ಬೆಂಗಳೂರಿನ(ಜ.27): ನಗರದ ಪ್ರಸಿದ್ಧ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಕಳ್ಳರು ತಮ್ಮ ಕೈಚೆಳಕ ತೋರಿದ ಘಟನೆ ಭಾನುವಾರ ರಾತ್ರಿ ನಡೆದಿದೆ. ಹೌದು, ಬ್ಯಾಟಾರಾಯನಪುರ ಮೈಸೂರು ರಸ್ತೆಯಲ್ಲಿರುವ ಗಾಳಿ ಆಂಜನೇಯ ದೇವಸ್ಥಾನದ ಕೌಂಟರ್‌ನ ಲಾಕರ್‌ನಲ್ಲಿದ್ದ 48 ಸಾವಿರ ರು. ನಗದನ್ನು ಕಳ್ಳರು ಕದ್ದು ಪರಾರಿಯಾಗಿದ್ದಾರೆ.  

ದೇವಸ್ಥಾನದ ಗೋಡೆಯ ಮೇಲಿಂದ ಒಳ ನುಗ್ಗಿದ ಕಳ್ಳರು ಕೌಂಟರ್‌ನಲ್ಲಿ ನಗದನ್ನು ಕದ್ದಿದ್ದಾರೆ. ಕಳ್ಳತನವಾದ ಹಣ ಧನುರ್ಮಾಸದ ಪ್ರಯುಕ್ತ ಇರುಮುಡಿಯಿಂದ ಬಂದ ಹಣ ಎಂದು ತಿಳಿದು ಬಂದಿದೆ. ಈ ಸಂಬಂಧ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದ ಟ್ರಸ್ಟ್‌ನಿಂದ ಮಂಜುನಾಥ ಅವರು ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಈ ಸಂಬಂಧ ಬ್ಯಾಟಾರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.