Asianet Suvarna News Asianet Suvarna News

ಚೆನ್ನಾಗಿ ಓದುವಂತೆ ತಾಯಿ ಬುದ್ದಿ ಹೇಳಿದ್ದಕ್ಕೆ ​ಮಗಳು ಆತ್ಮಹತ್ಯೆ!

ಚೆನ್ನಾಗಿ ಓದುವಂತೆ ತಾಯಿ ಬುದ್ದಿವಾದ ಹೇಳಿದ್ದಕ್ಕೆ ಮನನೊಂದ ಮಗಳು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರದಲ್ಲಿ ನಡೆದಿದ್ದು, ಮೃತದೇಹ ಪತ್ತೆಯಾಗಿದೆ. 

student committed suicide at chikkaballapur gvd
Author
First Published Jul 30, 2023, 11:01 PM IST

ಚಿಕ್ಕಬಳ್ಳಾಪುರ (ಜು.30): ಚೆನ್ನಾಗಿ ಓದುವಂತೆ ತಾಯಿ ಬುದ್ದಿವಾದ ಹೇಳಿದ್ದಕ್ಕೆ ಮನನೊಂದ ಮಗಳು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರದಲ್ಲಿ ನಡೆದಿದ್ದು, ಮೃತದೇಹ ಪತ್ತೆಯಾಗಿದೆ. ಗೌರಿಬಿದನೂರು ನಗರದ ಸುಮಂಗಲಿ ಬಡಾವಣೆಯ ವಿಜಯ್‌ ಕುಮಾರ್‌ ಹಾಗೂ ಭವ್ಯ ದಂಪತಿಯ ಪುತ್ರಿ 15 ವರ್ಷದ ವಿದ್ಯಾಶ್ರೀ ಮೃತ ದುರ್ದೈವಿ. ನಗರದ ಖಾಸಗಿ ಶಾಲೆಯಲ್ಲಿ ಈಕೆ ಹತ್ತನೆ ತರಗತಿಯಲ್ಲಿ ಓದುತ್ತಿದ್ದಳು. ಇದೇ ಶಾಲೆಯಲ್ಲೇ ತಾಯಿ ಶಿಕ್ಷಕಿಯಾಗಿದ್ದರು.

ವಿದ್ಯಾಶ್ರೀ ಓದಿನ ಕಡೆ ಲಕ್ಷ್ಯ ನೀಡದೆ ಯಾವಾಗಲು ಮೊಬೈಲ್‌ನಲ್ಲಿ ಆಟವಾಡುತ್ತಿದ್ದಳು ಎನ್ನಲಾಗಿದೆ. ಶುಕ್ರವಾರ ತಡರಾತ್ರಿ ಆಟವಾಡುತ್ತಿದ್ದ ಮಗಳಿಗೆ ಓದುವಂತೆ ತಾಯಿ ಬುದ್ಧಿವಾದ ಹೇಳಿದ್ದಾರೆ. ಓದದಿದ್ದರೆ ಮನೆ ಬಿಟ್ಟು ಹೋಗುವಂತೆ ತಾಕೀತು ಮಾಡಿದ್ದಾರೆ. ಇದೇ ಮಾತನ್ನು ಬಹಳ ಗಂಭೀರವಾಗಿ ತೆಗೆದುಕೊಂಡ ವಿದ್ಯಾಶ್ರೀ ಸೀದಾ ಮನೆಯಿಂದ ಹೊರ ಹೋಗಿ ಗೌರಿಬಿದನೂರು ನಗರದ ಬೈಪಾಸ್‌ ರಸ್ತೆಯ ಉತ್ತರ ಪಿನಾಕಿನ ನದಿಯ ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ತಿರುಪತಿ, ಗೋವಾ, ಹೈದರಾಬಾದ್‌ಗೂ ವಿಮಾನ ಹಾರಾಟಕ್ಕೆ ಅನುಮತಿ: ಸಂಸದ ರಾಘ​ವೇಂದ್ರ

ಇತ್ತ ತಡರಾತ್ರಿ ಮಗಳಿಗಾಗಿ ಪೋಷಕರು ಎಲ್ಲ ಕಡೆ ಹುಡುಕಾಟ ನಡೆಸಿದರೂ ಸಿಕ್ಕಿಲ್ಲ. ಬಳಿಕ ಗೌರಿಬಿದನೂರು ಪುರ ಪೋಲಿಸ್‌ ಠಾಣೆಗೆ ಮಗಳು ಕಾಣೆಯಾದ ಬಗ್ಗೆ ದೂರು ದಾಖಲಿಸಿದ್ದಾರೆ. ಆದರೆ ಶುಕ್ರವಾರ ಆಕೆಯ ಮೃತದೇಹ ಉತ್ತರ ಪಿನಾಕಿನಿ ನದಿಯ ನೀರಿನಲ್ಲಿ ಪತ್ತೆಯಾಗಿದೆ. ಘಟನೆ ಸಂಬಂಧ ಸ್ಥಳಕ್ಕೆ ಗೌರಿಬಿದನೂರು ಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಅನುಮಾನಸ್ಪದ ಸಾವು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.

