ಚೆನ್ನೈ(ಏ.  15) ಇದೊಂದು ವಿಚಿತ್ರ ಸ್ಟೋರಿ.. ಮೂಢನಂಬಿಕೆ ಎಂದರೆ ಅಡ್ಡಿ ಇಲ್ಲ.  ಸೂಪರ್ ಪವರ್ ಸಿಗುತ್ತದೆ ಎನ್ನುವ ಕಾರಣಕ್ಕೆ ಗಂಡನ ಒಪ್ಪಿಗೆ ಪಡೆದುಕೊಂಡ ಪತ್ನಿ ಮತ್ತೊಬ್ಬ ಮಹಿಳೆಯನ್ನು ಮದುವೆಯಾಗಿದ್ದಾಳೆ! ಜತೆಗೆ ಮಕ್ಕಳನ್ನು ಬಲಿಕೊಡಲು ಮುಂದಾಗಿದ್ದರು..

ರಾಮಲಿಂಗಂ(42) ಮತ್ತು ಪತ್ನಿ ರಂಜಿತಾ(32)  ತಮಿಳುನಾಡಿನ ಈರೋಡ್ ಜಿಲ್ಲೆಯ ರೈಲ್ ನಗರದವರು. ಇವರಿಗೆ ದೀಪಕ್(16)  ಕಿಶಾಂತ್ (6) ಎಂಬ ಇಬ್ಬರು ಮಕ್ಕಳು ಇದ್ದಾರೆ.   ಸೀರೆ ಉದ್ಯಮಿಯಾಗಿರುವ ರಾಮಲಿಂಗಂ ಇಂದುಮತಿ ಎಂಬ ಮತ್ತೊಬ್ಬಳನ್ನು ಮದುವೆಯಾಗಿದ್ದಾನೆ.

ರಾಮಲಿಂಗಂ ಇಬ್ಬರು ಪತ್ನಿಯರಿಗೆ ಬೇರೆ ಬೇರೆ ಮನೆ ಮಾಡಿಕೊಟ್ಟಿದ್ದ. ಇದೆಲ್ಲದರ ನಡುವೆ ಧನಲಕ್ಷ್ಮಿ ಎಂಬಾಕೆಯ ಜತೆ ಇಂದುಮತಿಗೆ ಸ್ನೇಹ ಬೆಳೆದಿದೆ. ಅತೀಂದ್ರೀಯ ಶಕ್ತಿಗಳ ಮೇಲೆ ಅಪಾರ ನಂಬಿಕೆ  ಇಟ್ಟುಕೊಂಡಿದ್ದ ಮಹಿಳೆಯರು ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದಾರೆ.  ಗಂಡನ ಬಳಿ  ಒಪ್ಪಿಗೆಯನ್ನು ಇಂದುಮತಿ ಕೇಳಿದ್ದಾಳೆ.

ಪುನರ್ ಜನ್ಮ ನಂಬಿ ಹೆತ್ತ ಮಕ್ಕಳನ್ನೇ ಬಲಿ ಕೊಟ್ಟ ರಕ್ಕಸ ಪೋಷಕರು

ಮಕ್ಕಳ ಮುಂದೆಯೇ ರಾಮಲಿಂಗಂ ಇಬ್ಬರೂ ಹೆಂಗಸರಿಗೆ ಮದುವೆ ಮಾಡಿಸಿದ್ದಾನೆ.  ಮದುವೆಯ ನಂತರ ಮಕ್ಕಳ ಮೇಲೆ ಹಿಂಸೆ ಶುರುವಾಗಿದೆ. ಕಾರಣವಿಲ್ಲದೆ ದಂಡಿಸುವುದು, ಸಾನಿಟೈಸರ್ ಕುಡಿಸುವುದು, ಮಕ್ಕಳಿಗೆ ಹೊಡೆಯುವುದು ಎಲ್ಲ ಆರಂಭವಾಗಿದೆ.

ಇದೆಲ್ಲ ವಿಕೋಪಕ್ಕೆ ಹೋಗಿದ್ದು ಇಬ್ಬರು ಮಹಿಳೆಯರು ಸೇರಿ ಮಕ್ಕಳನ್ನು ಬಲಿಕೊಡುವ ನಿರ್ಧಾರಕ್ಕೆ ಬಂದಿದ್ದಾರೆ. ಮಕ್ಕಳಿಗೆ ಈ ವಿಚಾರ ಹೇಗೋ ತಿಳಿದು ತಾತನ ಬಳಿ ಓಡಿಬಂದು ಎಲ್ಲವನ್ನು  ಹೇಳಿಕೊಂಡಿದ್ದಾರೆ.

ಬಳಿಕ ಪೊಲೀಸರ ಮೊರೆ ಹೋಗಲಾಗಿದ್ದು ಮಹಿಳೆಯರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.  ಕೆಲ ದಿನಗಳ ಹಿಂದೆ ಆಂಧ್ರಪ್ರದೇಶದಲ್ಲಿ ವಯಸ್ಸಿಗೆ ಬಂದ ಹೆಣ್ಣು ಮಕ್ಕಳನ್ನು  ಬಲಿ ಕೊಟ್ಟಿದ್ದರು.