ಹುಬ್ಬಳ್ಳಿ(ಜೂ.15): ಒಎಲ್‌ಎಕ್ಸ್‌ನಲ್ಲಿ ಜಾಹೀರಾತು ನೋಡಿ ಮೊಬೈಲ್‌ ಖರೀದಿಸುವ ನೆಪದಲ್ಲಿ ಬಂದು ಮೊಬೈಲ್‌ ಕದ್ದು ಪರಾರಿಯಾಗುತ್ತಿದ್ದ ಇಬ್ಬರು ಯುವಕರನ್ನು ನವನಗರ ಎಪಿಎಂಸಿ ಠಾಣೆ ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ 8 ಮೊಬೈಲ್‌ ವಶಪಡಿಸಿಕೊಂಡಿದೆ. ಕೇಶ್ವಾಪುರದ ಮುಕ್ತಿಧಾಮ ಬಳಿಯ ಪಾಟೀಲಚಾಳ ನಿವಾಸಿ ಆಕಾಶ ಮುರಳಿಧರ ಮುದಲಿಯಾರ್‌ (20) ಹಾಗೂ ವಿದ್ಯಾನಗರದ ಶೆಟ್ಟರ್‌ ಲೇಔಟ್‌ ನಿವಾಸಿ ಆಕಾಶ ಮಾರುತಿ ಮೂಳೆ (20) ಬಂಧಿತರು.

ಇವರು ಹುಬ್ಬಳ್ಳಿ-ಧಾರವಾಡ ಮಹಾ ನಗರದಲ್ಲಿ ಓಎಲ್‌ಎಕ್ಸ್‌ನಲ್ಲಿ ಜಾಹೀರಾತು ನೋಡಿ ಮೊಬೈಲ್‌ ಖರೀದಿಸುವ ನೆಪದಲ್ಲಿ ಬಂದು ಸಾರ್ವಜನಿಕರಿಂದ ಬೆಲೆ ಬಾಳುವ ಮೊಬೈಲಗಳನ್ನು ಸುಲಿಗೆ ಮಾಡುತ್ತಿದ್ದರು. ನವನಗರ ಪೊಲೀಸರ ಬಲೆಗೆ ಬಿದ್ದ ಇವರಿಂದ ಒಟ್ಟು 286498ರು. ಮೌಲ್ಯದ 8 ಮೊಬೈಲ್‌ ಮತ್ತು ಕೃತ್ಯಕ್ಕೆ ಬಳಸಿದ ಒಂದು ಲಕ್ಷ ರು. ಕಿಮ್ಮತ್ತಿನ ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ವೀಕೆಂಡ್‌: ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಸಾಮಾನ್ಯ ಜನಸಂಚಾರ

ವಿಚಾರಣೆ ವೇಳೆ ಎಪಿಎಂಸಿ ನವನಗರ ಠಾಣಾ ವ್ಯಾಪ್ತಿಯ ಗಾಮನಗಟ್ಟಿಕರಿಯಮ್ಮದೇವಿ ಗುಡಿ ಹತ್ತಿರ, ಎಪಿಎಂಸಿ ಗೇಟ್‌ ಹತ್ತಿರ, ಹುಬ್ಬಳ್ಳಿ ದೇಸಾಯಿ ಸರ್ಕಲ್‌ ಹತ್ತಿರ ಧಾರವಾಡ ಎನ್‌ಟಿಟಿಎಫ್‌ ಹತ್ತಿರ, ಕೆಸಿಡಿ ಸರ್ಕಲ್‌ ಹತ್ತಿರ, ಮಾಳಮಡ್ಡಿ ರೋಡ ಬಾಗಲಕೋಟೆ ಪೆಟ್ರೋ​ಲ್‌ ಬಂಕ್‌ ಹತ್ತಿರ, ಸತ್ತೂರ ಉದಯಗಿರಿಯಲ್ಲಿ ಮೊಬೈಲಗಳನ್ನು ಸುಲಿಗೆ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಎಪಿಎಂಸಿ ಠಾಣೆ ಇನ್‌ಸ್ಪೆಕ್ಟರ್‌ ಪ್ರಭು ಬಿ.ಸೂರಿನ, ಎಎಸ್‌ಐ ಎಂ.ಎಚ್‌.ಶಿವರಾಜ ಅವರನ್ನು ಮಹಾನಗರ ಪೊಲೀಸ್‌ ಆಯುಕ್ತ ಆರ್‌.ದಿಲೀಪ್‌ ಶ್ಲಾಘಿಸಿ, ಬಹುಮಾನ ಘೋಷಿಸಿದ್ದಾರೆ.