ಪೋಲೀಸರೆಂದು ಹೇಳಿಕೊಂಡು ಚಿನ್ನದ ಗಟ್ಟಿ ಖರೀದಿ ಮಾಡಲು ಬಂದ ಆಭರಣ ಮಳಿಗೆಯ ವ್ಯಾಪಾರಿಗಳಿಂದ 2 ಕೆಜಿ ಚಿನ್ನವನ್ನು ಖದೀಮರು ದೋಚಿ ಪರಾರಿ ಆಗಿರುವ ಘಟನೆ ಬೆಂಗಳೂರಿನ ಆನಂದರಾವ್ ಸರ್ಕಲ್‌ನಲ್ಲಿ ನಡೆದಿದೆ.
ಬೆಂಗಳೂರು (ಮಾ.13): ರಾಯಚೂರು ನಗರದ ಚಿನ್ನದ ಅಂಗಡಿ ವ್ಯಾಪಾರಸ್ಥರು ಗಟ್ಟಿ ಚಿನ್ನ ಖರೀದಿಗೆ ಬೆಂಗಳೂರಿಗೆ ಆಗಮಿಸಿದ್ದರು. 1.12 ಕೋಟಿ ರೂ. ಮೌಲ್ಯದ 2 ಕೆ.ಜಿ. 200 ಗ್ರಾಂ ತೂಕದ ಗಟ್ಟಿ ಚಿನ್ನವನ್ನು ಖರೀದಿಸಿ ವಾಪಾಸ್ ಹೋಗುವಾಗ ಪೊಲೀಸರೆಂದು ಹೇಳಿಕೊಂಡು ಬಂದ ಖದೀಮರು ಚಿನ್ನವನ್ನು ದೋಚಿ ಪರಾರಿ ಆಗಿದ್ದಾರೆ.
ರಾಜ್ಯ ರಾಜಧಾನಿ ಬೆಂಗಳೂರಿನ ಆನಂದ್ ರಾವ್ ಸರ್ಕಲ್ ಬಳಿಯೇ ಚಿನ್ನದ ವ್ಯಾಪಾರಸ್ಥರಿಂದ ಗಟ್ಟಿ ಚಿನ್ನವನ್ನು ದೋಚಿಕೊಂಡು ಹೋಗಿರುವ ಘಟನೆ ನಡೆದಿದೆ. ಒಟ್ಟು 1 ಕೋಟಿ 12 ಲಕ್ಷ ಮೌಲ್ಯದ 2 ಕೆಜಿ 200 ಗ್ರಾಂ ಚಿನ್ನದ ಗಟ್ಟಿಯನ್ನು ಅವರಿಂದ ದೋಚಿದ್ದಾರೆ. ರಾಯಚೂರಿನಿಂದ ಬೆಂಗಳೂರಿಗೆ ಚಿನ್ನ ಖರೀದಿಗೆ ಬಂದಿದ್ದವರ ಬಳಿ ಕಳ್ಳತನ ಮಾಡಲಾಗಿದ್ದು, ಸಂತ್ರಸ್ಥ ವ್ಯಾಪಾರಿಗಳನ್ನು ಅಬ್ದುಲ್ ರಜಾಕ್ ಹಾಗೂ ಮಲ್ಲಯ್ಯ ಎಂದು ಗುರುತಿಸಲಾಗಿದೆ.
ನಾಳೆಯಿಂದಲೇ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇ ಟೋಲ್ ಆರಂಭ: ಸರ್ವಿಸ್ ರಸ್ತೆ ಸಂಚಾರಕ್ಕೆ ಮುಕ್ತ
ಚಿನ್ನದ ಬ್ಯಾಗ್ ಹಿಡಿದುಕೊಂಡವರ ಮೇಲೆ ಕಣ್ಣು: ರಾಯಚೂರು ನಗರದಲ್ಲಿ ಅಬ್ದುಲ್ ರಜಾಕ್, ಮಲ್ಲಯ್ಯ ಹಾಗೂ ಸುನೀಲ್ ಎಂಬುವರು ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುತ್ತಾರೆ. ಮಾಲೀಕರ ಸೂಚನೆಯಂತೆ ಚಿನ್ನದ ಗಟ್ಟಿ ಖರೀದಿಗೆ ಬೆಂಗಳೂರಿಗೆ ಬಂದಿದ್ದರು. ಇನ್ನು ನಿಗದಿತ ದಿನದಂದು ತಮ್ಮ ಅಂಗಡಿ ಮಾಲೀಕರು ಸೂಚನೆ ನೀಡಿದಂತೆ ಬೆಂಗಳೂರಿನಲ್ಲಿ 2,200 ಗ್ರಾಂ ಚಿನ್ನ ಖರೀದಿ ಮಾಡಿದ್ದರು. ಅದನ್ನು ಹಿಡಿದುಕೊಂಡು ವಾಪಸ್ ಹೋಗುವಾಗ ಸುನೀಲ್ ಬಸ್ಸಿನಲ್ಲಿ ಕುಳಿತಿದ್ದನು. ಈ ವೇಳೆ ಆತನನ್ನು ಬಿಟ್ಟು ಅಬ್ದುಲ್ ರಜಾಕ್ ಹಾಗೂ ಮಲ್ಲಯ್ಯ ಚಿನ್ನದ ಗಟ್ಟಿ ಇರುವ ಬ್ಯಾಗ್ ಅನ್ನು ಹಿಡಿದುಕೊಂಡು ಶೌಚಾಲಯಕ್ಕೆ ಹೊರಟಿದ್ದರು.
