂತೆ FIR ದಾಖಲಿಸಲಾಗಿದೆ. ಶಿವಮೊಗ್ಗ, ಅಜ್ಜಂಪುರ ಮತ್ತಿತರ ಕಡೆಗಳಿಂದ ಪತ್ರಗಳನ್ನು ಹಾಕಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸಿಸಿ ಕ್ಯಾಮರಾಗಳ ಪರಿಶೀಲನೆ ನಡೆದಿದೆ. ಬರಹಗಳ ಸ್ಯಾಂಪಲ್ ಅನ್ನು ಪರೀಕ್ಷೆಗೆ ಕಳಿಸಲಾಗಿದೆ. ಪ್ರಕರಣ ಸವಾಲಿನಿಂದ ಕೂಡಿದ್ದರೂ, ತಪ್ಪಿತಸ್ಥರನ್ನು ಶಿಘ್ರ ಪತ್ತೆ ಹಚ್ಚಲಾಗುವುದು ಎಂದು ಎಸ್ಪಿ ಕೆ.ಪರಶುರಾಮ ವಿಶ್ವಾಸ ವ್ಯಕ್ತಪಡಿಸಿದರು.........,