ಚೆನ್ನೈ(ನ.01) ಕ್ಷುಲ್ಲಕ ಕಾರಣಕ್ಕೆ ಹಲ್ಲೆಯಾಗುವ ವರದಿಗಳು ಪದೇ ಪದೇ ಬರುತ್ತಿರುತ್ತವೆ ಇದು ಅಂಥದ್ದೇ ಒಂದು ಪ್ರಕರಣ. ಕೋಳಿ ಮೊಟ್ಟೆಯನ್ನು ಸರಿಯಾಗಿ ಬೆಯಿಸಿಲ್ಲ ಎಂಬ ಕಾರಣಕ್ಕೆ ಹೋಟೆಲ್ ಮಾಲೀಕನ ಮೇಲೆ ವ್ಯಕ್ತಿಯೊಬ್ಬ ಚಾಕುವುನಿಂದ ಇರಿದಿದ್ದಾನೆ.

ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲಯಲ್ಲಿ ಘಟನೆ ವರದಿಯಾಗಿದೆ. ಕನಿಕಿಲುಪ್ಪೈ ಗ್ರಾಮದ ನಿವಾಸಿ ಎಸ್ ಸಾಯಿ ಯಾಸೀನ್ ಗುರುವಾರ ಇರುಂಬೆಡು ಗ್ರಾಮದ ಹೋಟೆಲ್‌ ಗೆ ಭೇಟಿ ನೀಡಿದ್ದಾನೆ. ಗೆಳೆಯ ವಿ ವಿ ಯುವರಾಜ್ (21)  ಸಹ ಜತೆಗಿದ್ದ. ಎಗ್ ಫ್ರೈಡ್ ರೈಸ್‌ಗೆ ಆರ್ಡರ್ ಮಾಡಿದ್ದಾನೆ.

ದಿನಕ್ಕೊಂದು ಮೊಟ್ಟೆ, ತುಂಬುವುದು ಹೊಟ್ಟೆ, ಏನಿದರ ಮರ್ಮ

ಅದರಂತೆ ಹೋಟೆಲ್ ನವರು ಆಹಾರ ನೀಡಿದ್ದಾರೆ. ಯಾಸೀನ್  ಇದು ಸರಿ ಹೋಗಿಲ್ಲ.  ಮೊಟ್ಟೆ ಸರಿಯಾಗಿ ಬೆಂದಿಲ್ಲ ಎಂದು ಕ್ಯಾತೆ ತೆಗೆದಿದ್ದಾನೆ. ಹೋಟೆಲ್ ಮಾಲೀಕ ಸಿ ಸತ್ಯರಾಜ್ (25)  ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ ಸತ್ಯರಾಜ್ ಹೊಟ್ಟೆಗೆ ಗಾಯವಾಗಿದೆ. ಗಲಾಟೆ ಕೇಳಿದ ಸ್ಥಳೀಯರು ಒಂದಾಗಿ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.