ರಾಮನಗರ: ನೀರಿನ ತೊಟ್ಟಿ ಗೋಡೆ ಕುಸಿದು ವಿದ್ಯಾರ್ಥಿ ಸಾವು; ಇನ್ನೋರ್ವ ಗಂಭೀರ ಗಾಯ

ನೀರಿನ ತೊಟ್ಟಿ ಕುಸಿದು ವಿದ್ಯಾರ್ಥಿ ಸಾವನ್ನಪ್ಪಿರುವ ದುರ್ಘಟನೆ ರಾಮನಗರದ ಎಚ್.ಗೊಲ್ಲಹಳ್ಳಿ ಗ್ರಾಮದಲ್ಲಿ ಬೆಳಗ್ಗೆ ನಡೆದಿದೆ. ವಿದ್ಯಾರ್ಥಿ ಕೌಶಿಕ್ ಮೃತ ವಿದ್ಯಾರ್ಥಿ

Student dies after water tank wall collapses in gollahalli at ramanagar rav

ವರದಿ-ಜಗದೀಶ್ ಏಷ್ಯಾನೆಟ್ ಸುವರ್ಣನ್ಯೂಸ್, ರಾಮನಗರ

ರಾಮನಗರ (ಸೆ.21):
ನೀರಿನ ತೊಟ್ಟಿ ಕುಸಿದು ವಿದ್ಯಾರ್ಥಿ ಸಾವನ್ನಪ್ಪಿರುವ ದುರ್ಘಟನೆ ರಾಮನಗರದ ಎಚ್.ಗೊಲ್ಲಹಳ್ಳಿ ಗ್ರಾಮದಲ್ಲಿ ಬೆಳಗ್ಗೆ ನಡೆದಿದೆ.

ವಿದ್ಯಾರ್ಥಿ ಕೌಶಿಕ್ ಮೃತ ವಿದ್ಯಾರ್ಥಿ. ಗೊಲ್ಲಹಳ್ಳಿ ಗ್ರಾಮದಲ್ಲಿರು ಮೊರಾರ್ಜಿ ವಸತಿ ಶಾಲೆಯಲ್ಲಿ 6 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಕೌಶಿಕ್ . ಹಾಸ್ಟೆಲ್ ಹೊರ ಭಾಗದಲ್ಲಿ ನಿರ್ಮಾಣವಾಗಿರುವ ನೀರಿನ ಸಿಮೆಂಟ್ ತೊಟ್ಟಿ  ಈ ತೊಟ್ಟಿಗೆ ನಲ್ಲಿಗಳನ್ನ ಅಳವಡಿಸಲಾಗಿತ್ತು. ವಿದ್ಯಾರ್ಥಿಗಳು ಬೆಳಗ್ಗೆ ಮುಖ ತೊಳೆದುಕೊಳ್ಳಲು ಇದೆ ತೊಟ್ಟಿಯ ಬಳಿ ಹೋಗಿದ್ದಾರೆ. 

ಬೆಳಗ್ಗೆ  ಸುಮಾರು 40 ವಿದ್ಯಾರ್ಥಿಗಳು ಜೊತೆಯಲ್ಲಿ ಹೋಗಿ ಮುಖ ತೊಳೆದುಕೊಂಡು‌ ಬಂದಿದ್ರು. ನಂತರ ಸ್ನೇಹಿತರಿಬ್ಬರ ಜೊತೆ ಕೌಶಿಕ್ ಹಾಗೂ ತೊಟ್ಟಿಯ ಬಳಿ ಹೋದಾಗ ತೊಟ್ಟಿಯ ಎರಡು ಕಡೆಯ ಗೋಡೆ ಒಮ್ಮೆಲೆ ಕುಸಿದಿದೆ. ಗೋಡೆ ಕೌಶಿಕ್ ಮೇಲೆ ಬಿದ್ದ ಪರಿಣಾಮ ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ. ಮತ್ತೋರ್ವನ ಕಾಲಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ.

 

ಟ್ರೆಡ್‌ಮಿಲ್‌ನಲ್ಲಿ ಓಡುತ್ತಿದ್ದ ವ್ಯಕ್ತಿ ಹಾರ್ಟ್‌ಅಟ್ಯಾಕ್‌ನಿಂದ ಸಾವು, ಹೃದಯ ವಿದ್ರಾವಕ ಕ್ಷಣ ಸಿಸಿಟಿವಿಯಲ್ಲಿ ಸೆರೆ

ಮೃತ ವಿದ್ಯಾರ್ಥಿಯ ಶವವನ್ನ ದಯಾನಂದ ಆಸ್ಪತ್ರೆ ಶವಗಾರಕ್ಕೆ ರವಾನೆ ಮಾಡಲಾಗಿದೆ. ಬಿಡದಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Latest Videos
Follow Us:
Download App:
  • android
  • ios