ಕಿರುಕುಳ ತಾಳದೆ ವಿದ್ಯಾರ್ಥಿ ಆತ್ಮಹತ್ಯೆ: ನಗರದ ದುಬೈ ಕಾಲೋನಿಯ ಸಂಜಯ ಗಾಂಧಿ ನಗರದ ನಂದೀಶ ಶಿವಾನಂದಯ್ಯ ಹಿರೇಮಠ (17) ಎಂಬ ವಿದ್ಯಾರ್ಥಿಯೇ ಆತ್ಮಹತ್ಯೆಗೆ ಶರಣಾಗಿದ್ದಾನೆ. ನಂದೀಶ ಮನೆಯಲ್ಲಿ ಯಾರ ಗಮನಕ್ಕೆ ತರದೆ 7 ಗ್ರಾಂ.ಬಂಗಾರವನ್ನು ತೆಗೆದುಕೊಂಡು ಹೋಗಿ ಸಂತೋಷ ಕಾಮನಳ್ಳಿ ಎಂಬಾತನಿಗೆ ಕೊಟ್ಟಿದ್ದು, ಸಂತೋಷ ಕಾಮನಳ್ಳಿ ಈ ಆಭರಣ ಮಾರಿ ನಂದೀಶಗೆ .10 ಸಾವಿರ ನೀಡಿದ್ದಾನೆ. ಈ ಹಣದಲ್ಲಿ ನಂದೀಶ ಮೊಬೈಲ್‌ ಖರೀದಿಸಿದ್ದು, ನಂದೀಶ ಬಳಿ ಮೊಬೈಲ್‌ ನೋಡಿದ ಆತನ ಪಾಲಕರು ವಿಚಾರಿಸಿದಾಗ ಮನೆಯಲ್ಲಿದ್ದ ಬಂಗಾರ ತೆಗೆದುಕೊಂಡು ಹೋಗಿ ಸಂತೋಷ ಕಾಮನಳ್ಳಿಗೆ ಕೊಟ್ಟಿದ್ದಾಗಿ ಆತ ಅದನ್ನು ಮಾರಿ ತನಗೆ 10 ಸಾವಿರ ರು. ನೀಡಿದ್ದಾಗಿ ಆ ಹಣದಲ್ಲಿ ಮೊಬೈಲ್‌ ಖರೀದಿಸಿದ್ದಾಗಿ ತಿಳಿಸಿದ್ದಾನೆ.

ಈ ಬಾರಿ ಮೈಸೂರಿನಲ್ಲಿ ಬಿತ್ತನೆ ಬೀಜದ ಕೊರತೆ ಇಲ್ಲ: ಸಚಿವ ಮಹದೇವಪ್ಪ

ಈ ಬಗ್ಗೆ ನಂದೀಶ ತಂದೆ ಸಂತೋಷ ಕಾಮನಳ್ಳಿಯನ್ನು ವಿಚಾರಿಸಿ ಬಂಗಾರದ ಆಭರಣ ಮಾರಿದ ಮೇಲೆ ಇನ್ನುಳಿದ ಮೇಲಿನ ಹಣ ನೀಡುವಂತೆ ಕೇಳಿದ್ದಾರೆ. ಆಗ ಸಂತೋಷ ಮೇಲಿನ ಹಣ ಎಲ್ಲಿಂದ ಬರುತ್ತೆ, ಬರುವುದಿಲ್ಲ ಎಂದಿದ್ದಾನೆ. ಇದಾದ ನಂತರ ಸಂತೋಷ ನಂದೀಶಗೆ ನಿಮ್ಮ ತಂದೆ ಹಣ ಕೇಳುತ್ತಿದ್ದಾರೆ ಅವರಿಗೆ ನಾನು ಹಣ ವಾಪಸ್‌ ಕೊಡುತ್ತೇನೆ, ನಾನು ನಿನಗೆ ಕೊಟ್ಟ10 ಸಾವಿರ ರು. ವಾಪಸ್‌ ಕೊಡಬೇಕು ಇಲ್ಲದಿದ್ದರೆ ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.

Follow Us:
Download App:
  • android
  • ios