ಹೈದರಾಬಾದ್‌[ಡಿ.15]: ಮದ್ಯ ಸೇವನೆ ಮಾಡಿ ಬಂದ ಅಳಿಯನೊಬ್ಬ 48 ವರ್ಷ ವಯಸ್ಸಿನ ಅತ್ತೆಯ ಮೇಲೆಯೇ ಅತ್ಯಾಚಾರವೆಸಗಿದ ಘಟನೆ ತೆಲಂಗಾಣದ ಪುಂಜಗುಟ್ಟಾದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

34 ವರ್ಷ ವಯಸ್ಸಿನ ಅಳಿಯನೊಬ್ಬ ಅತ್ತೆ ಮಲಗಿರುವ ಕೋಣೆಗೆ ನುಗ್ಗಿ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಸ್ವತಃ ಅತ್ತೆಯೇ ಅಳಿಯನ ವಿರುದ್ಧ ದೂರು ನೀಡಿದ್ದಾರೆ. ದೌರ್ಜನ್ಯಕ್ಕೊಳಗಾದ ಮಹಿಳೆ ತನ್ನ ಮಗಳು ಮತ್ತು ಅಳಿಯನ ಜೊತೆಯಲ್ಲಿ ಕಳೆದ ಕೆಲವು ವರ್ಷಗಳಿಂದ ಒಂದೆ ಮನೆಯಲ್ಲೇ ವಾಸವಿದ್ದರು. ಪತ್ನಿ ಕೆಲಸಕ್ಕೆ ಹೋದ ಸಂದರ್ಭದಲ್ಲಿ ಅಳಿಯ ಈ ಕೃತ್ಯವೆಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳೆ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ. ಇಷ್ಟೆಲ್ಲಾ ರಾದ್ದಾಂತ ಮಾಡಿಕೊಂಡ ಅಳಿಯ ನೆಶೆ ಇಳಿದ ಬಳಿಕ ಪತ್ನಿಯ ಬಳಿ ಕ್ಷಮೆ ಕೇಳಿದ್ದಾಗಿಯೂ ಪೊಲೀಸರು ತಿಳಿಸಿದ್ದಾರೆ.