Asianet Suvarna News Asianet Suvarna News

ತೇರದಾಳ ಸಂತೆಯಲ್ಲಿ ಮೊಬೈಲ್ ಕಳ್ಳತನ ಯತ್ನ; ಕಳ್ಳನ ಹಿಡಿದು ಹಿಗ್ಗಾಮುಗ್ಗಾ ಥಳಿಸಿದ ಜನ!

ಸಂತೆಯಲ್ಲಿ ಮೊಬೈಲ್ ಕದಿಯುವ ವೇಳೆ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ಕಳ್ಳನಿಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಬಾಗಲಕೋಟೆ ಜಿಲ್ಲೆಯ ತೇರದಾಳ ಪಟ್ಟಣದಲ್ಲಿ ನಡೆದಿದೆ.

The thief was beaten by public after attempted mobile theft in teradal market at bagalkote rav
Author
First Published Jul 5, 2024, 11:53 PM IST

ಬಾಗಲಕೋಟೆ (ಜು.5): ಸಂತೆಯಲ್ಲಿ ಮೊಬೈಲ್ ಕದಿಯುವ ವೇಳೆ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ಕಳ್ಳನಿಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಬಾಗಲಕೋಟೆ ಜಿಲ್ಲೆಯ ತೇರದಾಳ ಪಟ್ಟಣದಲ್ಲಿ ನಡೆದಿದೆ.

ಜನಜಂಗುಳಿ ಇರುವ ತೇರದಾಳ ಸಂತೆ. ಇದನ್ನೇ ಬಂಡವಾಳ ಮಾಡಿಕೊಂಡಿದ್ದ ಖದೀಮ ಮೊಬೈಲ್ ದೋಚಲು ಸಂತೆಗೆ ಬಂದಿದ್ದಾನೆ. ಸಂತೆಯಲ್ಲಿ ವ್ಯಕ್ತಿಯೊಬ್ಬರ ಮೊಬೈಲ್ ಕಳ್ಳತನಕ್ಕೆ ಯತ್ನಿಸುವ ವೇಳೆ ಸಾರ್ವಜನಿಕ ಕೈಗೆ ಸಿಕ್ಕಿಬಿದ್ದಿರು ಖದೀಮ. ಕಳ್ಳನನ್ನು ಹಿಡಿಯುತಿದ್ದಂತೆ ಸುತ್ತುವರಿದ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಘಟನೆಯಲ್ಲಿ ಸಿಕ್ಕಿಬಿದ್ದ ಖದೀಮನಿಗೆ ಸಾರ್ವಜನಿಕರು ಥಳಿಸುತ್ತಿರುವ ದೃಶ್ಯ ಮೊಬೈಲ್ ನಲ್ಲಿ ವ್ಯಕ್ತಿಯೋರ್ವ ಸೆರೆಹಿಡಿದಿದ್ದು ಸೋಷಿಯಲ್ ಮೀಡಿಯಾದಲ್ಲಿ ಪರ-ವಿರೋಧ ಪ್ರತಿಕ್ರಿಯೆ ವ್ಯಕ್ತವಾಗಿವೆ.

ನಂಜನಗೂಡು: ತರಕಾರಿ ತುಂಬಿದ ಲಾರಿ ಪಲ್ಟಿ; ಮುಗಿಬಿದ್ದ ಸ್ಥಳೀಯರು!

ಹಿಂದಿನಿಂದಲೂ ಸಂತೆ ವೇಳೆ ಸಾರ್ವಜನಿಕರ ಮೊಬೈಲ್ ಕಳ್ಳತನ ನಡೆಯುತ್ತೇ ಇತ್ತು. ಪೊಲೀಸರು ಯಾವುದೇ ಕ್ರಮಕೈಗೊಳ್ತಿಲ್ಲ. ಇದರಿಂದ ಕಳ್ಳರಿಗೆ ಪೊಲೀಸರ ಭಯ ಇಲ್ಲದಂತಾಗಿದೆ ಎಂದು ತೇರದಾಳ ಪೊಲೀಸರ ವಿರುದ್ಧ ಸಾರ್ವಜನಿಕರಲ್ಲಿ ಅಸಮಾಧಾನವೂ ಇತ್ತು. ಹೀಗಾಗಿ ಪೊಲೀಸರಿಗೊಪ್ಪಿಸುವ ಬದಲು ಸಂತೆಯಲ್ಲಿ ನೆರೆದಿದ್ದ ಜನರೇ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

Latest Videos
Follow Us:
Download App:
  • android
  • ios