ಬೆಂಗಳೂರು(ಜ.12): ನಿದ್ದೆಯಲ್ಲಿದ್ದ ಚಾಲ​ಕನ ಗಮನ ಬೇರೆಡೆ ಸೆಳೆ​ದ ನಾಲ್ವರು ಕಳ್ಳ​ರು ಕಾರು ಸಮೇತ ಪರಾ​ರಿ​ಯಾ​ಗಿ​ರುವ ಘಟನೆ ಇಂದಿ​ರಾ​ನ​ಗರ ಠಾಣಾ ವ್ಯಾಪ್ತಿ​ಯಲ್ಲಿ ನಡೆ​ದಿ​ದೆ.

ತಾವರೆಕೆರೆ ನಿವಾಸಿ ಲೋಕೇಶ್‌ (45) ಕಾರು ಕಳೆದುಕೊಂಡವರು. ಓಲಾ-ಊಬರ್‌ ಚಾಲಕರಾಗಿದ್ದ ಲೋಕೇಶ್‌ ಜ.8ರಂದು ತಡರಾತ್ರಿ 2.30ರಲ್ಲಿ ಕೆ.ಆರ್‌.ಪುರದಲ್ಲಿ ಪ್ರಯಾಣಿಕರನ್ನು ಇಳಿಸಿ ಅಲ್ಲಿಂದ ಮನೆಗೆ ಹೋಗು​ತ್ತಿ​ದ್ದರು. ಮಂಪರು ನಿದ್ರೆ ಹಿನ್ನೆಲೆಯಲ್ಲಿ ಇಂದಿರಾನಗರದ ಬೇಕರಿಯೊಂದ​ರ ಮುಂದೆ ಕಾರು ನಿಲ್ಲಿಸಿ ಕಾರಿನೊಳಗೆ ನಿದ್ರೆಗೆ ಜಾರಿದ್ದರು.

ಕಾರು ಅಪಘಾತ: ಸಚಿವರಿಗೆ ಗಂಭೀರ ಗಾಯ, ಪತ್ನಿ ಸೇರಿ ಇಬ್ಬರು ಸಾವು

ಮುಂಜಾನೆ 5ರ ವೇಳೆಗೆ ಅಪರಿಚಿತನೊಬ್ಬ ಚಾಲಕನನ್ನು ನಿದ್ರೆಯಿಂದ ಎಬ್ಬಿಸಿ ನಿಮ್ಮ ಕಾರಿನ ಕೀಯನ್ನು ಯಾರೋ ತೆಗೆದುಕೊಂಡು ಹೋಗಿದ್ದಾರೆ ಎಂದಿದ್ದು, ಲೋಕೇಶ್‌ನನ್ನು ಎಬ್ಬಿಸಿದ ವ್ಯಕ್ತಿ ಸಮೀಪದಲ್ಲಿದ್ದ ಕಟ್ಟಡವೊಂದರ ಬಳಿ ಕೀ ಹುಡುಕಲು ಕರೆ​ದೊಯ್ದಿ​ದ್ದಾನೆ. ಈ ವೇಳೆ ಆರೋಪಿ ಲೋಕೇಶ್‌ರ ಗಮನ ಬೇರೆಡೆ ಸೆಳೆದು ತನ್ನ ಸಹ​ಚ​ರರ ಜತೆ ಕಾರು ಸಮೇತ ಪರಾರಿಯಾಗಿದ್ದಾನೆ ಎಂದು ಪೊಲೀ​ಸರು ಹೇಳಿದ್ದಾರೆ.