ಬೆಂಗಳೂರು(ಮಾ.14): ಹಾಸ್ಟೆಲ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ‌ವಿದ್ಯಾರ್ಥಿಯೊಬ್ಬನ ಶವ ಪತ್ತೆಯಾದ ಘಟನೆ ನಗರದ ವರ್ತೂರಿಗೆ ಸಮೀಪವಿರುವ ಕೃಪಾನಿಧಿ ಕಾಲೇಜಿನ ಹಾಸ್ಟೆಲ್‌ನಲ್ಲಿ ಇಂದು(ಭಾನುವಾರ) ನಡೆದಿದೆ. ಆಂಧ್ರ ಮೂಲದ ಮೊಕ್ಷಗುಂಡ ರೆಡ್ಡಿ (20) ಮೃತ ವಿದ್ಯಾರ್ಥಿಯಾಗಿದ್ದಾನೆ. ವಿದ್ಯಾರ್ಥಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದರಿಂದ ಇದು ಕೊಲೆಯೋ? ಅಥವಾ ಆತ್ಮಹತ್ಯೆಯೋ ಎಂಬ ಅನುಮಾನ ವ್ಯಕ್ತವಾಗಿದೆ.

ಹಾಸ್ಟೆಲ್‌ನಲ್ಲಿ ಕೊಳೆತೆ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಮೂರು ದಿನಗಳಿಂದೆಯೇ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಮೊಕ್ಷಗುಂಡ ರೆಡ್ಡಿ ಕಳೆದ‌ ನಾಲ್ಕು ದಿನಗಳಿಂದ ಆಂಧ್ರದಲ್ಲಿದ್ದ ಪೋಷಕರಿಗೆ ಫೋನ್‌ ಮಾಡಿರಲಿಲ್ಲ ಎಂದು ತಿಳಿದು ಬಂದಿದೆ. ಹೀಗಾಗಿ ಅನುಮಾನಗೊಂಡ ಮೊಕ್ಷಗುಂಡ ರೆಡ್ಡಿ ಅವನ ಪೋಷಕರು ಬೆಂಗಳೂರಿನಲ್ಲಿದ್ದ ಸ್ನೇಹಿತರಿಗೆ ಮಗ ಫೋನ್‌ ಮಾಡದ ಬಗ್ಗೆ ವಿಷಯ‌ ತಿಳಿಸಿದ್ದರು.

ಮೈಸೂರು ವಿವಿ ಹಾಸ್ಟೆಲ್‌ನಲ್ಲಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿ ಆತ್ಮಹತ್ಯೆ

ಕೊನೆಗೆ ಪೋಷಕರು ಹಾಗೂ ಸ್ನೇಹಿತರು ಕಾಲೇಜಿಗೆ ಬಂದು ವಿದ್ಯಾರ್ಥಿ ಬಗ್ಗೆ ವಿಚಾರಿಸಿದಾಗ ಕೊಠಡಿ ತೆರೆದು ನೋಡಿದಾಗ ಮೊಕ್ಷಗುಂಡ ರೆಡ್ಡಿ  ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದಾನೆ. ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿ ಊಟಕ್ಕೆ ಬರೆದಿದ್ದಾಗಲಾದ್ರೂ‌ ವಿದ್ಯಾರ್ಥಿ ಬಗ್ಗೆ ಗಮನಹರಿಸಬೇಕಿತ್ತೇಂದು ಮೃತ ಮೊಕ್ಷಗುಂಡ ರೆಡ್ಡಿ  ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ವರ್ತೂರು ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.