ಜನನಿಬಿಡ ಸ್ಥಳಕ್ಕೆ ಕರೆದು ಚಿನ್ನ ಕಸಿದು ಪರಾರಿ: ಶೌಚಾಲಯಕ್ಕೆ ಹೊರಟಿದ್ದವರನ್ನು ತಡೆದ ಇಬ್ಬರು ತಾವು ಪೊಲೀಸರೆಂದು ನಕಲಿ ಐಡಿ ಕಾರ್ಡ್ ಅನ್ನು ತೋರಿಸಿ ಚಿನ್ನವನ್ನು ಹಿಡಿದುಕೊಂಡಿದ್ದವರನ್ನು ಕರೆದುಕೊಂಡು ಕತ್ತಲೆಯಿರುವ ಜನನಿಬಿಡ ಸ್ಥಳಕ್ಕೆ ಹೋಗಿದ್ದಾರೆ. ಅಲ್ಲಿ ಇಬ್ಬರ ಬಳಿಯಿದ್ದ ಚಿನ್ನದ ಬ್ಯಾಗ್‌ಗಳನ್ನು ಕಸಿದುಕೊಂಡಿದ್ದಾರೆ. ನೀವು, ಇದಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ತೆಗೆದುಕೊಂಡು ಜಿಲ್ಲಾಧಿಕಾರಿ ಕಚೇರಿಗೆ ಹೋಗುವಂತೆ ಹೇಳಿ ಹೊರಟು ಹೋಗಿದ್ದಾರೆ. ಇನ್ನು ಚಿನ್ನದ ಗಟ್ಟಿ ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತ ಸದ್ಯ ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಮಾಡಾಳ್ ವಿರುಪಾಕ್ಷಪ್ಪ ಜಾಮೀನು ರದ್ದುಗೊಳಿಸಿ: ಸುಪ್ರೀಂ ಕೋರ್ಟ್ ಮೊರೆಹೋದ ಲೋಕಾಯುಕ್ತ ಪೊಲೀಸರು
ಚಿನ್ನ ಖರೀದಿ ನೋಡಿಕೊಂಡೇ ಸಂಚು: ಇನ್ನು ರಾಯಚೂರಿನಿಂದ ಬಂದು ಚಿನ್ನದ ಗಟ್ಟಿಗಳನ್ನು ಖರೀದಿ ಮಾಡುವುದನ್ನು ನೋಡಿಕೊಂಡೇ ಖದೀಮರು ಈ ದುಷ್ಕೃತ್ಯ ಎಸಗಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ, ಚಿನ್ನ ಖರೀದಿ ವೇಳೆ ಅವರನ್ನು ಹಿಂಬಾಲಿಸಿದವರ ಬಗ್ಗೆ ಚಿನ್ನ ಖರಿದಿ ಅಂಗಡಿಯ ಸುತ್ತಲಿನ ಸಿಸಿ ಕ್ಯಾಮರಾಗಳು ಹಾಗೂ ಬಸ್‌ಗೆ ನಿಲ್ಲಿಸಿದ ಸ್ಥಳ ಹಾಗೂ ಮುನ್ನ ಶೌಚಾಲಯಕ್ಕೆ ಹೋಗುವ ಮುನ್ನ ಅವರನ್ನು ಹಿಂಬಾಲಿಸಿದ್ದರ ಬಗ್ಗೆ ಸುತ್ತಲಿನ ಸಿಸಿಟಿವಿ ಕ್ಯಾಮರಾಗಳನ್ನು ಪೊಲೀಸರು ಪರಿಶೀಲನೆ ಮಾಡಲು ಆರಂಭಿಸಿದ್ದಾರೆ.
